ಸಂಡೂರು ಮೈನ್ಸ್‌ನಲ್ಲಿ ನಡೆಯುವ ಕತೆ. ರಾಜು ಎನ್ನುವ ಪಾತ್ರಧಾರಿ ಏನಕ್ಕೆ ಬಾಂಡ್‌ ಆಗಿರುತ್ತಾನೆ, ಆತ ಲಂಡನ್‌ಗೆ ಯಾಕೆ ಹೋಗುತ್ತಾನೆ. ದುಡ್ಡು ಯಾರದ್ದು, ಸಂಡೂರು ಟು ಲಂಡನ್‌ ಜರ್ನಿ ಹಿನ್ನೆಲೆ ಏನು... ಇತ್ಯಾದಿ ಅಂಶಗಳನ್ನು ಒಳಗೊಂಡ ಸಿನಿಮಾ.

ಕೇಶವ

* ಇದು ಮತ್ತೊಂದು ರಾಜು ಫ್ಲೇವರ್‌ ಸಿನಿಮಾನಾ?
ಖಂಡಿತಾ ಅಲ್ಲ. ಇದು ಬೇರೆಯದ್ದೇ ಆದ ಕತೆ ಹೊಂದಿರುವ ಸಿನಿಮಾ. ಹೊಸ ಗುರುನಂದನ್‌ ಈ ಚಿತ್ರದಲ್ಲಿ ಕಾಣುತ್ತಾರೆ.

* ಯಾವ ರೀತಿಯ ಸಿನಿಮಾ ಇದು?
ಥ್ರಿಲ್ಲರ್‌, ಫ್ಯಾಮಿಲಿ ಹಾಗೂ ತಾಯಿ ಸೆಂಟಿಂಮೆಂಟ್‌ ಇರುವ ಸಿನಿಮಾ. ಮಧ್ಯಮರ್ಗಕ್ಕೆ ಬಹು ಬೇಗ ಕನೆಕ್ಟ್‌ ಆಗುವ ಕತೆ ಇಲ್ಲಿದೆ.

ವಿಚ್ಛೇದನದ ನಂತರ ಮಕ್ಕಳಿಗಾಗಿ ಮತ್ತೆ ನಟಿಸೋಕೆ ಬಂದೆ, ನನ್ನ ಈ ಸ್ಥಿತಿಗೆ ಕರುಮಾರಿ ಅಮ್ಮನೇ ಕಾರಣ: ಹಿರಿಯ ನಟಿ ನಳಿನಿ

* ಮಧ್ಯಮ ವರ್ಗಕ್ಕೆ ಕನೆಕ್ಟ್ ಆಗುವಂತಹ ಅಂಶಗಳು ಏನಿವೆ?
ನನ್ನ ಪಾತ್ರ. ಪ್ರತಿಯೊಂದು ಊರಿನಲ್ಲೂ ನನ್ನ ರೀತಿಯ ಒಂದು ಕ್ಯಾರೆಕ್ಟರ್‌ ಇರುತ್ತದೆ. ತೆರೆ ಮೇಲೆ ನೋಡಿದಾಗ ನಾನು ಎಲ್ಲರಿಗೂ ಕನೆಕ್ಟ್‌ ಆಗುತ್ತೇನೆ.

* ಕತೆಯ ಮುಖ್ಯ ಅಂಶಗಳೇನು?
ಸಂಡೂರು ಮೈನ್ಸ್‌ನಲ್ಲಿ ನಡೆಯುವ ಕತೆ. ರಾಜು ಎನ್ನುವ ಪಾತ್ರಧಾರಿ ಏನಕ್ಕೆ ಬಾಂಡ್‌ ಆಗಿರುತ್ತಾನೆ, ಆತ ಲಂಡನ್‌ಗೆ ಯಾಕೆ ಹೋಗುತ್ತಾನೆ. ದುಡ್ಡು ಯಾರದ್ದು, ಸಂಡೂರು ಟು ಲಂಡನ್‌ ಜರ್ನಿ ಹಿನ್ನೆಲೆ ಏನು... ಇತ್ಯಾದಿ ಅಂಶಗಳನ್ನು ಒಳಗೊಂಡ ಸಿನಿಮಾ.

* ನೀವು ಕತೆಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತೀರಿ?
ಕತೆ ಕೇಳುವಾಗ ನಾನು ಹೀರೋ ಅನಿಸಿಬಾರದು. ಕತೆಯೇ ಹೀರೋ ಆಗಿರಬೇಕು. ಕ್ಯಾರೆಕ್ಟರ್‌ ಸ್ಟ್ರಾಂಗ್‌ ಆಗಿರಬೇಕು. ಮಧ್ಯಮ ವರ್ಗದ ಕುಟುಂಬಗಳಿಗೆ ನನ್ನ ಪಾತ್ರ ಕನೆಕ್ಟ್‌ ಆಗಿರಬೇಕು. ಇಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕತೆ ಕೇಳುತ್ತೇನೆ ಮತ್ತು ಆಯ್ಕೆ ಮಾಡಿಕೊಳ್ಳುತ್ತೇನೆ. 

ಒಮ್ಮೆ ಧರಿಸಿದ ಡ್ರೆಸ್ ಮತ್ತೆ ಹಾಕೊಲ್ವಂತೆ ಈ ನಟಿ: ರವಿಶಾಸ್ತ್ರಿ ಹೀರೋಯಿನ್ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ!

* ನಿಮ್ಮ ಮುಂದಿನ ಚಿತ್ರಗಳು ಯಾವುವು?
ಹ್ಯಾಪಿ ಎಂಡಿಂಗ್‌, ಮಿಸ್ಟರ್‌ ಜಾಕ್‌ ಚಿತ್ರಗಳ ಜತೆಗೆ ನಿರ್ದೇಶಕ ನರೇಶ್‌ ಅವರ ಕತೆ ಕೇಳಿ ಓಕೆ ಮಾಡಿದ್ದೇನೆ.