ಫೋರ್ಬ್ಸ್‌ ಮ್ಯಾಗಜಿನ್ 2025ರ ಪ್ರಭಾವಿ ಸ್ತ್ರೀಯರ ಪಟ್ಟಿ ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ನವದೆಹಲಿ: ಫೋರ್ಬ್ಸ್‌ ಮ್ಯಾಗಜಿನ್ 2025ರ ಪ್ರಭಾವಿ ಸ್ತ್ರೀಯರ ಪಟ್ಟಿ ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಎಚ್‌ಸಿಎಲ್‌ನ ಸಿಇಒ ರೋಶನಿ ನಾಡಾರ್, ಬಯೋಕಾನ್ ಸ್ಥಾಪಕಿ ಬೆಂಗಳೂರಿನ ಕಿರಣ್ ಮಜುಂದಾರ್ ಇದ್ದಾರೆ. ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಯುರೋಪಿಯನ್ ಕಮಿಷನ್‌ನ ಮೊದಲ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಇದ್ದಾರೆ. ನಿರ್ಮಲಾ 24ನೇ ಸ್ಥಾನ, ರೋಶನಿ 76, ಶಾ 83ನೇ ಸ್ಥಾನ ಪಡೆದಿದ್ದಾರೆ.

ನಿರ್ಮಲಾ ಸೀತಾರಾಮನ್ ಸಾಧನೆಯೇನು?:

ಭಾರತದ 2ನೇ ವಿತ್ತಸಚಿವೆ ಆಗಿ, ಸತತ 8ನೇ ಬಾರಿ ಬಜೆಟ್ ಮಂಡಿಸಿದ ಖ್ಯಾತಿಯ ನಿರ್ಮಲಾ ಆರ್ಥಿಕ ನೀತಿ ರೂಪಿಸುವಲ್ಲಿ, ರಾಷ್ಟ್ರೀಯ ಹಣಕಾಸು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ರೋಶನಿ ಮತ್ತು ಕಿರಣ್ ಶಾ ಅವರು ಸ್ವ-ಸಾಮರ್ಥ್ಯದಿಂದ ಶ್ರೀಮಂತೆಯಾದವರು.

ಇದನ್ನೂ ಓದಿ: ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ