ಸಾಫ್ಟ್‌ವೇರ್ ಉದ್ಯೋಗ ಸಾಕು ಎಂದು 42ನೇ ವಯಸ್ಸಿಗೆ ಕೆಲಸ ಬಿಟ್ಟ ಟೆಕ್ಕಿ ಊರಿಗೆ ಮರಳಿ ಹೊಸ ಜೀವನ ಆರಂಭಿಸಿದ್ದಾರೆ. ವಿಶೇಷ ಅಂದರೆ ತಿಂಗಳಿಗೆ 1.5 ಲಕ್ಷ ರೂಪಾಯಿ ಆದಾಯಗಳಿಸಿ ಇದೀಗ ಯಶಸ್ವಿಯಾಗಿದ್ದಾರೆ.
ಸಾಫ್ಟ್‌ವೇರ್ ಸೇರಿ ಐಟಿ ಕ್ಷೇತ್ರದ ಉದ್ಯೋಗದಲ್ಲಿ ಭದ್ರತೆ ಸಮಸ್ಯೆ, ಕೆಲಸದ ಒತ್ತಡ ಸೇರಿದಂತೆ ಸಮಸ್ಯೆಗಳು ನೂರಾರು. ಉತ್ತಮ ಸ್ಯಾಲರಿ ಇದ್ದರೂ ನೆಮ್ಮದಿ ಇರಲ್ಲ. ಇತ್ತೀಚೆಗೆ ಎಐನಿಂದ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದ್ದಾರೆ. 40ರ ವಯಸ್ಸಿಗೆ ಕೆಲಸ ಹುಡುಕುವ ಅನಿವಾರ್ಯತೆ ಎದುರಾಗುತ್ತಿದೆ. ವರ್ಷಕ್ಕೆ 18 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಿದ್ದಾರೆ. ಬಳಿಕ ಸ್ವಂತ ಉದ್ಯಮ ಆರಂಭಿಸಿ ಇದೀಗ ತಿಂಗಳಿಗೆ 1.5 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಜೊತೆಗೆ ಯಾವ ಟಾರ್ಗೆಟ್, ಒತ್ತಡವಿಲ್ಲದೆ ನೆಮ್ಮದಿ ದೀವನ ನಡೆಸುತ್ತಿದ್ದಾರೆ.
ಊರಿಗೆ ಮರಳಿ ಸ್ವಂತ ಉದ್ಯಮದಲ್ಲಿ ಯಶಸ್ಸು
ಅಮಿತ್ ಸಿಂಗ್ ಸಾಫ್ಟ್‌ವೇರ್ ಕೆಲಸ ಬಿಟ್ಟಾಗ ಊರಿನ ಹಲವರು, ಆಪ್ತರು ಎಲ್ಲರೂ ಪ್ರಶ್ನಿಸಿದ್ದರು. 18 ಲಕ್ಷ ರೂಪಾಯಿ ಕೆಲಸ ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ದೃಢ ನಿರ್ಧಾರ ಮಾಡಿದ್ದ ಟೆಕ್ಕಿ ತವರಿಗೆ ಮರಳಿ ಆರ್ಗಾನಿಕ್ ಡೈರಿ ಫಾರ್ಮಿಂಗ್ ಆರಂಭಿಸಿದ್ದರು. ಇದೀಗ ಅತ್ಯಂತ ಯಶಸ್ವಿ ಉದ್ಯಮಿಯಾಗಿರುವ ಟೆಕ್ಕಿ ತಿಂಗಳಿಗೆ 1.5 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ.
ಐಟಿ ಕ್ಷೇತ್ರದಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದ್ದ ಅಮಿತ್ ಸಿಂಗ್ 42ನೇ ವಯಸ್ಸಿಗೆ ತನಗೆ ಟೆಕ್ಕಿ ಕೆಲಸ ಸಾಕು ಎಂದನೆಸಿದೆ. ಒಂದೆಡೆ ಕೆಲಸದ ಒತ್ತಡ, ಮತ್ತೊಂದೆಡೆ ಕಂಪನಿಗಳ ಉದ್ಯೋಗ ಕಡಿತ ಸೇರಿದಂತೆ ಹಲವು ಕಾರಣಗಳು ಅಮಿತ್ ಸಿಂಗ್ ಭಿನ್ನ ರೀತಿಯಲ್ಲಿ ಯೋಚಿಸುವಂತೆ ಮಾಡಿತ್ತು. ತನ್ನ ಊರಿನಲ್ಲಿ ಪೋಷಕರ ಜೊತೆ ಇದ್ದು ಪ್ರಕೃತಿ ಜೊತೆಗೆ ಕೆಲಸ ಮಾಡಲು ಬಯಸಿದ್ದರು. ಇದಕ್ಕಾಗಿ ಹಲವು ಬಾರಿ ಯೋಚಿಸಿದ್ದರು. ಇಷ್ಟೇ ಅಲ್ಲ ಹಲವರ ಸಂಪರ್ಕಿಸಿ ತಾನು ಏನು ಮಾಡಬುಹುದು ಎಂದು ಚರ್ಚಿಸಿದ್ದರು. ಕಡಿಮೆ ಬಂಡವಾಳದಲ್ಲಿ ಆರಂಭಿಸಿ ಹಂತ ಹಂತವಾಗಿ ವಿಸ್ತರಣೆ ಮಾಡಲು ಅಮಿತ್ ಸಿಂಗ್ ಪ್ಲಾನ್ ಮಾಡಿಕೊಂಡಿದ್ದರು.
ಆರ್ಗಾನಿಕ್ ಡೈರಿ ಫಾರ್ಮಿಂಗ್ ಮೂಲಕ ಕ್ರಾಂತಿ
ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಆಹಾರ ಪದಾರ್ಥಗಳು, ತಿನಿಸುಗಳು, ಸೇರಿದಂತೆ ಉತ್ಪನ್ನಗಳು ಕಲಬೆರೆಕೆ, ರಾಸಾಯನಿಕ ಗಳಿಂದ ಕೂಡಿರುತ್ತದೆ. ಆರೋಗ್ಯಕ್ಕೆ ಅತೀವ ಸಮಸ್ಯೆ ಸೃಷ್ಟಿಸುತ್ತಿದೆ. ಹೀಗಾಗಿ ನೈಸರ್ಗಿಕವಾಗಿ ಗ್ರಾಹಕರಿಗೆ ಉತ್ಪನ್ನ ತಲುಪಿಸಲು ಅಮಿತ್ ಸಿಂಗ್ ಮುಂದಾಗಿದ್ದರು. ಆರ್ಗಾನಿಕ್ ಡೈರಿ ಆರಂಭಿಸಿ ಶುದ್ದ ಹಸುವಿನ ಹಾಲು, ಡೈರಿ ಉತ್ಪನ್ನಗಳು ಸೇರಿದಂತೆ ಹಲವು ಆರ್ಗಾನಿಕ್ ಉತ್ಪನ್ನಗಳನ್ನು ಆರಂಭಿಸಿ ಇದೀಗ ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದಾರೆ. ಹಲವರಿಗೆ ಉದ್ಯೋಗ ನೀಡಿ ತಿಂಗಳಿಗೆ 1.5 ಲಕ್ಷ ರೂಪಾಯಿ ಲಾಭ ಮಾಡುತ್ತಿದ್ದಾರೆ.
ಆರಂಭದಲ್ಲಿ ತನ್ನ ಊರು, ಜಿಲ್ಲೆಗೆ ಶುದ್ದ ಹಾಲು ಹಾಗೂ ಹಾಲಿನ ಉತ್ಪನ್ನಗಳು ತಲುಪುತ್ತಿತ್ತು. ಇದೀಗ ಅಮಿತ್ ಸಿಂಗ್ ಆರ್ಗಾನಿಕ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ. ಅದೇ ಗುಣಮಟ್ಟದಲ್ಲಿ ಉತ್ಪನ್ನ ನೀಡುತ್ತಿರುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ. ಆರ್ಗಾನಿಕ್ ಡೈರಿಯಲ್ಲಿ ಅಮಿತ್ ಸಿಂಗ್ ಯಶಸ್ಸು ಸಾಧಿಸಿದ್ದಾರೆ.


