ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೇವಲ 6.10 ಲಕ್ಷ ರೂಪಾಯಿ ಆಕರ್ಷಕ ಬೆಲೆಯಲ್ಲಿ ಕಾರು ಲಾಂಚ್ ಆಗಿದೆ. ಅಡಾಸ್ ಟೆಕ್ ಜೊತೆ ಬಂದಿರುವ ಬಲೆನೋ ಫೇಸ್‌ಲಿಫ್ಟ್ ಮುಂಭಾಗದ ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಿದೆ.

ಬೆಂಗಳೂರು (ಸೆ.05) ಮಾರುತಿ ಸುಜುಕಿ ಇದೀಗ ಹೊಚ್ಚ ಹೊಸ ಬಲೆನೋ ಫೇಸ್‌ಲಿಪ್ಟ್ ಕಾರು ಬಿಡುಗಡೆ ಮಾಡಿದೆ. ಅಡಾಸ್ ತಂತ್ರಜ್ಞಾನ, ಅತ್ಯಂತ ಆಕರ್ಷಕ ವಿನ್ಯಾಸ. 1.2 ಲೀಟರ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಹೊಸ ಬಲೆನೋ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಆರಂಭಿಕ ಬೆಲೆ 6.10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಕಾರು ಲಭ್ಯವಿದೆ. ಈ ಮೂಲಕ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಕೈಗೆಟುಕುವ ದರದಲ್ಲಿ ಲಭ್ಯವಾಗಿದೆ.

ಗ್ರಿಲ್ ಸೇರಿ ಹಲವು ಬದಲಾವಣೆ

ಬಲೆನೋ ಫೇಸ್‌ಲಿಫ್ಟ್ ಕಾರಿನಲ್ಲಿ ಕೆಲ ಮಹತ್ವದ ಬದಲಾವಣೆ ಇದೆ. ಕಾರಿನ ಮುಂಭಾಗದ ಗ್ರಿಲ್ ಸಂಪೂರ್ಣ ಬದಲಿಸಲಾಗಿದೆ. ಮೊದಲ ನೋಟಕ್ಕೆ ಇದು ಹೊಸ ವಿನ್ಯಾಸದ ಕಾರಿಂತೆ ಕಾಣಲಿದೆ. ಬಲೆನೋ ಫೇಸ್‌ಲಿಫ್ಟ್ ಕಾರಿನ ವಿನ್ಯಾಸ ಅತ್ಯಂತ ಆಕರ್ಷಕವಾಗಿದೆ. ಹೊಸ ರೀತಿಯ ಹೆಡ್‌ಲ್ಯಾಂಪ್ಸ್ ಬಳಸಲಾಗಿದೆ. ಸಿಂಗಲ್ ಪೇನ್ ಸನ್‌ರೂಫ್ ನೀಡಲಾಗಿದೆ. ಜೊತೆಗೆ 10.1 ಇಂಚಿನ್ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್ ವೈಯರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಟೆಕ್ ಒರಿಯೆಂಟೆಡ್ ಫೀಚರ್ ನೀಡಲಾಗಿದೆ.

ಅಡಾಸ್ ಟೆಕ್

ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಅಡಾಸ್ (ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನ ಹೊಂದಿದೆ. ಸದ್ಯ ಲೆವೆನ್ 1 ಅಡಾಸ್ ಟೆಕ್ ನೀಡಲಾಗಿದೆ. ಈ ಮೂಲಕ ಬ್ಲೈಂಡ್ ಸ್ಪಾಟ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಸೇಫ್ ಡ್ರೈವ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇದರಲ್ಲಿದೆ. ಇದೀಗ ಮಾರುತಿ ಸುಜುಕಿ ಭಾರತದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೀಗಾಗಿ ಡಿಸೈರ್, ವಿಕ್ಟೋರಿಸ್, ಬ್ರೇಜಾ ಫೇಸ್‌ಲಿಫ್ಟ್ ಸುರಕ್ಷತಾ ಗುಣಮಟ್ಟ ಹೆಚ್ಚಿಸಿಕೊಂಡಿದೆ. ಇದೀಗ ಬಲೆನೋ ಫೇಸ್‌ಲಿಫ್ಟ್ ಕಾರಿನಲ್ಲಿ 6 ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಇಸಿಎಸ್, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

ಬಲೆನೋ ಫೇಸ್‌ಲಿಫ್ಟ್ ಕಾರಿನ ಎಂಜಿನ್‌ನಲ್ಲಿ ಮಹತ್ತರ ಬದಲಾವಣೆ ಇಲ್ಲ. 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಕಾರಿನಲ್ಲೂ ಇದೇ ಎಂಜಿನ್ ಇದೆ. 90 ಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆಗಳಿವೆ. ಇನ್ನು ಸಿಎನ್‌ಜಿ ಆಯ್ಕೆಯೂ ಲಭ್ಯವಿದೆ. ಸಿಎನ್‌ಜಿಯಲ್ಲಿ 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಮಾತ್ರ ಲಭ್ಯವಿದೆ.