'ದೇಶದಲ್ಲಿ ಜಿಎಸ್‌ಟಿ ತೆರಿಗೆಯಂತೆ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಜಾರಿ'
ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆರಿಗೆ ಜಾರಿಯಲ್ಲಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈಎಸ್‌ಟಿ ತೆರಿಗೆಯನ್ನು ಜಾರಿಗೆ ತಂದಿದೆ
ಬೆಂಗಳೂರು (ಜು.02): ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆರಿಗೆ ಜಾರಿಯಲ್ಲಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈಎಸ್‌ಟಿ ತೆರಿಗೆಯನ್ನು ಜಾರಿಗೆ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸಾರ್ವಜನಿಕರ ಮೇಲೆ ಸರಕು ಮತ್ತು ಸೇವಾ ತೆರಿಗೆ (Goods and service tax-GST) ವಿಧಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಹೊಸದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈಎಸ್‌ಟಿ (ಯತೀಂದ್ರ ಸಿದ್ದರಾಮಯ್ಯ ತೆರಿಗೆ- Yathindra Siddaramaiah Tax) ಜಾರಿಗೆ ತರಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಾವಿನ ದವಡೆಯಲ್ಲಿದ್ದ ಮಕ್ಕಳಿಗೆ ಮರುಜನ್ಮ ನೀಡಿ, ಪ್ರಾಣಬಿಟ್ಟ ಮಹಾತಾಯಿ
ವೈಎಸ್‌ಟಿ ಟ್ಯಾಕ್ಸ್ ಎಂದರೇನು? : ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ಸಿಎಂ ಆದಾಗ ನಿಮ್ಮ ಮಂತ್ರಿಗಳು ಏನು ಮಾಡಿದ್ರ? ಪೊಗರುದಸ್ತ್ ಇಲಾಖೆ ನಿಮ್ಮ ಕಡೆಯವರು ಇಟ್ಟುಕೊಂಡಿದ್ದರು. ಯಾವುದೇ ವರ್ಗಾವಣೆ ಕೂಡ ನಾನು ಮಾಡುವಂತಿರಲಿಲ್ಲ. ಅವರ ಆದೇಶದಂತೆ ಎಲ್ಲಾ ನಡೆಯಬೇಕಿತ್ತು. ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಡ್ ಇಟ್ಟುಕೊಂಡು ಬಂದವರನ್ನ ಆಚೆ ಇಟ್ಟಿದ್ದೆ. ಯಲಹಂಕ ತಹಶಿಲ್ದಾರರ ಕಚೇರಿಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನ ಆಚೆ ಇಟ್ಟಿದ್ದೆ. ಇದು ನಮ್ಮ ಕಾಲದಲ್ಲಿ ನಡೆದಿದ್ದು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‌ಟಿ ಟ್ಯಾಕ್ಸ್ ಜಾರಿಯಲ್ಲಿದೆ ಎಮದು ಹೇಳುತ್ತಿದ್ದಾರೆ. ಎಲ್ಲ ವರ್ಗಾವಣೆಗೂ ಸರ್ಕಾರಿ ನೌಕರರು ವೈಎಸ್‌ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಮಪಾವತಿಸಬೇಕು. ಅದನ್ನು ನಾನು ಪತ್ತೆ ಮಾಡಿ ಆಮೇಲೆ ಮಾತಾಡ್ತೀನಿ. ನಾನು ಒಂದು ರೂಪಾಯಿ ತೆಗೆದುಕೊಳ್ಳದೆ ಟ್ರಾನ್ಫರ್ ಮಾಡಿದ್ದೀನಿ. ನನಗೆ ಯಾವುದಕ್ಕೂ ಭಯ ಇಲ್ಲ. ರಾಜ್ಯಪಾಲರು ಭಾಷಣ ಮಾಡಿದ ಮೇಲೆ ನೋಡೋಣ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸರ್ಕಾರ ರಚನೆಯಾಗಿ 50 ದಿನ ಆಗಿದೆ. ನಾವು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ನಾಯಕರ ಅಭಿಪ್ರಾಯ ಕೇಳಲಾಗುತ್ತದೆ. ನಾಳೆಯಿಂದ ಆರಂಭವಾಗುವ ಸರ್ಕಾರದ ಅಧಿವೇಶನದಲ್ಲಿ ನಮ್ಮ ಪಕ್ಷದ ನಿಲುವೇನು? ಸರ್ಕಾರದ ನಡವಳಿಕೆಯಿಂದ ಜನರ ಅಭಿಪ್ರಾಯ ಏನು ಹಾಗೂ ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು ಎಂದು ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ ದುರಂತ!
ಜನರನ್ನು ಎಷ್ಟು ದಿನ ಭಿಕ್ಷುಕರಂತೆ ಇಡ್ತೀರಾ?
ನಾನು ಮುಖ್ಯವಾಗಿ ಸರ್ಕಾರಕ್ಕೆ ಇನ್ನು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ ಎಂದು ಹೇಳಿದರು. ದೇಶಕ್ಕೆ ಸ್ವತಂತ್ರ ಬಂದು 70 ವರ್ಷ ಆಗಿದೆ. ಜನರನ್ನು ಇನ್ನೂ ಎಷ್ಟು ವರ್ಷಗಳ ಸರ್ಕಾರದ ಮುಂದೆ ಕೈ ಚಾಚುವಂತೆ ಮಾಡುತ್ತೀರಿ? ಇಂಥ ಸಣ್ಣ ಮಟ್ಟದ ಯೋಜನೆಗಳನ್ನು ಜನರಿಗೆ ನೀಡಿ, ಸರ್ಕಾರ ರಚನೆಗಾಗಿ ಆಸೆ ಆಮಿಷಗಳನ್ನು ಜನರಿಗೆ ಕೊಟ್ಟಿದ್ದೀರಾ. ಇದರಿಂದ ಜನ ಕೈ ಚಾಚುವಂತೆ ಮಾಡಿದ್ದೀರಾ. ಇನ್ನು ಎಷ್ಟು ದಿನ ಜನರನ್ನು ಭಿಕ್ಷುಕರ ರೀತಿ ಇಡುತ್ತೀರ ಅಂತ ಪ್ರಶ್ನೆ ಮಾಡ್ತೀನಿ ಎಂದು ಹೇಳಿದರು.