Business News : ಸಕ್ಕರೆ ತಿನ್ನೋದ ಈಗ್ಲೇ ಕಡಿಮೆ ಮಾಡಿಲ್ಲ ಅಂದ್ರೆ ಪರ್ಸ್ ಖಾಲಿಯಾಗುತ್ತೆ…

ಸಕ್ಕರೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಉತ್ಪಾದನೆಗೆ ತಕ್ಕಂತೆ ಸಕ್ಕರೆಗೆ ಭಾರತದಲ್ಲಿ ಬೇಡಿಕೆಯೂ ಇದೆ. ಆದ್ರೆ ಈಗಿನ ದಿನಗಳಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಿದ್ದು, ಬೆಲೆ ಏರಿಕೆ ಸಾಧ್ಯತೆ ದಟ್ಟವಾಗಿದೆ.
 

Sugar Production In India Has Been Decreased Know

ಸಕ್ಕರೆ ನಮ್ಮ ಆಹಾರದ ಒಂದು ಭಾಗವಾಗಿದೆ. ಮಿತಿವಾಗಿ ಸಕ್ಕರೆ ಸೇವನೆ ಮಾಡೋದ್ರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಆದ್ರೆ ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡೋದು ಒಳ್ಳೆಯದಲ್ಲ. ಡಯಟ್ ನಲ್ಲಿರುವವರು ಸಕ್ಕರೆಯಿಂದ ದೂರವಿರಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಅದೇ ರೀತಿ ಮಧುಮೇಹಿಗಳಿಗೆ ಸಕ್ಕರೆ ಶತ್ರು ಎನ್ನಬಹುದು. ಕುಟುಂಬದಲ್ಲಿ ಮಧುಮೇಹಿಗಳು ಇರಲಿ ಬಿಡಲಿ ಮನೆಯಲ್ಲಿ ಸಕ್ಕರೆ ಇದ್ದೇ ಇರುತ್ತೆ. ಟೀ, ಕಾಫಿಯಿಂದ ಹಿಡಿದು ಪ್ರತಿಯೊಂದು ಸಿಹಿ ಪದಾರ್ಥಕ್ಕೂ ಸಕ್ಕರೆ ಬೆರೆಸಿದ್ರೆ ಅದ್ರ ರುಚಿ ಡಬಲ್ ಆಗುತ್ತೆ. 

ಎಲ್ಲರೂ ಸಕ್ಕರೆ (Sugar) ಬಳಕೆ ಮಾಡೋದ್ರಿಂದ ಅದ್ರ ಬೆಲೆ ಕೂಡ ನಮ್ಮ ಆರ್ಥಿಕ (Financial) ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆ ಬೆಲೆ ಇಳಿದ್ರೆ ನಮ್ಮ ಬಜೆಟ್ (Budget) ನಲ್ಲಿ ಸ್ವಲ್ಪ ಸುಧಾರಣೆ ಕಾಣ್ತೇವೆ. ಅದೇ ಸಕ್ಕರೆ ಬೆಲೆ ಏರಿಕೆಯಾದ್ರೆ ಬಜೆಟ್ ಹೊಣೆಯಾಗುತ್ತದೆ. ಇನ್ಮುಂದೆ ಸಕ್ಕರೆಗಾಗಿ ನೀವು ಹೆಚ್ಚಿನ ಹಣವನ್ನು ಮೀಸಲಿಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಯಾಕೆಂದ್ರೆ ಈಗ ಸಕ್ಕರೆ ಉತ್ಪಾದನೆ ಕಡಿಮೆಯಾಗ್ತಿದೆ. ಉತ್ಪಾದನೆ ಕಡಿಮೆಯಾಗ್ತಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಬೆಲೆ ಏರೋದು ಮಾಮೂಲಿ. ನಮ್ಮ ದೇಶದಲ್ಲಿ ಸಕ್ಕರೆ ಉತ್ಪಾದನೆ ಹೇಗಿದೆ ಹಾಗೆ ಅದ್ರ ಬೇಡಿಕೆ ಎಷ್ಟಿದೆ ಎಂಬುದನ್ನು ನಾವಿಂದು ನಿಮಗೆ ತಿಳಿಸ್ತೇವೆ.

Personal Finance : ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮಾಡಬೇಕಾದ ಕೆಲಸವಿದು!

ದೇಶದಲ್ಲಿ ಕಡಿಮೆಯಾಗಿದೆ ಸಕ್ಕರೆ ಉತ್ಪಾದನೆ : ದೇಶದಲ್ಲಿ ಸಕ್ಕರೆ ಉತ್ಪಾದನೆ ಎಷ್ಟಾಗ್ತಿದೆ ಎನ್ನುವ ಬಗ್ಗೆ ಸರ್ಕಾರ ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಏಪ್ರಿಲ್ 15ರವರೆಗೆ ಸಕ್ಕರೆ ಉತ್ಪಾದನೆ ಶೇಕಡಾ 6ರಷ್ಟು ಇಳಿಕೆಯಾಗಿದೆ. 3 ಕೋಟಿ 11 ಲಕ್ಷ ಟನ್‌ಗಳಿಗೆ ಸಕ್ಕರೆ ಉತ್ಪಾದನೆ ಇಳಿದಿದೆ. ಮಾಧ್ಯಮ ವರದಿಗಳ ಪ್ರಕಾರ, ಉದ್ಯಮ ಸಂಸ್ಥೆ ಐಎಸ್ ಎಂಎ ಪ್ರಕಾರ, ಮಾರುಕಟ್ಟೆ ವರ್ಷ 2021-22ರ ಇದೇ ಅವಧಿಯಲ್ಲಿ ಸಕ್ಕರೆ ಉತ್ಪಾದನೆ 3 ಕೋಟಿ 28.7 ಲಕ್ಷ ಟನ್‌ಗಳಷ್ಟಿತ್ತು. ಆದರೆ ಈ ವರ್ಷ ಅದು 17 ಲಕ್ಷ ಟನ್‌ಗೆ ಇಳಿದಿದೆ.

ಎಲ್ಲೆಲ್ಲಿ ಕಡಿಮೆಯಾಗಿದೆ ಉತ್ಪಾದನೆ? : ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ಕರೆ ಉತ್ಪಾದನೆಯಾಗುತ್ತದೆ. ಆದ್ರೆ ಈ ಬಾರಿ ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ ಇಳಿದಿದೆ. ಮಹಾರಾಷ್ಟ್ರದಲ್ಲಿ ಕಳೆದ ಹಂಗಾಮಿನಲ್ಲಿ 12.65 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಈ ವರ್ಷ 10.5 ಮಿಲಿಯನ್ ಟನ್‌ ಉತ್ಪಾದನೆಯಾಗಿದೆ. ಇನ್ನು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆಯು 58 ಲಕ್ಷ ಟನ್‌ಗಳಿಂದ 55.3 ಲಕ್ಷ ಟನ್‌ಗಳಿಗೆ ಇಳಿದಿದೆ.

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

ಯುಪಿಯಲ್ಲಿ ಹೆಚ್ಚಾದ ಉತ್ಪಾದನೆಯಿಂದ ಸ್ವಲ್ಪ ನೆಮ್ಮದಿ : ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ರಾಜ್ಯದಲ್ಲಿ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಖುಷಿ ಸುದ್ದಿ ಅಂದ್ರೆ ಉತ್ತರ ಪ್ರದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗ್ತಿದೆ. ಕಳೆದ ಹಂಗಾಮಿನಲ್ಲಿ 94.4 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಈ ಬಾರಿ ಅಕ್ಟೋಬರ್ 1, 2022 ರಿಂದ ಏಪ್ರಿಲ್ 15, 2023 ರವರೆಗೆ 96.6 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. 

ಸರ್ಕಾರಕ್ಕೆ ಶುರುವಾಗಿದೆ ತಲೆಬಿಸಿ : ಉತ್ತರ ಪ್ರದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ ನಿಜ. ಆದ್ರೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಇಳಿಕೆಯಾಗಿರುವ ಕಾರಣ ಸರ್ಕಾರಕ್ಕೆ ತಲೆಬಿಸಿ ಶುರುವಾಗಿದೆ. 2022-23ರ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 3.40 ದಶಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಸಕ್ಕರೆ ಉತ್ಪಾದನೆಯು 3.58 ದಶಲಕ್ಷ ಟನ್‌ಗಳಷ್ಟಿತ್ತು. ಅಂದ್ರೆ ಈ ಬಾರಿ ಭಾರತದಲ್ಲಿ 18 ಲಕ್ಷ ಟನ್ ಗಳಷ್ಟು ಸಕ್ಕರೆ ಉತ್ಪಾದನೆ ಕಡಿಮೆಯಾಗ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಸಕ್ಕರೆ ಉತ್ಪಾದನೆಯಲ್ಲಿನ ಇಳಿಕೆ ಭಾರತಕ್ಕೆ ಕಳವಳಕಾರಿ ವಿಷಯವಾಗಿದೆ.

Latest Videos
Follow Us:
Download App:
  • android
  • ios