ಜಿಎಸ್‌ಟಿ ಗೋಲ್‌ಮಾಲ್‌ ಮಾಡುವವರ ಹೆಡೆಮುರಿ ಕಟ್ಟಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾಲವನ್ನು ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದೆ.

ನವದೆಹಲಿ: ಜಿಎಸ್‌ಟಿ ಗೋಲ್‌ಮಾಲ್‌ ಮಾಡುವವರ ಹೆಡೆಮುರಿ ಕಟ್ಟಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾಲವನ್ನು ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ, ತೆರಿಗೆ ವಂಚನೆ ಹಾಗೂ ಅಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಎಸ್‌ಟಿ ಜಾಲವು ಜಾರಿ ನಿರ್ದೇಶನಾಲಯ (ಇ.ಡಿ.)ದಂತಹ ತನಿಖಾ ಸಂಸ್ಥೆ ಜತೆ ಹಂಚಿಕೊಳ್ಳಬೇಕಾಗುತ್ತದೆ.

ಕೇಂದ್ರ ಸರ್ಕಾರದ ಈ ಕ್ರಮ ಬಿಜೆಪಿಯೇತರ ರಾಜ್ಯಗಳ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮಂಗಳವಾರ ನಡೆದ 50ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕರ್ನಾಟಕ (Karnataka), ದೆಹಲಿ, ಪಂಜಾಬ್‌, ಪಶ್ಚಿಮ ಬಂಗಾಳ, ತಮಿಳುನಾಡು (tamil Nadu), ಹಿಮಾಚಲಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ರಾಜಸ್ಥಾನ ರಾಜ್ಯಗಳು ಈ ವಿಷಯ ಪ್ರಸ್ತಾಪಿಸಿವೆ. ಜಿಎಸ್‌ಟಿ ಮಂಡಳಿಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿವೆ ಎಂದು ದೆಹಲಿ ಹಣಕಾಸು ಸಚಿವೆ ಅತಿಶಿ ಸುದ್ದಿಗಾರರಿಗೆ ತಿಳಿಸಿದರು. ಜಿಎಸ್‌ಟಿಯಡಿ ಯಾರಾದರೂ ವಂಚನೆ ಮಾಡಿದರೆ ಅವರನ್ನು ಜಿಎಸ್‌ಟಿ (GST) ಕಾನೂನುಗಳಡಿಯೇ ದಂಡಿಸಬೇಕು ಎಂದು ಒತ್ತಾಯಿಸಿದರು.

ಪಂಜಾಬ್‌ನ ಹಣಕಾಸು ಸಚಿವ ಹರ್ಪಲ್‌ ಸಿಂಗ್‌ ಚೀಮಾ ಅವರು ಕೇಂದ್ರ ನಡೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದಾರೆ. ಇದು ತೆರಿಗೆ ಭಯೋತ್ಪಾದನೆ ಹಾಗೂ ಸಣ್ಣ ಉದ್ದಿಮೆಗಳನ್ನು ಹೆದರಿಸುವ ಉದ್ದೇಶದಿಂದ ಕೂಡಿದೆ ಎಂದು ಹರಿಹಾಯ್ದಿದ್ದಾರೆ. ಒಬ್ಬ ವ್ಯಾಪಾರಿ ಜಿಎಸ್‌ಟಿ ಪಾವತಿಸಿಲ್ಲ ಎಂದರೆ ಆತನನ್ನು ಹಿಡಿಯಲು ಇ.ಡಿ.ಗೆ (ED) ಕೇಂದ್ರದ ಅಧಿಸೂಚನೆ ಅನುವು ಮಾಡಿಕೊಡುತ್ತದೆ. ಇಂತಹ ಕ್ರಮಗಳಿಂದ ದೇಶದಲ್ಲಿ ತೆರಿಗೆ ಭಯೋತ್ಪಾದನೆ ಹೆಚ್ಚುತ್ತದೆ. ಸಣ್ಣ ಉದ್ದಿಮೆದಾರರು ಹಾಗೂ ಶ್ರೀಸಾಮಾನ್ಯರಿಗೆ ಇದು ಅಪಾಯಕಾರಿ ಎಂದು ಚೀಮಾ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಚರ್ಚೆಯಾಗಬೇಕು ಎಂದು ಹಲವು ರಾಜ್ಯಗಳು ಒತ್ತಾಯಿಸಿವೆ ಎಂದಿದ್ದಾರೆ.

'ದೇಶದಲ್ಲಿ ಜಿಎಸ್‌ಟಿ ತೆರಿಗೆಯಂತೆ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಜಾರಿ'

ಇ.ಡಿ. ಮುಖ್ಯಸ್ಥ ಶರ್ಮಾಗೆ ನೀಡಿದ 3ನೇ ಅವಧಿ ವಿಸ್ತರಣೆ ಅಕ್ರಮ: ಸುಪ್ರೀಂ

ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರ ಅಧಿಕಾರಾವಧಿಯನ್ನು ಮೂರನೇ ಅವಧಿಗೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರದ ಕಾನೂನು ಬಾಹಿರ ಎಂದು ಘೋಷಿಸಿರುವ ಸುಪ್ರೀಂಕೋರ್ಚ್‌, ಮಿಶ್ರಾ ಅವರ ಅಧಿಕಾರಾವಧಿಗೆ ಕತ್ತರಿ ಹಾಕಿದೆ. ಮಿಶ್ರಾ ಅವರಿಗೆ ಮೂರನೇ ಬಾರಿ ಅಧಿಕಾರ ವಿಸ್ತರಣೆ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕರು ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಯ ಕುರಿತು ಮಂಗಳವಾರ ತೀರ್ಪು ನೀಡಿದ ನ್ಯಾ. ಬಿ.ಆರ್‌.ಗವಾಯ್‌, ವಿಕ್ರಮ್‌ನಾಥ್‌, ಸಂಜಯ್‌ ಕರೋಲ್‌ ಅವರನ್ನೊಳಗೊಂಡ ನ್ಯಾಯಪೀಠ, ‘ಸದ್ಯ ಜಾರಿ ನಿರ್ದೇಶನಾಲಯವು ಆರ್ಥಿಕ ಕಾರ್ಯಪಡೆಯ ಕೆಲಸಗಳನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅಧಿಕಾರ ಹಸ್ತಾಂತರವನ್ನು ಸರಳವಾಗಿ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ಮಿಶ್ರಾ ಅವರು ಮೇ 31ರವರೆಗೂ ಹುದ್ದೆಯಲ್ಲಿ ಮುಂದುವರೆಯಬಹುದು ಎಂದು ಹೇಳಿದೆ. ಕೇಂದ್ರ ಸರ್ಕಾರದ ಈ ಹಿಂದಿನ ಆದೇಶದ ಅನ್ವಯ ಮಿಶ್ರಾ ಅವರ ಅಧಿಕಾರಾವಧಿ 2023ರ ನ.18ರವರೆಗೂ ಇತ್ತು.

ಬರೋಬ್ಬರಿ 25,000 ಕೋಟಿ ರೂ. ಮೊತ್ತದ ನಕಲಿ ಜಿಎಸ್‌ಟಿ ಕ್ಲೇಮ್‌ ಪತ್ತೆ: ನಕಲಿ ದಾಖಲೆ ಸಲ್ಲಿಸಿ ವಂಚನೆ

2018ರಲ್ಲಿ ಮಿಶ್ರಾ ಅವರನ್ನು ಇ.ಡಿ. ಮುಖ್ಯಸ್ಥರಾಗಿ 2 ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಬಳಿಕ 2020ರಲ್ಲಿ ಕೇಂದ್ರ ಸರ್ಕಾರವು ನಿಯಮಗಳಿಗೆ ತಿದ್ದುಪಡಿ ತಂದು ಅವರ ನೇಮಕದ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೊರ್ಟ್, 2021ರ ನವೆಂಬರ್‌ ಬಳಿಕ ಮಿಶ್ರಾ ಅವರನ್ನು ಮುಂದುವರೆಸಬಾರದು ಎಂದು ಸೂಚಿಸಿತ್ತು. ಅದಾದ ಬಳಿಕ ವರ್ಷ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಿಶ್ರಾರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಿಸಿತ್ತು.