ಹೆಸರು ಬದಲಾವಣೆ ಮಾಡಿಕೊಂಡು ಅಕ್ರಮವಾಗಿ ಭಾರತದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಡಿಸಿಕೊಂಡು ಇಂಡಿಯನ್ ಪಾಸ್ ಪೋರ್ಟ್ ಮಾಡಿಸಿದ ನೇಪಾಳ ಪ್ರಜೆಯನ್ನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ (ನ.18): ಹೆಸರು ಬದಲಾವಣೆ ಮಾಡಿಕೊಂಡು ಅಕ್ರಮವಾಗಿ ಭಾರತದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಡಿಸಿಕೊಂಡು ಇಂಡಿಯನ್ ಪಾಸ್ ಪೋರ್ಟ್ ಮಾಡಿಸಿದ ನೇಪಾಳ ಪ್ರಜೆಯನ್ನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನರೇಶ್ ಕುಮಾರ್ (Naresh Kumar) ಎಂಬಾತ ನ.12 ರಂದು ಭಾರತೀಯ ಪಾಸ್ ಪೋರ್ಟ್ (Indian Passport) ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ (Nepal)ಕಠ್ಮಂಡುಗೆ ಪ್ರಯಾಣ ಬೆಳಸಿದ್ದನು. ಈತನ‌ ಚಲನವಲನಗಳನ್ನು ಗಮನಿಸಿ ಡಿಪಾರ್ಚರ್ ಇಮಿಗ್ರೇಷನ್ ಏರ್ ಕೌಂಟರ್ (Air Counter) ಬಳಿ ವಿಮಾನ ನಿಲ್ದಾಣದ ಸಿಬ್ಬಂದಿ ಈತನನ್ನ ವಿಚಾರಣೆ ನಡೆಸಿದಾಗ ನೇಪಾಳಿ ನ್ಯಾಷನಲ್ ಸಿಟಿಜನ್ ಶಿಫ್ ಕಾರ್ಡ್ (Nepal citizenship Card) ತೋರಿಸಿದ್ದಾನೆ. ಈತ ನೇಪಾಳ ದೇಶದ ಪ್ರಜೆಯಾಗಿದ್ದು, ಇವನ ನಿಜವಾದ ಹೆಸರು ಅಶ್ವಿನ್ ದಮೈ (Ashwin Damai) ಆಗಿರುತ್ತದೆ. 2005ರಲ್ಲಿ ಭಾರತಕ್ಕೆ ಬಂದಿದ್ದ ಈತ ತಮಿಳುನಾಡುನಾಡಿನಲ್ಲಿ ವಾಸವಾಗಿದ್ದನು. 

ಸ್ಥಳೀಯರ ಹೆಸರಿನಲ್ಲಿ ನಕಲಿ ದಾಖಲೆ: ನಂತರ ನರೇಶ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ (Adhar Card) ಮತ್ತು ಪಾನ್ ಕಾರ್ಡ್ (PAN Card) ಮಾಡಿಸಿಕೊಂಡು ಬಳಿಕ ಅಕ್ರಮವಾಗಿ ಇಂಡಿಯನ್ ಪಾಸ್ ಪೋರ್ಟ್ ಮಾಡಿಸಿಕೊಂಡು ಹಲವು ವರ್ಷ ಅಲ್ಲಿಯೇ ವಾಸವಾಗಿದ್ದನು. ಈಗ ನೇಪಾಳ ದೇಶದವನು ಎಂದು ಪತ್ತೆಯಾಧ ಬಳಿಕ ಈತನ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಫಾರಿನರ್‍ಸ ಆಕ್ಟ್ (Foreigners act) 1946, ಪಾಸ್ ಪೋರ್ಟ್ ಆಕ್ಟ್ 1967ರ ಆಡಿ ಪ್ರಕರಣ ದಾಖಲಿಸಲಾಗಿದೆ.