ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಇಲ್ವಾ..? ಹಾಗಿದ್ರೆ ನೀವು ಈ ದೇಶಕ್ಕೆ ಹೋಗೋ ಹಾಗೇ ಇಲ್ಲ..!
ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಇಲ್ಲದಿದ್ದರೆ ನೀವು ಪ್ರವಾಸಿ ವೀಸಾ ಅಥವಾ ಇತರೆ ಯಾವುದೇ ವೀಸಾ ಹೊಂದಿದ್ದರೂ ನವೆಂಬರ್ 21, 2022 ಯುಎಇಗೆ ಪ್ರಯಾಣಿಸಲು ಅಥವಾ ಯುಎಇಯಿಂದ ಬೇರೆ ದೆಶಗಳಿಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಅವಕಾಶವೇ ಇಲ್ಲ.
ನೀವು ಮೊದಲ ಬಾರಿಗೆ ಪಾಸ್‌ಪೋರ್ಟ್‌ಗೆ (Passport) ಅರ್ಜಿ (Apply) ಸಲ್ಲಿಸುವ ಪ್ಲ್ಯಾನ್‌ನಲ್ಲಿದ್ದೀರಾ..? ಹಾಗಿದ್ದರೆ, ನೀವು ಪಾಸ್‌ಪೋರ್ಟ್ ಅಪ್ಲೈ ಮಾಡೋವಾಗ ಸರ್‌ನೇಮ್ (Surname) ಇರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ, ನೀವು ಈ ದೇಶಕ್ಕೆ (Country) ಪ್ರಯಾಣಿಸೋ ಅವಕಾಶವೇ ತಪ್ಪಿ ಹೋಗಲಿದೆ. ಹೌದು, ಪಾಸ್‌ಪೋರ್ಟ್‌ನಲ್ಲಿ ಏಕ ಹೆಸರು (Single Name) ಹೊಂದಿರುವ ಪ್ರಯಾಣಿಕರಿಗೆ ಯುಎಇಯಿಂದ (UAE) ಇತರೆ ದೇಶಕ್ಕೆ ಹಾಗೂ ಯುಎಇಗೆ ಪ್ರಯಾಣಿಸಲು ಸೋಮವಾರದಿಂದ (ನವೆಂಬರ್ 21, 2022) ಅವಕಾಶ ನೀಡಲ್ಲ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ಇಂಡಿಗೋ ಏರ್‌ಲೈನ್ಸ್‌ಗೆ ಮಾಹಿತಿ ನೀಡಿದೆ.
ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಇಲ್ಲದಿದ್ದರೆ ನೀವು ಪ್ರವಾಸಿ ವೀಸಾ ಅಥವಾ ಇತರೆ ಯಾವುದೇ ವೀಸಾ ಹೊಂದಿದ್ದರೂ ನವೆಂಬರ್ 21, 2022 ಯುಎಇಗೆ ಪ್ರಯಾಣಿಸಲು ಅಥವಾ ಯುಎಇಯಿಂದ ಬೇರೆ ದೇಶಗಳಿಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಅವಕಾಶವೇ ಇಲ್ಲ. ಏಕ ಹೆಸರು ಅಂದರೆ ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಮೊದಲ ಹಾಗೂ ಕೊನೆಯ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕಿದೆ.
ಇದನ್ನು ಓದಿ: ‘ಬಿ’ ರಿಪೋರ್ಟ್ ಕೋರ್ಟ್ ಒಪ್ಪಿದರೆ ಮಾತ್ರ ಪಾಸ್‌ಪೋರ್ಟ್ ಹಕ್ಕು: ಹೈಕೋರ್ಟ್
ಯುಎಇ ಅಧಿಕಾರಿಗಳ ಸೂಚನೆ ಮೇರೆಗೆ ನವೆಂಬರ್ 21, 2022 ರಿಂದ ಪಾಸ್‌ಪೋರ್ಟ್‌ನಲ್ಲಿ ಏಕ ಹೆಸರು ಹೊಂದಿರುವ ಪ್ರಯಾಣಿರು ಪ್ರವಾಸಿ ವೀಸಾ, ಭೇಟಿ ವೀಸಾ ಅಥವಾ ಇತರೆ ಯಾವುದೇ ವೀಸಾ ಇದ್ದರೂ ಸಹ ಯುಎಇಗೆ ಪ್ರಯಾಣಿಸಲು ಅಥವಾ ಯುಎಇಯಿಂದ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಇಂಡಿಗೋ ವಿಮಾನ ಸಂಸ್ಥೆ ಮಾಹಿತಿ ಹೇಳುತ್ತದೆ.
ಆದರೆ, ನಿವಾಸ ಪರವಾನಗಿ ಅಥವಾ ಶಾಶ್ವತ ವೀಸಾ ಹೊಂದಿರುವ ಪ್ರಯಾಣಿಕರು ಪಾಸ್‌ಪೋರ್ಟ್‌ನಲ್ಲಿ ಏಕ ಹೆಸರು ಹೊಂದಿದ್ದರೂ ಪ್ರಯಾಣಿಸಬಹುದು. ಆದರೆ, ಮೊದಲ ಹೆಸರು ಹಾಗೂ ಸರ್ ನೇಮ್ ಕಾಲಂನಲ್ಲಿ ಅವರು ತಮ್ಮ ಹೆಸರನ್ನು ಅಪ್ಡೇಟ್ ಮಾಡಬೇಕು ಎಂದು ಯುಎಇಯ ಅಧಿಕಾರಿಗಳು ಸೂಚನೆ ನೀಡಿರುವ ಬಗ್ಗೆಯೂ ಇಂಡಿಗೋ ಹೇಳಿಕೆ ನೀಡಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ಜನರು ಇಂಡಿಗೋ ಏರ್‌ಲೈನ್ಸ್‌ನ ಅಕೌಂಟ್ ಮ್ಯಾನೇಜರ್ ಅಥವಾ goindigo.com ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಪ್ರಯಾಣಿಕರಿಗೆ ತಿಳಿಸಿದೆ.
ಇದನ್ನೂ ಓದಿ: ಅಕ್ರಮವಾಗಿ ಪಾಸ್ ಪೋರ್ಟ್ ಮಾಡಿಸಿದ್ದ ನೇಪಾಳ ಪ್ರಜೆ ಬಂಧನ
ಇದೇ ರೀತಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಸ್ಪೈಸ್‌ಜೆಟ್ ಸಹ ಯುಎಇ ಪ್ರಯಾಣಿಕರಿಗೆ ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಫಸ್ಟ್ ನೇಮ್ ಹಾಗೂ ಸರ್ ನೇಮ್ ಎರಡನ್ನೂ ಹೊಂದುವಂತೆ ನೋಡಿಕೊಳ್ಳಿ ಎಂದೂ ಯುಎಇ ಪ್ರಯಾಣಿಕರಿಗೆ ಸಲಹೆ ನೀಡಿವೆ ಎಂದೂ ತಿಳಿದುಬಂದಿದೆ.
ಇನ್ನು, ಪಾಸ್‌ಪೋರ್ಟ್‌ಗಳಲ್ಲಿ ಸರ್‌ನೇಮ್‌ಗಳನ್ನು ಹೊಂದಿರದ ಭಾರತೀಯ ನಾಗರಿಕರಿಗೆ ಯುಎಇಯಿಂದ ಹೊರಕ್ಕೆ ಹೋಗಲು ಸಹ ಬಿಡುತ್ತಿಲ್ಲ ಎಂದು ದುಬೈ ಮೂಲದ ಖಲೀಜ್ ಟೈಮ್ಸ್ ವರದಿ ಮಾಡಿದೆ. ಹಲವು ಏರ್‌ಲೈನ್ಸ್‌ಗಳು ಇದೇ ನಿಯಮವನ್ನು ಪಾಲಿಸುತ್ತಿವೆ ಎಂದೂ ತಿಳಿದುಬಂದಿದೆ. ಈ ನಿಯಮ ಈಗಾಗಲೇ ಜಾರಿಗೆ ಬಂದಿದ್ದರೂ, ಟ್ರಾವೆಲ್ ಏಜೆಂಟ್‌ಗಳು ವೀಸಾಗೆ ಅರ್ಜಿ ಸಲ್ಲಿಸುವ ಮುನ್ನ ತಮ್ಮ ದಾಖಲೆಗಳಲ್ಲಿ ಬದಲಾವಣೆ ಮಾಡುವಂತೆ ಹಾಗೂ ಹೆಚ್ಚಿನ ವಿವರಗಳನ್ನು ನೀಡಲು ಸಹ ಕೇಳುತ್ತಿದ್ದಾರಂತೆ.
ಇದನ್ನೂ ಓದಿ: Bengaluru: 1.5 ಲಕ್ಷಕ್ಕೆ ನಕಲಿ ಪಾಸ್‌ಪೋರ್ಟ್ ದಂಧೆ ಬಯಲು: 9 ಮಂದಿ ಬಂಧನ