ಇನ್ಫೋಸಿಸ್ ವಿರುದ್ಧ ₹250 ಕೋಟಿ ಮೌಲ್ಯದ 53.5 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಈ ಆರೋಪಗಳಿಗೆ ಮೊದಲ ಬಾರಿಗೆ ಇನ್ಫೋಸಿಸ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.  

ಬೆಂಗಳೂರು: ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಇನ್ಫೋಸಿಸ್‌ ವಿರುದ್ಧ ಅಕ್ರಮವಾಗಿ ಭೂಮಿ ಮಾರಾಟದ ಆರೋಪ ಕೇಳಿ ಬಂದಿದೆ. ಇ-ಸ್ವತ್ತಿನಲ್ಲಿ ಆಸ್ತಿಗಳ ದಾಖಲೆ ಲಭ್ಯವಿಲ್ಲದಿದ್ದರೂ ನ್ಯಾಯಾಲಯ ಆದೇಶದ ಸುಳ್ಳು ಕಾರಣ ನೀಡಿ ಹಲವು ಶುದ್ಧ ಕ್ರಯಪತ್ರಗಳನ್ನು ವಂಚನಾತ್ಮಕವಾಗಿ ನೋಂದಣಿ ಮಾಡಲಾಗಿತ್ತು. ನಂತರ ಇನ್ಫೋಸಿಸ್‌ ಕಂಪನಿಗೆ ಸೇರಿದ ₹250 ಕೋಟಿ ಮೌಲ್ಯದ 53.5 ಎಕರೆ ಜಾಗವನ್ನು 40 ಸೇಲ್‌ಡೀಡ್‌ಗಳ ಮೂಲಕ ಪೂರ್ವ ಬ್ಲ್ಯೂ ಹೋಮ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಂದಣಿ ಮಾಡಿಕೊಡಲಾಗಿತ್ತು. ಇದೀಗ ಎಲ್ಲಾ ಬೆಳವಣಿಗೆ ಕುರಿತು ಮೊದಲ ಪ್ರತಿಕ್ರಿಯೆಯನ್ನು ನೀಡಿದೆ.

ಹಾಗಾದ್ರೆ ಇನ್ಫೋಸಿಸ್‌ ಹೇಳಿದ್ದೇನು?

ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಆಸ್ತಿಯನ್ನು ಎಲ್ಲಾ ನಿಯಮಗಳಿಗೆ ಅನುಸಾರವಾಗಿ ವ್ಯವಹಾರ ಮಾಡಸಲಾಗಿದೆ. ನಿಯಮಗಳ ಪ್ರಕಾರವಾಗಿ ಭೂಮಿಯನ್ನು ಮಾರಾಟ ಮಾಡಲಾಗಿದೆ. ಇದು ಸರ್ಕಾರದಿಂದ ಭೂಮಿಯನ್ನು ಹಂಚಿಕೆ ಮಾಡಿಲ್ಲ ಎಂದು ಇನ್ಪೋಸಿಸ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಇನ್ಫೋಸಿಸ್‌ನ ನೀತಿಗಳು, ಬಾಹ್ಯ ಅನುಮೋದನೆಗಳು ಮತ್ತು ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿ ಆಸ್ತಿ ಮಾರಾಟ ಮಾಡಲಾಗಿದೆ.

ಮಾರಾಟ ಮಾಡಲಾಗಿರುವ ಆಸ್ತಿಯನ್ನು ಇನ್ಪೋಸಿಸ್ ಸಂಸ್ಥೆ ಮಾರುಕಟ್ಟೆ ಮೌಲ್ಯದಲ್ಲಿ ವಾಣಿಜ್ಯೇತರ ಮತ್ತು ಕೈಗಾರಿಕೇತರ ಭೂಮಿಯನ್ನಾಗಿ ಖರೀದಿ ಮಾಡಲಾಗಿತ್ತು. ಇದೀಗ ಈ ಭೂಮಿಯನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲಾಗಿದೆ. ಮಾರಾಟ ಮಾಡಲಾಗಿರುವ ಭೂಮಿ ಸರ್ಕಾರದಿಂದ ಹಂಚಿಕೆಯಾಗಿಲ್ಲ ಎಂದು ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಇನ್ಫೋಸಿಸ್‌ನ 250 ಕೋಟಿಯ 53 ಎಕರೆ ಅಕ್ರಮ ರಿಜಿಸ್ಟರ್‌ ಕೇಸ್‌ನಲ್ಲಿ ರೋಚಕ ತಿರುವು

ಆರೋಪಗಳಿಗೆ ಇನ್ಪೋಸಿಸ್ ಸಂಸ್ಥೆ ಉತ್ತರ

ಪೂರ್ವ ಬ್ಲ್ಯೂ ಹೋಮ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆ ಇನ್ಫೋಸಿಸ್ ಮಾಡಿಕೊಂಡಿರುವ ಒಪ್ಪಂದದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿವೆ. ಭೂಮಿ ಮಾರಾಟ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇದೀಗ ಈ ಎಲ್ಲಾ ಆರೋಪಗಳಿಗೆ ಇನ್ಪೋಸಿಸ್ ಸಂಸ್ಥೆ ಉತ್ತರ ನೀಡುವ ಕೆಲಸವನ್ನು ಮಾಡಲಾಗಿದೆ. ಇತ್ತ ಈ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಜಾಪುರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ತರಿಕೆರೆ ಬಳಿಯ ಅರಣ್ಯದಲ್ಲಿ ಕಡವೆ ಬೇಟೆ, ಇನ್ಪೋಸಿಸ್ ಉದ್ಯೋಗಿ ಸೇರಿ 11 ಮಂದಿ ಅರೆಸ್ಟ್

ಭೂಮಿ ಖರೀದಿಸಿದ ಸಂಸ್ಥೆಯಿಂದಲೂ ಹೇಳಿಕೆ ಬಿಡುಗಡೆ

ಇನ್ಫೋಸಿಸ್ ಭೂಮಿ ಖರೀದಿಸಿರುವ ರಿಯಲ್ ಎಸ್ಟೇಟ್ ಡೆವಲಪರ್ ಪುರವಂಕರ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಕಂಪನಿಯು ಶಿಸ್ತುಬದ್ಧ ವಿಧಾನ ಅನುಸರಿಸುವ ಮೂಲಕ ಇನ್ಪೋಸಿಸ್ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಹೇಳಿದ್ದಾರೆ.