Asianet Suvarna News Asianet Suvarna News

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

ಗೃಹಸಾಲ ಪಡೆಯೋದು ಈಗ ಕಷ್ಟದ ಕೆಲಸವೇನಲ್ಲ. ನೀವು ಗೃಹಸಾಲಕ್ಕೆ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ಸಾಲದ ಜೊತೆಗೆ ಕೆಲವು ಪ್ರಯೋಜನಗಳನ್ನು ಕೂಡ ಪಡೆಯಬಹುದು. ಹಾಗಾದ್ರೆ ಗೃಹಸಾಲದಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು? ಇಲ್ಲಿದೆ ಮಾಹಿತಿ. 
 

Applying for Home Loan For First Time You Can Claim tax OD Benefits anu
Author
First Published Apr 18, 2023, 1:27 PM IST

Business Desk:ಸ್ವಂತ ಮನೆ ಹೊಂದಬೇಕು ಎಂಬುದು ಎಲ್ಲರ ಬದುಕಿನ ದೊಡ್ಡ ಕನಸು. ಈಗಂತೂ ಮನೆ ಖರೀದಿಗೆ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ನೀಡುವ ಕಾರಣ ಕನಸಿನ ಮನೆ ಖರೀದಿಸೋದು ಕಷ್ಟದ ಕೆಲಸವೇನಲ್ಲ. ವ್ಯಕ್ತಿಯ ಆದಾಯ, ಸಾಲ ಮರುಪಾವತಿ ಸಾಮರ್ಥ್ಯ ಆಧರಿಸಿ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇತ್ತೀಚಿನ ದಿನಗಳಲ್ಲಂತೂ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಬೆಳವಣಿಗೆ ಕಂಡಿರುವ ಕಾರಣ ಸಾಲ ಪಡೆಯೋ ಪ್ರಕ್ರಿಯೆ ಕೂಡ ಸರಳ ಹಾಗೂ ಸುಲಭವಾಗಿದೆ. ಆದರೆ, ನೀವು ಮೊದಲ ಬಾರಿಗೆ ಗೃಹ ಸಾಲ ಪಡೆಯುತ್ತಿದ್ದರೆ ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳೋದು ಅಗತ್ಯ. ತಂತ್ರಜ್ಞಾನ ಬೆಳವಣಿಗೆ ಕಾರಣಕ್ಕೆ ಇಂದು ಡಿಜಿಟಲ್ ಸಾಲ ನೀಡುವ ಸಂಸ್ಥೆಗಳು ಕೂಡ ಹೆಚ್ಚಿವೆ. ಯಾವ ಸಂಸ್ಥೆಯಿಂದ ಗೃಹ ಸಾಲ ಪಡೆಯಬೇಕು, ಉತ್ತಮ ಬಡ್ಡಿದರ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಹೊಂದಿರುವ ಜೊತೆಗೆ ಗೃಹ ಸಾಲದಿಂದ ಸಿಗುವ ಕೆಲವು ಪ್ರಯೋಜನಗಳ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ.

ಯಾವೆಲ್ಲ ಪ್ರಯೋಜನಗಳಿವೆ?
ನೀವು ಮೊದಲ ಬಾರಿಗೆ ಗೃಹ ಸಾಲಕ್ಕೆ (Home loan) ಅರ್ಜಿ ಸಲ್ಲಿಸುತ್ತಿದ್ದರೆ ಕೆಲವೊಂದು ವಿಚಾರಗಳ ಮಾಹಿತಿ ಹೊಂದಿರೋದು ಅಗತ್ಯ. ಗೃಹ ಸಾಲದಿಂದ ನೀವು ಕೆಲವೊಂದು ಪ್ರಯೋಜನಗಳನ್ನು ಕೂಡ ಪಡೆಯಬಹುದು. ಏನವು? ಇಲ್ಲಿದೆ ಮಾಹಿತಿ.

SBI ಅಮೃತ್ ಕಲಶ್ ವಿಶೇಷ ಎಫ್ ಡಿ ಯೋಜನೆ ಮತ್ತೆ ಪ್ರಾರಂಭ; ಈ ಬಾರಿ ಬಡ್ಡಿ ಎಷ್ಟು?

ತೆರಿಗೆ ವಿನಾಯ್ತಿ: ಸೆಕ್ಷನ್ 24(b) ಅಡಿಯಲ್ಲಿ ಒಂದು ಆರ್ಥಿಕ ಸಾಲಿನಲ್ಲಿ ಪಾವತಿಸಿದ ಬಡ್ಡಿ (Interest) ಮೊತ್ತಕ್ಕೆ 2ಲಕ್ಷ ರೂ. ತನಕ ತೆರಿಗೆ ವಿನಾಯ್ತಿ  (Tax exemption)ಪಡೆಯಬಹುದು. ಹಾಗೆಯೇ ಸೆಕ್ಷನ್ 80 ಸಿ ಅಡಿಯಲ್ಲಿ ಪಾವತಿಸಿದ ಪ್ರಿನ್ಸಿಪಲ್ ಮೊತ್ತಕ್ಕೆ 1,50,000ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು.

ಓವರ್ ಡ್ರಾಫ್ಟ್ ಸೌಲಭ್ಯ: ಒಂದು ವೇಳೆ ಒಬ್ಬ ವ್ಯಕ್ತಿ ನಿರಂತರ ಲಿಕ್ವಿಡಿಟಿ ಬಯಸುತ್ತಿದ್ರೆ, ಆತ ಓವರ್ ಡ್ರಾಫ್ಟ್ (OD) ಸೌಲಭ್ಯ ಹೊಂದಿರುವ ಟಾಪ್-ಅಪ್ (Top Up) ಗೃಹಸಾಲ ಪಡೆಯಬಹುದು. ಕೆಲವು ಹಣಕಾಸು ಸಂಸ್ಥೆಗಳು ಗೃಹ ಸಾಲ ಟಾಪ್ -ಅಪ್ ನಲ್ಲಿ OD ಸೌಲಭ್ಯ ನೀಡುತ್ತವೆ. ಗೃಹ ಸಾಲವನ್ನು ತ್ವರಿತವಾಗಿ ಪಾವತಿಸಲು ಬಯಸುವ ಸಾಲಗಾರರು (Borrower) ಹಾಗೂ ಬಡ್ಡಿ (Interest rate) ಮೇಲೆ ಹಣ ಉಳಿತಾಯ ಮಾಡಲು ಬಯಸೋರು OD ಸೌಲಭ್ಯ ಬಳಸಿಕೊಳ್ಳಬಹುದು.

7th Pay Commission:ಈ ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ

ಸಹ ಅರ್ಜಿದಾರಳಾಗಿ ಮಹಿಳೆ: ಮಹಿಳಾ ಸಾಲಗಾರ್ತಿ ಅಥವಾ ಸಹ ಸಾಲಗಾರರು ಇದ್ರೆ ನಿಮಗೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲ ಬಾರಿಗೆ ಮನೆ ಖರೀದಿಸುತ್ತಿರೋರು ಮಹಿಳೆಯನ್ನು ಸಹ ಅರ್ಜಿದಾರರನ್ನಾಗಿ ಹೊಂದಿದ್ರೆ ಅನೇಕ ಹಣಕಾಸು ಸಂಸ್ಥೆಗಳಲ್ಲಿ ನಿಮಗೆ ಬಡ್ಡಿದರದಲ್ಲಿ ರಿಯಾಯ್ತಿ ನೀಡಲಾಗುತ್ತದೆ. ಮಹಿಳೆಯು ಸಹ ಅರ್ಜಿದಾರಳಾಗಿದ್ದು, ಮನೆಯಲ್ಲಿ ಪಾಲುದಾರಳಾಗಿದ್ದರೆ ಪ್ರತಿ ಹಣಕಾಸು ಸಾಲಿನಲ್ಲಿ 1.5ಲಕ್ಷ ರೂ. ತನಕ ಹೆಚ್ಚುವರಿ ಬಡ್ಡಿ ಕಡಿತದ ಸೌಲಭ್ಯ ಪಡೆಯಲು ಕೂಡ ಅವಕಾಶವಿದೆ. 

ಗಳಿಕೆ ಹೊಂದಿರುವ ಸಹ ಅರ್ಜಿದಾರರು: ಉದ್ಯೋಗ ಹೊಂದಿರುವ ಅಥವಾ ಮಾಸಿಕ ಆದಾಯ ಹೊಂದಿರುವ ವ್ಯಕ್ತಿಯನ್ನು ಗೃಹಸಾಲಕ್ಕೆ ಸಹ ಅರ್ಜಿದಾರರನ್ನಾಗಿ ಹೊಂದುವುದರಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ನಿಮಗೆ ಸಾಲ ಸಿಗುವ ಸಾಧ್ಯತೆ ಹೆಚ್ಚುತ್ತದೆ, ಇನ್ನು ಇಬ್ಬರ ಮೇಲೂ ಸಾಲ ಮರುಪಾವತಿಯ ಸಮಾನ ಜವಾಬ್ದಾರಿ ಇರುತ್ತದೆ. ಇನ್ನು ಆದಾಯ ತೆರಿಗೆ ವಿನಾಯ್ತಿ ಸೌಲಭ್ಯ ಕೂಡ ಇಬ್ಬರಿಗೂ ಸಿಗುತ್ತದೆ. ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ಕೆಲವರು ಈ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಹೊಂದಿರೋದಿಲ್ಲ. ಹೀಗಾಗಿ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಅವರಿಗೆ ಸಾಧ್ಯವಾಗೋದಿಲ್ಲ.

Follow Us:
Download App:
  • android
  • ios