ಗಿರೀಶ್‌ ಮೂಲಿಮನಿ ನಿರ್ದೇಶನದ ‘ಭುವನಂ ಗಗನಂ’ ಇಂದು ತೆರೆಗೆ. ಪ್ರಮೋದ್‌, ಪೃಥ್ವಿ ಅಂಬಾರ್‌, ರೇಚೆಲ್‌ ಡೇವಿಡ್‌, ಅಶ್ವಥಿ ಅವರು ನಟಿಸಿರುವ ಸಿನಿಮಾ. ಹೊಸತನದಿಂದ ಕೂಡಿದ ಕೌಟುಂಬಿಕ ಚಿತ್ರು ಇದು ಅಂತಾರೆ ನಾಯಕ ನಟ ಪ್ರಮೋದ್‌.

ಆರ್. ಕೇಶವಮೂರ್ತಿ

* ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣಗಳೇನು?
ಈ ರೀತಿಯ ಜರ್ನಿ ಸಿನಿಮಾ ಮಾಡಿಲ್ಲ, ಲವ್‌ ಕತೆ ಬೇಕಿತ್ತು, ನನ್ನ ಕ್ಯಾರೆಕ್ಟರ್‌ ಕೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು, ಪೃಥ್ವಿ ಅಂಬಾರ್‌ ಪಾತ್ರ ಭಿನ್ನವಾಗಿತ್ತು, ಕ್ಲೈಮ್ಯಾಕ್ಸ್‌ ಹೊಸತನದಿಂದ ಕೂಡಿತ್ತು.

* ಕತೆ ಕೇಳಿದಾಗ, ಈಗ ಸ್ಕ್ರೀನ್‌ ಮೇಲೆ ನೋಡಿದಾಗ ಏನನಿಸಿತು?
ಕೆಲವೊಮ್ಮೆ ಕತೆ ಹೇಳುವಾಗ ಚೆನ್ನಾಗಿ ಹೇಳಿರುತ್ತಾರೆ. ಅದು ತೆರೆ ಮೇಲೆ ಬಂದಾಗ ಹೇಳಿದಂತೆ ಇರಲ್ಲ. ಆದರೆ, ಈ ಚಿತ್ರ ಆ ರೀತಿಯ ಅಪವಾದದಿಂದ ದೂರ. ಕಾಗದಿಂದ ತೆರೆಗೆ ತರುವಲ್ಲಿನ ಪ್ರಕ್ರಿಯೆ ತುಂಬಾ ಚೆನ್ನಾಗಿ ನಡೆದಿದೆ. ನಾನೇ ಐದಾರು ಸಲ ಈ ಸಿನಿಮಾ ನೋಡಿ ಖುಷಿ ಪಟ್ಟಿದ್ದೇನೆ. ನಿರ್ದೇಶಕರು ನನಗೆ ಹೇಳಿದಂತೆಯೇ ಕತೆಯನ್ನು ತೆರೆ ಮೇಲೆ ತಂದಿದ್ದಾರೆ.

ಸಿದ್ಲಿಂಗು 2ನಲ್ಲಿ ಸೀತಮ್ಮ, ನಿವೇದಿತಾ, ವಿಶಾಲು, ಆಂಡಾಳಮ್ಮ ಎಲ್ಲಾ ಇದ್ದಾರೆ: ಲೂಸ್‌ ಮಾದ ಯೋಗಿ

* ಇದು ಯಾವ ರೀತಿಯ ಸಿನಿಮಾ ಆಗಬಹುದು ಅಂದುಕೊಂಡಿದ್ರಿ?
ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಮತ್ತು ಕನೆಕ್ಟ್‌ ಆಗುವ ಸಿನಿಮಾ ಆಗಲಿದೆ. ಅಂದರೆ ಐದಾರು ವರ್ಷಗಳ ಹಿಂದೆ ಫ್ಯಾಮಿಲಿ ಡ್ರಾಮಾ ಸಿನಿಮಾಗಳು ಬರುತ್ತಿದ್ದವು. ಆ ಚಿತ್ರಗಳು ಈಗ ನಾಪತ್ತೆಯಾಗಿವೆ. ‘ಭುವನಂ ಗಗನಂ’ ಅಂಥದ್ದೊಂದು ಫ್ಯಾಮಿಲಿ ಸಿನಿಮಾ ಆಗಲಿದೆ ಎನ್ನುವ ನಿರೀಕ್ಷೆ ಇತ್ತು.

* ಈಗಾಗಲೇ ಸಿನಿಮಾ ನೋಡಿದವರು ಏನಂತಾರೆ?
ನನ್ನ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಚಿತ್ರದ ಕೊನೆಯ 15 ನಿಮಿಷಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ನನ್ನ ವಾಯ್ಸ್‌, ಡೈಲಾಗ್‌ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

* ಇಬ್ಬರು ಹೀರೋಗಳಿದ್ದೀರಿ. ಏನು ವಿಶೇಷತೆ ಇದೆ?
ಇಬ್ಬರು ಹೀರೋಗಳು ಅನ್ನೋದಕ್ಕಿಂತ ಪಾತ್ರಗಳು ಬಹಳ ಮುಖ್ಯ ಆಗುತ್ತದೆ. ಹೀಗಾಗಿ ನನಗೆ ಮಲ್ಟಿಸ್ಟಾರರ್‌ ಸಿನಿಮಾ ಮಾಡೋದರ ಬಗ್ಗೆ ಅಭ್ಯಂತರ ಇಲ್ಲ. ಈ ಚಿತ್ರದಲ್ಲಿ ಪೃಥ್ವಿ ಇರ್ತಾರೆ ಅಂದಾಗ ಮತ್ತಷ್ಟು ಖುಷಿ ಆಗಿತ್ತು.

ಮಿಡ್ಲ್‌ಕ್ಲಾಸ್ ಹುಡುಗನ ಫ್ಯಾಮಿಲಿ ಸೆಂಟಿಮೆಂಟ್‌ ಕತೆಯ ಸಿನಿಮಾ: ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್‌

* ಮುಂದಿನ ಚಿತ್ರಗಳು ಯಾವುವು?
ಪ್ರೀಮಿಯರ್‌ ಪದ್ಮಿನಿ ತಂಡದಿಂದ ಒಂದು ಚಿತ್ರ ಬರಲಿದೆ. ಯುಗಾದಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಆಗುತ್ತದೆ. ಈ ನಡುವೆ ತೆಲುಗಿನ ನಾಗಾರ್ಜುನ ಪುತ್ರ ಅಖಿಲ್‌ ಜತೆಗೆ ಒಂದು ಸಿನಿಮಾ ಮಾಡುತ್ತಿದ್ದೇನೆ.