ಸ್ವಾಮಿ 'ಅರ್ಥ' ಬದಲಾಯ್ತು: 'ಸಮಾಜ'ವೇ ಮುಖ್ಯ ಎಂದು 'ವಾದ' ಮಾಡಿದ್ದಾಯ್ತು!
ಬಲಪಂಥೀಯ ಸುಬ್ರಮಣಿಯನ್ ಸ್ವಾಮಿ ಅರ್ಥ ನೀತಿ ಬದಲಾಯಿತೇ?| ಬಲಪಂಥೀಯ ರಾಜಕಾರಣದ ವಾತಾವರಣದಲ್ಲಿ ಉಸಿರಾಡುವ ಬಂಡವಾಳವಾದ| ಬಲಪಂಥೀಯ ರಾಜಕಾರಣದ ಪ್ರಮುಖ ದಾವೆದಾರ ಸುಬ್ರಮಣಿಯನ್ ಸ್ವಾಮಿ| ಉತ್ತಮ ಆರ್ಥಿಕ ವ್ಯವಸ್ಥೆಗೆ ಹೊಸ ಮಾರ್ಗ ಅನ್ವೇಷಿಸಿದ ಬಿಜೆಪಿ ಹಿರಿಯ ನೇತಾರ| ಅಮೆಜಾನ್, ಫ್ಲಿಪ್‌ಕಾರ್ಟ್‌ಗಳ ವಿರುದ್ಧ ಸಿಡಿದೆದ್ದ ಸುಬ್ರಮಣಿಯನ್ ಸ್ವಾಮಿ| ಅಮೆಜಾನ್, ಫ್ಲಿಪ್‌ಕಾರ್ಟ್‌ಗಳೇಕೆ ಭಾರತದಲ್ಲಿರಬೇಕು ಎಂದು ಪ್ರಶ್ನಿಸಿದ ಸ್ವಾಮಿ| ದೇಶೀಯ ವರ್ತಕರ ವ್ಯಾಪಾರ ಕ್ರಮ ಉತ್ತೇಜನಕ್ಕೆ ಸುಬ್ರಮಣಿಯನ್ ಸ್ವಾಮಿ ಆಗ್ರಹ| ದೇಶೀಯ ವರ್ತಕರು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದ ರಾಜ್ಯಸಭಾ ಸದಸ್ಯ| 'ಸ್ಥಳೀಯ ವರ್ತಕರನ್ನು ಉತ್ತೇಜಿಸುವ ಆರ್ಥಿಕ ನೀತಿ ಇಂದಿನ ತುರ್ತು ಅಗತ್ಯ'| ಪ್ರಧಾನಿ ಮೋದಿ ಪ್ರಣೀತ ಆರ್ಥಿಕ ನೀತಿಗಳಿಗೆ ಸುಬ್ರಮಣಿಯನ್ ಸ್ವಾಮಿ ಬೇಸರ?| ದೇಶೀಯ ಸಂಸ್ಕೃತಿಗೆ ಹತ್ತಿರವಾದ ಆರ್ಥಿಕ ನೀತಿ ಅಳವಡಿಸಿಕೊಳ್ಳುವಂತೆ ಮೋಹನ್ ಭಾಗವತ್ ಸಲಹೆ|
ನವದೆಹಲಿ(ಅ.21): ಬಲಪಂಥೀಯತೆಯಲ್ಲಿ ಬಂಡವಾಳದ ಮೆರೆಯುವಿಕೆ ಸಾಮಾನ್ಯ. ಬಂಡವಾಳವಾದ ಉಸಿರಾಡುವುದೇ ಬಲಪಂಥೀಯ ರಾಜಕಾರಣದ ವಾತಾವರಣದಲ್ಲಿ. ಸಮಾಜ ಸಂಘಟನೆಗೆ, ಸಮಾಜದ ಬಲವರ್ಧನೆಗೆ, ಆರೋಗ್ಯಕರ ಆರ್ಥಿಕ ಉನ್ನತಿಗೆ ಬಂಡವಾಳವಾದ ಉತ್ತಮ ಎಂಬುದು ಬಲಪಂಥೀಯರ ವಾದ.
ಅದರಂತೆ ಬಲಪಂಥೀಯ ರಾಜಕಾರಣದ ಪ್ರಮುಖ ದಾವೆದಾರ, ಕರಾರುವಕ್ಕಾದ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ನಿಸ್ಸೀಮ, ತಮ್ಮ ಹರಿತವಾದ ಮಾತುಗಳಿಂದ ಭಾರತದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಈ ಬಾರಿ ತಮ್ಮ ಎಂದಿನ ಆರ್ಥಿಕ ಅಭಿಪ್ರಾಯವನ್ನು ಬದಿಗಿರಿಸಿರುವುದು ಆಶ್ವರ್ಯ ತಂದಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್‌ನಿಂದ ಡಿಸ್ಕೌಂಟ್ ವಿವರ ಕೇಳಿದ ಸರ್ಕಾರ
ಹೌದು, ಬಲಪಂಥೀಯ ರಾಜಕಾರಣದ ಜೊತೆ ಜೊತೆಗೆ ಬಲಪಂಥೀಯ ಆರ್ಥಿಕ ನೀತಿಗಳನ್ನೂ ಬೆಂಬಲಿಸುವ ಸುಬ್ರಮಣಿಯನ್ ಸ್ವಾಮಿ, ಈ ಬಾರಿ ದೇಶಿಯ ವರ್ತಕರ ಬೆಂಬಲಕ್ಕೆ ದೌಡಾಯಿಸಿದ್ದಾರೆ. ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಂತಹ ದೈತ್ಯ ವ್ಯಾಪಾರಿ ಕಂಪನಿಗಳ ಪ್ರಸ್ತುತತೆಯನ್ನು ಸ್ವಾಮಿ ವಿರೋಧಿಸಿದ್ದಾರೆ.
ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಂತಹ ವಿದೇಶಿ ಸಂಸ್ಥೆಗಳು ನಮ್ಮ ದೇಶೀಯ ವರ್ತಕರ ಜೀವನಾಧಾರವನ್ನೇ ಕಸಿದಿದ್ದು, ಇವುಗಳ ಬದಲಾಗಿ ಸ್ಥಳೀಯ ವರ್ತಕರನ್ನು ಉತ್ತೇಜಿಸುವ ಆರ್ಥಿಕ ನೀತಿ ಇಂದಿನ ತುರ್ತು ಅಗತ್ಯ ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೂಲಕ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾದರೆ ಅವುಗಳನ್ನು ಭಾರತದ ಒಳಗೇಕೆ ಬಿಟ್ಟುಕೊಳ್ಳಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!
ಭಾರತದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ವಾಲ್‌ಮಾರ್ಟ್‌ಗಳಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡುವ ಬದಲಾಗಿ, ದೇಶೀಯ ವರ್ತಕರ ವ್ಯಾಪರಕ್ಕೆ ಉತ್ತೇಜನ ನೀಡುವುದು ಒಳಿತು ಎಂದು ಬಿಜೆಪಿ ಹಿರಿಯ ನಾಯಕ ಟ್ವೀಟ್ ಮಾಡಿದ್ದಾರೆ.
ದೇಶೀಯ ವರ್ತಕರು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಸಮಾಜ ನಿರ್ಮಾಣ ಕಾರ್ಯದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು ಎಂದು ಸ್ವಾಮಿ ನುಡಿದಿದ್ದಾರೆ.
ಧೈರ್ಯವೂ ಇಲ್ಲ, ಜ್ಞಾನವೂ ಇಲ್ಲ: ಮೋದಿ ಕಾಲೆಳೆದ ಸ್ವಾಮಿ!
ಪ್ರಧಾನಿ ಮೋದಿ ತಮ್ಮ ವಿದೇಶ ಯಾತ್ರೆಗಳಲ್ಲಿ ವಿದೇಶಿ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡುವುದಾಗಿ ಘೋಷಣೆ ಮಾಡುತ್ತಿರುವುದು ಒಂದು ಕಡೆಯಾದರೆ, ಆರ್ಥಿಕ ಅವ್ಯವಸ್ಥೆಯನ್ನು ಸರಿಪಡಿಸಲು ದೇಶೀಯ ಮಾರ್ಗವೇ ಪರಿಹಾರ ಎಂದು ವಾದಿಸುತ್ತಿರುವ ಅವರದ್ದೇ ಪಕ್ಷದ ನಾಯಕರು ಇನ್ನೊಂದೆಡೆ.
ಮೋದಿಗೆ ನಾ ಬೇಡ, ಹೀಗಾಗಿ ಚೀನಾ ಹೊರಟೆ: ಪ್ರಧಾನಿಗೆ ಸ್ವಾಮಿ ತರಾಟೆ!
ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧವನ್ನು ಕಾಪಾಡಿಕೊಂಡು ಹೋಗುವ ಜೊತೆಗೆ ದೇಶೀಯ ಸಂಸ್ಕೃತಿಗೆ ಹತ್ತಿರವಾದ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಹಿಂದೆ ಸಕಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿತ್ತ ಸಚಿವರಾಗ ಹೊರಟಿದ್ದ ಸುಬ್ರಮಣಿಯನ್ ಸ್ವಾಮಿ ಸಂಪುಟ ನೋಡಿ ಏನಂದ್ರು?