Central Government, Union Budget : ಪ್ರತಿ ವರ್ಷ ಫೆಬ್ರವರಿ 1 ರಂದು ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಯಾಗುತ್ತೆ. ಈ ಬಾರಿ ಫೆಬ್ರವರಿ ಒಂದು ಭಾನುವಾರ ಬಂದಿದ್ದು, ಅಂದೇ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುತ್ತಾ?
ಕೇಂದ್ರದ ಸಾಮಾನ್ಯ ಬಜೆಟ್ (budget) ಮಂಡನೆಗೆ ಸಮಯ ಹತ್ತಿರವಾಗ್ತಿದೆ. ಬಜೆಟ್ ಮೇಲೆ ದೇಶದ ಜನರ ಕಣ್ಣಿದೆ. ಈ ಬಾರಿ ಯಾವೆಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತೆ, ತೆರಿಗೆ ಸ್ಥಿತಿ ಏನು ಎಂಬ ಕುತೂಹಲ ಜನರಲ್ಲಿದೆ. ಫೆಬ್ರವರಿ ಒಂದರಂದು ಬಜೆಟ್ ಮಂಡನೆ ಮಾಡಲಾಗುತ್ತೆ. ಆದ್ರೆ ಈ ಬಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಹಾಗಿದ್ರೆ ಬಜೆಟ್ ಮಂಡನೆಯಾಗೋದು ಯಾವಾಗ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.
ಭಾನುವಾರವೇ ಬಜೆಟ್ ಮಂಡನೆಯಾಗುತ್ತಾ?
ಕೇಂದ್ರ ಸರ್ಕಾರ (Central Govt) ಭಾನುವಾರ ಫೆಬ್ರವರಿ ಒಂದು ಬಂದ್ರೂ ಅದೇ ದಿನ ಬಜೆಟ್ ಮಂಡಿಸಲು ಒಲವು ತೋರಿಸುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ನಿಗದಿತ ದಿನಾಂಕವನ್ನು ಬದಲಿಸಲು ಸರ್ಕಾರ ಬಯಸ್ತಿಲ್ಲ. ಬಜೆಟ್ ಪ್ರಕ್ರಿಯೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಆಲೋಚನೆ ಮಾಡ್ತಿದೆ. ಅನೇಕ ವರ್ಷಗಳಿಂದ ಫೆಬ್ರವರಿ ಒಂದರಂದೇ ಸಾಮಾನ್ಯ ಬಜೆಟ್ ಮಂಡಿಸಲಾಗ್ತಿದೆ. ಪ್ರಸ್ತುತ ಬಿಜೆಪಿ ಸರ್ಕಾರವು ಈ ಸಂಪ್ರದಾಯವನ್ನು ಮುಂದುವರಿಸಲು ಬಯಸುತ್ತದೆ. ಬಜೆಟ್ ಅಧಿವೇಶನದ ಮೊದಲ ಹಂತ ಸುಮಾರು ಮೂರು ವಾರಗಳವರೆಗೆ ನಡೆಯುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ನಂತ್ರ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಆ ನಂತ್ರ ಬಜೆಟ್ ಪ್ರಸ್ತಾವನೆಗಳನ್ನು ವಿವರವಾಗಿ ಚರ್ಚಿಸಲಾಗುವುದು. ಹಣಕಾಸು ಮಸೂದೆಯನ್ನು ಸಂಸತ್ತಿನಲ್ಲಿಯೂ ಮಂಡಿಸಲಾಗುವುದು. ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಚರ್ಚೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ರತಿಕ್ರಿಯಿಸುವ ಸಾಧ್ಯತೆ ಇದೆ.
250 ಕೋಟಿ ಮೌಲ್ಯದ 53.5 ಎಕರೆ ಭೂಮಿ ಅಕ್ರಮ ಮಾರಾಟ; ಇನ್ಪೋಸಿಸ್‌ನಿಂದ ಮೊದಲ ಪ್ರತಿಕ್ರಿಯೆ
ಮುಂದೇನು?
ಭಾನುವಾರ, ಫೆಬ್ರವರಿ ಒಂದು ಬಂದಿರುವ ಕಾರಣ ಅದ್ರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಬಜೆಟ್ ಅಧಿವೇಶನ ಮತ್ತು ಬಜೆಟ್ ಮಂಡಿಸುವ ದಿನಾಂಕದ ಕುರಿತು ಅಂತಿಮ ನಿರ್ಧಾರವನ್ನು ಈ ವಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಅಂತಿಮ ನಿರ್ಧಾರ ಹೊರಗೆ ಬರಲಿದೆ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಬಜೆಟ್ ಮತ್ತು ಸಂಸತ್ತಿನ ಅಧಿವೇಶನದ ದಿನಾಂಕಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಸಮಿತಿಯು ಸಂಸತ್ತಿನ ಅಧಿವೇಶನ ಯಾವಾಗ ಪ್ರಾರಂಭವಾಗುತ್ತದೆ, ಬಜೆಟ್ ಯಾವಾಗ ಮಂಡಿಸಲಾಗುತ್ತದೆ ಮತ್ತು ಆರ್ಥಿಕ ಸಮೀಕ್ಷೆಯ ದಿನಾಂಕವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಸಿಸಿಪಿಎ ಸಭೆ ಜನವರಿ ಮೊದಲ ವಾರದಲ್ಲಿ ನಡೆಯುತ್ತದೆ.
ಫೆಬ್ರವರಿ 1 ರಂದು ಬಜೆಟ್ ಮಂಡನೆ ಸಂಪ್ರದಾಯ
ಫೆಬ್ರವರಿ 1 ರಂದು ಬಜೆಟ್ ಮಂಡಿಸುವ ಸಂಪ್ರದಾಯವು 2017 ರಲ್ಲಿ ಪ್ರಾರಂಭವಾಯಿತು. 2017 ಕ್ಕಿಂತ ಹಿಂದಿನ ವರ್ಷಗಳಲ್ಲಿ, ಫೆಬ್ರವರಿ ಕೊನೆಯ ವಾರದಲ್ಲಿ ಬಜೆಟ್ ಮಂಡಿಸಲಾಗುತ್ತಿತ್ತು. ಈ ವರ್ಷ ಭಾನುವಾರ ಫೆಬ್ರವರಿ ಒಂದು ಬಂದಿದೆ. ಒಂದ್ಕಡೆ ಸಾರ್ವಜನಿಕ ರಜೆಯಾದ್ರೆ ಅಂದೇ ಗುರು ರವಿದಾಸ್ ಜಯಂತಿ ಕೂಡ ಇದೆ. ಹಾಗಾಗಿ ಆ ದಿನ ಬಜೆಟ್ ಮಂಡಿಸಲಾಗುತ್ತದೆಯೇ ಎಂದು ಪ್ರಶ್ನೆ ಎಲ್ಲರನ್ನು ಕಾಡ್ತಿದೆ.
ನಿಮಗೆ ತಿಳಿಯದ ಓಲ್ಡ್ ಮಂಕ್ ಕತೆ: ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್
ಭಾನುವಾರ ನಡೆಯೋದು ಇದೇ ಮೊದಲಲ್ಲ
ಫೆಬ್ರವರಿ ಕೊನೆಯ ವಾರದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯವಿದ್ದ ಸಮಯದಲ್ಲಿ ಶನಿವಾರ ಎರಡು ಬಾರಿ ಬಜೆಟ್ ಮಂಡನೆಯಾಗಿತ್ತು. 2015 ಮತ್ತು 2016 ರಲ್ಲಿ, ಅರುಣ್ ಜೇಟ್ಲಿ ಶನಿವಾರ ಬಜೆಟ್ ಮಂಡಿಸಿದ್ದರು. 1999 ರಲ್ಲಿ, ಯಶವಂತ್ ಸಿನ್ಹಾ ಭಾನುವಾರ ಬಜೆಟ್ ಮಂಡಿಸಿದ್ದರು.


