ನಂಗೆ ಈ ಪಾತ್ರ ತುಂಬಾ ಇಷ್ಟ. ಸಿದ್ಲಿಂಗು ರಿಯಾಲಿಟಿ ಚೆಕ್ ಮಾಡಿಕೊಂಡು ಬದುಕೋನು. ಆಡಂಬರ ಇಲ್ಲದೇ ಜೀವನಕ್ಕೆಷ್ಟು ಬೇಕೋ ಅಷ್ಟರಲ್ಲೇ ಬದುಕು ಕಟ್ಟಿಕೊಂಡವನು. ಆದರೆ ಇವನಿಗೆ ತುಂಬಾ ಆಸೆಗಳಿವೆ ಎಂದರು ಲೂಸ್ ಮಾದ ಯೋಗಿ.
ಪ್ರಿಯಾ ಕೆರ್ವಾಶೆ
* ಸಿದ್ಲಿಂಗು 2ನಲ್ಲಿ ಮಂಗಳಾ ಟೀಚರ್‌ನ ಮಿಸ್ ಮಾಡ್ಕೊಂಡ್ರಾ?
ಇಲ್ಲಪ್ಪಾ. ಈ ಬಾರಿ ಬಹಳ ಸ್ಟ್ರಾಂಗ್ ಮಹಿಳಾ ಪಾತ್ರಗಳು ಬಂದಿವೆ. ಸೀತಮ್ಮ, ನಿವೇದಿತಾ, ವಿಶಾಲು, ಆಂಡಾಳಮ್ಮ ಎಲ್ಲಾ ಇದ್ದಾರೆ. ಆದರೂ ನಮ್ಮ ಸಿನಿಮಾ ಜರ್ನಿಯಲ್ಲಿ ಆಗಾಗ ಆ ಪಾತ್ರ ನೆನಪಾಗ್ತಿತ್ತು. ಆದರೆ ಮೊದಲ ಭಾಗದಲ್ಲೇ ಮಂಗಳ ಟೀಚರ್‌ನ ಕಳೆದುಕೊಂಡ ಕಾರಣ ಇಲ್ಲಿ ಮತ್ತೆ ತುರುಕುವಂತಿರಲಿಲ್ಲ.
* ಈ ಸಿದ್ಲಿಂಗು ಮಧ್ಯರಾತ್ರಿ ಎಬ್ಬಿಸಿ ಕಾಡಿದ್ದಿತ್ತಾ?
ಈ ಪಾತ್ರ ಬಹಳ ಸ್ಟ್ರಾಂಗ್. ಮಧ್ಯ ರಾತ್ರಿ ಅಂತಲ್ಲ, ಸದಾ ಕಾಡುವ ಪಾತ್ರ. ಸ್ಟ್ರಗಲ್ ಪಡ್ತಿರೋ ಎಲ್ಲಾ ಮನೆ ಮಗನ ಥರ ಸಿದ್ಲಿಂಗು ಇರ್ತಾನೆ.
ನಾನು ಲೂಸ್ ಮಾದ ಯೋಗಿ ಅಭಿಮಾನಿ: ನಟ ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?
* ನಿಮ್ಮೊಳಗಿನ ಸಿದ್ಲಿಂಗು ಬಗ್ಗೆ ಹೇಳಿ?
ನಂಗೆ ಈ ಪಾತ್ರ ತುಂಬಾ ಇಷ್ಟ. ಸಿದ್ಲಿಂಗು ರಿಯಾಲಿಟಿ ಚೆಕ್ ಮಾಡಿಕೊಂಡು ಬದುಕೋನು. ಆಡಂಬರ ಇಲ್ಲದೇ ಜೀವನಕ್ಕೆಷ್ಟು ಬೇಕೋ ಅಷ್ಟರಲ್ಲೇ ಬದುಕು ಕಟ್ಟಿಕೊಂಡವನು. ಆದರೆ ಇವನಿಗೆ ತುಂಬಾ ಆಸೆಗಳಿವೆ. ಈ ಆಸೆಗಳಲ್ಲಿ ಅವನು ಪಡ್ಕೊಳ್ಳೋದೆಷ್ಟು, ಕಳ್ಕೊಳ್ಳೋದೆಷ್ಟು ಅನ್ನೋದು ಪಾರ್ಟ್ 2ನಲ್ಲಿದೆ. ಈ ಪಾತ್ರದ ಥರ ನಾನೂ ಮೊದಲ ಭಾಗ ಬರುವಾಗ ಆತನಂತೆ ಸಿಕ್ಕಾಪಟ್ಟೆ ತಲೆ ಹರಟೆ, ಮಾತು ಜಾಸ್ತಿ ಇರುವ ಹುಡುಗನಾಗಿದ್ದೆ. ಈ ಭಾಗದಲ್ಲಿ ಸಿದ್ಲಿಂಗು ಕೊಂಚ ಸೀರಿಯಸ್ ಆಗಿರ್ತಾನೆ. ನಾನೂ ಹಾಗೇ ಆಗಿದ್ದೀನಿ. ವಯಸ್ಸು, ಅನುಭವ ಎಲ್ಲವೂ ಇದಕ್ಕೆ ಕಾರಣ ಇರಬಹುದು.
* ಯಾಕೆ ಜನ ನಿಮ್ ಸಿನಿಮಾ ನೋಡ್ಬೇಕು?
ಸಿದ್ಲಿಂಗುನೇ ಸಿನಿಮಾದ ಹೈಲೈಟ್. ಕಾಮನ್ ಮ್ಯಾನ್ ಮನಸ್ಸಲ್ಲಿ ಬೇರೂರಿ ನಿಂತಿರುವ ಹುಡುಗ ಈ ಸಿದ್ಲಿಂಗು. ಅದೇ ಮುಖ್ಯ. ನಾನು ತುಂಬಾ ಸಮಯದಿಂದ ನಿರೀಕ್ಷಿಸುತ್ತಿದ್ದ ಸಿನಿಮಾವಿದು.
* ವಿಜಯಪ್ರಸಾದ್ ಅವರ ಡಬಲ್ ಮೀನಿಂಗ್ ಇಲ್ಲದ ಕಾಮಿಡಿ ಹೇಗಿತ್ತು?
ಸಿದ್ಲಿಂಗು 2ನಲ್ಲಿ ಡಬಲ್‌ಮೀನಿಂಗ್ ಅಲ್ಲ, ಮೀನಿಂಗ್‌ಫುಲ್ ಕಾಮಿಡಿ ಇದೆ. ಜನರ ಆಡು ಮಾತಿನ ತಮಾಷೆ, ವ್ಯಂಗ್ಯಗಳೂ ಇವೆ.
* ಕಾಮಿಡಿ, ಎಂಟರ್‌ಟೇನ್‌ಮೆಂಟ್ ಆಚೆ ಮೊದಲ ಭಾಗ ಸೂಕ್ಷ್ಮಗಳನ್ನು ದಾಟಿಸಿತ್ತು. ಇಲ್ಲೂ ನಿರೀಕ್ಷೆ ಮಾಡಬಹುದಾ?
ಈ ಭಾಗ ಅದ್ಭುತವಾಗಿದೆ. ಮನಸ್ಸಿಗೆ ನಾಟುವಂಥಾ ಅಂಶಗಳು ಬಹಳ ಇವೆ. ಭಾವನಾತ್ಮಕವಾಗಿ ನಮ್ಮನ್ನು ಸ್ಪರ್ಶಿಸುವ ಸಿನಿಮಾ. ಹೆಣ್ಮಕ್ಕಳಿಗೆ ಬಹಳ ಇಷ್ಟ ಆಗುತ್ತೆ. ಹೆಣ್ಣೇ ಸರ್ವ ಕಾಲಕ್ಕೂ ಶ್ರೇಷ್ಠ ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೀವಿ. ಇದೇ ಹೈಲೈಟ್. ಲೈಟ್ ಹ್ಯೂಮರ್ ಜೊತೆ ಸೀರಿಯಸ್ ವಿಷ್ಯಗಳನ್ನು ಹೇಳ್ತೀವಿ. ಮನುಷ್ಯನಿಗೆ ಮನುಷ್ಯನೇ ಆಗಬೇಕು ಅನ್ನುವ ಭಾವವಿದೆ.
* ಬಹಳ ಸಮಯದ ಬಳಿಕ ನಿರ್ದೇಶಕ ವಿಜಯಪ್ರಸಾದ್ ಜೊತೆ ಕೆಲಸ ಮಾಡಿದ್ದು ಹೇಗಿತ್ತು?
ಹಠ, ಛಲದಿಂದ ಪ್ರೂವ್ ಮಾಡ್ಲೇ ಬೇಕು ಅಂತ ದೃಢ ನಿರ್ಧಾರ ಮಾಡಿ ಸಿನಿಮಾ ಮಾಡಿದ್ದೀವಿ. ತುಂಬ ಪಾಸಿಟಿವ್ ಆಗಿದೆ. ಇವತ್ತು ರಿಸಲ್ಟ್‌ಗೆ ವೇಟಿಂಗ್.
ಮಿಡ್ಲ್‌ಕ್ಲಾಸ್ ಹುಡುಗನ ಫ್ಯಾಮಿಲಿ ಸೆಂಟಿಮೆಂಟ್ ಕತೆಯ ಸಿನಿಮಾ: ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್
* ಪ್ರೇಮಿಗಳ ದಿನಕ್ಕೆ ಹಲವು ಸಿನಿಮಾಗಳು ಬರ್ತಿವೆಯಲ್ಲಾ?
ಅದರಿಂದ ನಮಗೆ ಏನೂ ಸಮಸ್ಯೆ ಆಗಿಲ್ಲ. 130 ಥೇಟರ್‌ಗಳಲ್ಲಿ ಬರ್ತಿದ್ದೀವಿ. ಕಾಂಪಿಟೀಶನ್ ಇದ್ದರೂ ನಮ್ಮ ಸಿನಿಮಾ ಗೆಲ್ಲುವ ನಂಬಿಕೆ ಇದೆ. ಎಕ್ಸಾಂ ಬರೆದು ರಿಸಲ್ಟ್ ಬರುವ ಹೊತ್ತಿಗೆ ನಾನು ಪಾಸ್ ಆಗ್ತೀನಿ ಎಂಬ ನಂಬಿಕೆ ಇರುತ್ತಲ್ಲಾ ಆ ಥರ ಇದು. ಕೆಲವು ಸಿನಿಮಾ ಮಾಡಿದಾಗ ನಾನೇ ಅಷ್ಟು ಚೆನ್ನಾಗಿಲ್ಲ ಅಂತೀನಿ. ಆದರೆ ಇದಕ್ಕೆ ಮಾತ್ರ ಫ್ಯಾಮಿಲಿ ಆಡಿಯನ್ಸ್ ಬನ್ನಿ ಅಂತ ಕರೀತೀನಿ.
