Asianet Suvarna News Asianet Suvarna News

'ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು..! – ಹರ್ಷಗೌಡ

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ದತ್ತನಾಗಿ ಗಮನ ಸೆಳೆದವರು ಹರ್ಷಗೌಡ. ಪ್ರಸ್ತುತ ಧಾರಾವಾಹಿ ಮುಗಿದರೂ ಅದರಿಂದ ಸೃಷ್ಟಿಯಾದಂಥ ಅಭಿಮಾನಿಗಳಿಗೆ ಕೊರತೆಯಿಲ್ಲ. ಹಾಗಾಗಿಯೇ ಮತ್ತೊಮ್ಮೆ ಕಿರುತೆರೆಗೆ ಮರಳುವ ತಯಾರಿಯಲ್ಲಿದ್ದಾರೆ ಹರ್ಷಗೌಡ.

Brahmagantu Kannada serial Harsha shares about his acting journey
Author
Bengaluru, First Published Jul 31, 2021, 1:03 PM IST

ಮೂಲತಃ ಹಾಸನದ ಹೊಳೆನರಸಿಪುರ ಇವರ ಊರು. ‘ಬಿಸಿಲೆ’ ಎನ್ನುವ ಚಿತ್ರದ ನಿರ್ದೇಶಕರಾದ ತಮ್ಮ ಕಸಿನ್ ಬ್ರದರ್ ಮೂಲಕ ಬೆಂಗಳೂರು ಸೇರಿಕೊಂಡರು. ಕಸಿನ್ ಅಕಾಲದಲ್ಲೇ ಅಗಲಿದಾಗ  ಹರ್ಷನ ಕನಸು ಕಿರುತೆರೆಯತ್ತ ಹೊರಳಿತು. ಅಲ್ಲಿ ಧಾರಾವಾಹಿಗಳ ಮೂಲಕ ಪ್ರತಿಭೆಯೊಂದು ಅರಳಿತು. ಹಾಗಾಗಿ ಹರ್ಷಗೌಡ ಕಲಾವಿದನಾಗಿ ಇಂದು ಮನೆಮನೆಗೆ ಪರಿಚಯ. ಆದರೆ ಅದರಾಚೆಗಿನ ಬದುಕಿನ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಅವರು ಹಂಚಿಕೊಂಡ ವಿಚಾರಗಳು ಇಲ್ಲಿವೆ.

- ಶಶಿಕರ ಪಾತೂರು

`ಬ್ರಹ್ಮಗಂಟು’ ನಿಮ್ಮ ಪಾಲಿಗೆ ವಿಶೇಷ ಯಾಕೆ?
ಖಂಡಿತವಾಗಿ ಅದಕ್ಕೊಂದು ವಿಶೇಷ ಸ್ಥಾನವಿದೆ. ಯಾಕೆಂದರೆ ಇದುವರೆಗೆ ನಾನು ಏಳು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಅವುಗಳಲ್ಲಿ `ಬ್ರಹ್ಮಗಂಟು’ ನನಗೆ ಬ್ರೇಕ್ ನೀಡಿದಂಥ ಧಾರಾವಾಹಿ. ಅದಕ್ಕೂ ಮೊದಲು ಕಲರ್ಸ್ ಕನ್ನಡ `ಈ ಟಿವಿ’ಯಾಗಿದ್ದಾಗ ಅದರಲ್ಲಿ ಪ್ರಸಾರವಾಗುತ್ತಿದ್ದ `ಅಮ್ಮ ನಿನಗಾಗಿ’ ಧಾರಾವಾಹಿಯಲ್ಲಿ ನಟಿಸಿದ್ದೆ. ಆ ಅನುಭವ ಕೂಡ ಮರೆಯಲಾಗದ್ದು. ಇದೀಗ `ಬ್ರಹ್ಮಗಂಟು’ ಮುಗಿದಿದೆ. ಆದರೆ ಆ ಪಾತ್ರದ ಪ್ರಭಾವ ಪ್ರೇಕ್ಷಕರ ಹಾಗೆ ನನ್ನಲ್ಲಿಯೂ ಒಂದಷ್ಟು ಕಾಲ ಉಳಿಯಲಿದೆ.

ಒಳಗಿನಿಂದ ಫೀಲ್ ಮಾಡಿದಾಗಲೇ ಹೊಸ ಲೋಕ - ಕ್ರೇಜಿಸ್ಟಾರ್

ನಿಮಗೆ ಹಿರಿತೆರೆಯ ಮೇಲೆ ಹಿರಿಯಾಸೆ ಇಲ್ಲವೇ?
ನಾನು ಮಹತ್ವಾಕಾಂಕ್ಷಿಯಲ್ಲ. ಇರುವುದರಲ್ಲಿಯೇ ಚೆನ್ನಾಗಿರಬೇಕು ಎನ್ನುವುದು ನನ್ನ ಧ್ಯೇಯ. ಬಹುಶಃ ಅದಕ್ಕೆ ಮನೆಯಿಂದ ಸಿಕ್ಕಂಥ ವಾತಾವರಣವೂ ಕಾರಣ ಇರಬಹುದು. ಯಾಕೆಂದರೆ ಆರಂಭದಿಂದಲೂ ಮನೆಯಲ್ಲಿ “ನೀನು ಇದನ್ನೇ ಮಾಡಬೇಕು” ಎನ್ನುವ ಒತ್ತಡ ಇರಲಿಲ್ಲ. ಹಾಗಾಗಿಯೇ ಪ್ಯಾರಾ ಮೆಡಿಕಲ್‌ ಕೋರ್ಸ್ ಮಾಡಿದ್ದರೂ ಬಣ್ಣದ ಲೋಕದ ಅದೃಷ್ಟ ಪರೀಕ್ಷಿಸುವಾಸೆಗೆ ಬೆಂಬಲವಾಗಿ ನಿಂತರು. ಸಿನಿಮಾದಲ್ಲಿ ಹೇಳಿಕೊಳ್ಳುವ ಅವಕಾಶ ಸಿಗದಿದ್ದರೂ ಧಾರಾವಾಹಿ ನನ್ನ ಕೈ ಬಿಡಲಿಲ್ಲ. ನನಗೆ ಸಿಕ್ಕಿದ ಪಾತ್ರಕ್ಕೆ ನ್ಯಾಯವೊದಗಿಸುವ ನೈಜ ಪ್ರಯತ್ನ ನನ್ನದಾಗಿರುತ್ತದೆ. ಅದರ ಹೊರತು ಸಿನಿಮಾ ಸ್ಟಾರ್ ಆಗಬೇಕು ಎನ್ನುವ ಗುರಿ ನನಗಿಲ್ಲ. ಮನೆಯಲ್ಲಿಯೂ ಅಷ್ಟೇ,  ದುಡಿಮೆ ಕಡಿಮೆಯಾದರೂ ಪರವಾಗಿಲ್ಲ; ಒಳ್ಳೆಯವರ ಜೊತೆಗೆ ಒಳ್ಳೆಯತನದೊಂದಿಗೆ ಇರುವುದಷ್ಟೇ ಮುಖ್ಯ ಎನ್ನುತ್ತಿರುತ್ತಾರೆ.

ಕಮಲಹಾಸನ್ ಕಂಡ ಬಳಿಕ ಅಹಂ ತೊರೆದೆ - ಉಮೇಶ್ ಬಣಕಾರ್

ಅಂಥಾ ಅವಕಾಶ ನೀಡಿರುವ ನಿಮ್ಮ ಮನೆಮಂದಿಯ ಬಗ್ಗೆ ಸ್ವಲ್ಪ ಹೇಳ್ತೀರಾ?
ನನ್ನ ತಂದೆ ಮಂಜುನಾಥ್ ಅವರು ರೇಶ್ಮೆ ಇಲಾಖೆಯಲ್ಲಿ ವೃತ್ತಿಯಲ್ಲಿದ್ದರು. ಈಗೊಂದು ಹತ್ತು ವರ್ಷದ ಹಿಂದೆ ನಿಧನರಾದರು. ನಮ್ಮಮ್ಮನ ಹೆಸರು ಮಮತಾ. ಅವರು ಮೈಸೂರು ಕಮಿಷನರ್ ಕಚೇರಿಯಲ್ಲಿ ಉದ್ಯೋಗಿ. ತಮ್ಮ ಅರ್ಜುನ್ ಕ್ರಿಕೆಟ್ ಕೋಚ್. ಪತ್ನಿ ಮಾನಸ ಬ್ಯಾಂಕ್ ಉದ್ಯೋಗಿ. ನಮಗೆ ಕ್ರಿಶಾ ಎಸ್ ಗೌಡ ಎನ್ನುವ ಎರಡು ವರ್ಷದ ಮಗುವಿದೆ. ನಾನು ಧಾರಾವಾಹಿ ನಟನಾಗಿರುವ ಕಾರಣ ಚಿತ್ರೀಕರಣ ಮುಗಿಸಿಕೊಂಡು ದಿನಾ ಮನೆಗೆ ಹೋಗಬಹುದು. ಬಹುಶಃ ಸಿನಿಮಾ ಕ್ಷೇತ್ರದಲ್ಲಿದ್ದಿದ್ದರೆ ಇದು ಸಾಧ್ಯವಿರುತ್ತಿರಲಿಲ್ಲ. ಮಾತ್ರವಲ್ಲ, ಧಾರಾವಾಹಿಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಕಡೆ ಚಿತ್ರೀಕರಣ ಇರುತ್ತದೆ.

ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ -  ಶಿವರಾಜ್ ಕುಮಾರ್

ಹಾಗಾದರೆ ಕಿರುತೆರೆಗಾಗಿಯೇ ಇಷ್ಟೊಂದು ಫಿಟ್ನೆಸ್‌ ಕಾಪಾಡಿಕೊಂಡಿದ್ದೀರಿ ಎನ್ನಬಹುದೇ?
ಟ್ನೆಸ್‌ ಎನ್ನುವುದು ಪಾತ್ರಕ್ಕಾಗಿ ಎನ್ನುವುದರ ಜೊತೆಗೆ ಪ್ರತಿಯೊಬ್ಬರೂ ಅನುಕರಿಸಬೇಕಾದ ಮಾರ್ಗ ಎಂದೇ ಹೇಳಬಹುದು. ಪಾತ್ರದ ವಿಚಾರಕ್ಕೆ ಬಂದರೆ ನನಗೆ ಎಲ್ಲ ಪಾತ್ರಗಳು ಇಷ್ಟ. ನೆಗೆಟಿವ್ ಇದ್ರೆ ನನ್ನ ಲುಕ್ ಬಳಸಿಕೊಂಡು ಚೆನ್ನಾಗಿ ಮಾಡಬಹುದು ಅನಿಸುತ್ತಿರುತ್ತದೆ. ಅದರ ಜೊತೆ ಕ್ರಿಕೆಟ್ ನನ್ನ ಹವ್ಯಾಸ. ವರ್ಷಕ್ಕೊಮ್ಮೆ ಟೆಲಿವಿಶನ್ ಕ್ರಿಕೆಟ್ ಲೀಗ್ ನಲ್ಲಿ ನಾನು ಪಾಲ್ಗೊಳ್ಲುತ್ತಿರುತ್ತೇನೆ. ಅದರಲ್ಲಿ ಎಲ್ಲ ವಾಹಿನಿಗಳವರೂ ಪಾಲ್ಗೊಳ್ಳುತ್ತಾರೆ. ಕಳೆದ ಬಾರಿ ನಮ್ಮ ತಂಡ `ಜಟಾಯು ಜೈಂಟ್ಸ್’ ವಿಜೇತವಾಗಿತ್ತು. ಅದರ ಫೈನಲ್ ಮ್ಯಾಚ್‌ನಲ್ಲಿ ನನ್ನ ಶೋಲ್ಡರ್ ಡಿಸ್ಲೋಕೇಶನ್ ಆಯಿತು. ಆದರೆ ಬಾಡಿ ಫಿಟ್ ಇದ್ದರೇನೇ ಕ್ರಿಕೆಟ್ ನಲ್ಲಿ ಫ್ಲೆಕ್ಸಿಬಲ್ ಆಗಿ ಓಡಾಡಲು ಸಾಧ್ಯ. ಸದ್ಯಕ್ಕೆ ಯಾವುದೇ ಶೂಟಿಂಗ್ ಒಪ್ಪಿಕೊಂಡಿಲ್ಲ. ಎರಡು ತಿಂಗಳು ಎಲ್ಲವನ್ನು ಬದಿಗಿಟ್ಟು ಫಿಟ್ನೆಸ್‌ಗೆ ಆದ್ಯತೆ ನೀಡಲಿದ್ದೇನೆ.

Follow Us:
Download App:
  • android
  • ios