ಬರೋಬ್ಬರಿ 25,000 ಕೋಟಿ ರೂ. ಮೊತ್ತದ ನಕಲಿ ಜಿಎಸ್‌ಟಿ ಕ್ಲೇಮ್‌ ಪತ್ತೆ: ನಕಲಿ ದಾಖಲೆ ಸಲ್ಲಿಸಿ ವಂಚನೆ

ಕಳೆದ 2 ತಿಂಗಳಿಂದ ನಕಲಿ ಜಿಎಸ್‌ಟಿ ಜಾಲಗಳ ಮೇಲೆ ದಾಳಿ ನಡೆಯುತ್ತಿದ್ದು, ಈವರೆಗೆ ಇಂಥ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದ 304 ಸಿಂಡಿಕೇಟ್‌ಗಳನ್ನು ಪತ್ತೆ ಮಾಡಿ, ಅವು ಸೃಷ್ಟಿಸಿದ್ದ 9 ಸಾವಿರ ನಕಲಿ ಜಿಎಸ್‌ಟಿ ನಂಬರ್‌ ಪತ್ತೆ ಮಾಡಿದ್ದಾರೆ ಹಾಗೂ 25 ಸಾವಿರ ಕೋಟಿ ರೂ. ಮೌಲ್ಯದ ನಕಲಿ ಕ್ಲೇಮ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿಯ ಮುಖ್ಯಸ್ಥ ವಿವೇಕ್‌ ಜೋಹ್ರಿ ಮಾಹಿತಿ ನೀಡಿದ್ದಾರೆ.

gst officers bust 304 syndicates involving rs 25k crore fake itc claims ash

ನವದೆಹಲಿ (ಜುಲೈ 2, 2023): ನಕಲಿ ಜಿಎಸ್‌ಟಿ ಜಾಲಗಳನ್ನು ಭೇದಿಸಿರುವ ಸರಕು-ಸೇವಾ ತರಿಗೆ (ಜಿಎಸ್‌ಟಿ) ಅಧಿಕಾರಿಗಳು ಇಂಥ 304 ಸಿಂಡಿಕೇಟ್‌ಗಳನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಈ ಜಾಲವು 9 ಸಾವಿರ ನಕಲಿ ಜಿಎಸ್‌ಟಿ ನಂಬರ್‌ಗಳನ್ನು ಸೃಷ್ಟಿಸುವ ಮೂಲಕ 25 ಸಾವಿರ ಕೋಟಿ ರೂ. ಮೌಲ್ಯದ ಕ್ಲೇಮ್‌ಗಳನ್ನು ಮಾಡಿಕೊಂಡಿದ್ದವು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕಳೆದ 2 ತಿಂಗಳಿಂದ ನಕಲಿ ಜಿಎಸ್‌ಟಿ ಜಾಲಗಳ ಮೇಲೆ ದಾಳಿ ನಡೆಯುತ್ತಿದ್ದು, ಈವರೆಗೆ ಇಂಥ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದ 304 ಸಿಂಡಿಕೇಟ್‌ಗಳನ್ನು ಪತ್ತೆ ಮಾಡಿ, ಅವು ಸೃಷ್ಟಿಸಿದ್ದ 9 ಸಾವಿರ ನಕಲಿ ಜಿಎಸ್‌ಟಿ ನಂಬರ್‌ ಪತ್ತೆ ಮಾಡಿದ್ದಾರೆ ಹಾಗೂ 25 ಸಾವಿರ ಕೋಟಿ ರೂ. ಮೌಲ್ಯದ ನಕಲಿ ಕ್ಲೇಮ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿಯ ಮುಖ್ಯಸ್ಥ ವಿವೇಕ್‌ ಜೋಹ್ರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: 15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ

2017ರ ಜುಲೈ 1ರಂದು ಜಿಎಸ್‌ಟಿ ಜಾರಿಗೆ ಬಂದ ನಂತರ ಈವರೆಗೆ 1.39 ಲಕ್ಷ ವ್ಯಾಪಾರ ಸಂಸ್ಥೆಗಳು ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿವೆ. ಆದರೆ ಇನ್ನೂ ಕೆಲವು ವ್ಯಾಪಾರ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳದೇ ನಕಲಿ ಜಿಎಸ್‌ಟಿ ನಂಬರ್‌ ಸೃಷ್ಟಿಸಿ ಕಳ್ಳ ಮಾರ್ಗದ ಮೂಲಕ ಕ್ಲೇಮ್‌ಗಳನ್ನು ಸಲ್ಲಿಸುತ್ತಿವೆ ಎಂದು ಜೋಹ್ರಿ ಮಾಹಿತಿ ನೀಡಿದ್ದಾರೆ.

ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಕಳೆದ ಜೂನ್‌ಗಿಂತ ಶೇ.12ರಷ್ಟು ಹೆಚ್ಚು ತೆರಿಗೆ ಸಂಗ್ರಹ
ಜೂನ್‌ ತಿಂಗಳಲ್ಲಿ 1.61 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.12 ರಷ್ಟು ಹೆಚ್ಚು. ಜೊತೆಗೆ ಸತತ 4ನೇ ಬಾರಿ ಮಾಸಿಕ ಜಿಎಸ್‌ಟಿ ಸಂಗ್ರಹ 1.6 ಲಕ್ಷ ಕೋಟಿ ರೂ. ಗಡಿಯನ್ನು ದಾಟಿದಂತಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಜನ ಸಾಮಾನ್ಯರಿಗೆ ಗುಡ್‌ ನ್ಯೂಸ್‌: ಸಣ್ಣ ಉಳಿತಾಯ ಬಡ್ಡಿದರ ಏರಿಕೆ; 3 ಯೋಜನೆಗಳಿಗೆ ಹೆಚ್ಚಿನ ಬಡ್ಡಿ

ಜೂನ್‌ ತಿಂಗಳಿನಲ್ಲಿ 1,61,497 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ 31 ಸಾವಿರ ಕೋಟಿ ರೂ. ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ 38 ಸಾವಿರ ಕೋಟಿ ರೂ., ಸಂಯೋಜಿತ ಜಿಎಸ್‌ಟಿ 80 ಸಾವಿರ ಕೋಟಿ ರೂ. (39 ಸಾವಿರ ಕೋಟಿ ರೂ. ಆಮದು ಸುಂಕ ಸೇರಿ) ಮತ್ತು ಸೆಸ್‌ 11 ಸಾವಿರ ಕೋಟಿ ರೂ. (1 ಸಾವಿರ ಕೋಟಿ ರೂ. ಆಮದು ಸುಂಕ ಸೇರಿ) ಸೇರಿದೆ ಎಂದು ಹೇಳಿದೆ.

ಕಳೆದ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ.

ಇದನ್ನೂ ಓದಿ: ಷೇರುಪೇಟೆ ಮತ್ತೆ ದಾಖಲೆ ಎತ್ತರಕ್ಕೆ: 65 ಸಾವಿರದ ಸಮೀಪಕ್ಕೆ ತಲುಪಿದ ಸೆನ್ಸೆಕ್ಸ್‌; ನಿಫ್ಟಿ ಕೂಡ ಹೊಸ ದಾಖಲೆ

 

Latest Videos
Follow Us:
Download App:
  • android
  • ios