ನವದೆಹಲಿ(ಜು.02): ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮೋದಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿಗೆ ನನ್ನ ಯೋಜನೆಗಳು ಬೇಡವಾಗಿವೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ, ಅವರಿಗೆ ನನ್ನ ಐಡಿಯಾಗಳೂ ಹಿಡಿಸುತ್ತಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸ್ವಾಮಿ, ಮೋದಿ ಅವರಿಗೆ ನನ್ನ ಯೋಜನೆಗಳು ಹಿಡಿಸುತ್ತಿಲ್ಲ, ಆದರೆ ಚೀನಾ ಮಾತ್ರ ನನ್ನ ಯೋಜನೆಗಳನ್ನು ಮೆಚ್ಚಿ ಸಭೆಗೆ ಆಹ್ವಾನಿಸಿದೆ ಎಂದು ತಿಳಿಸಿದ್ದಾರೆ.

ಚೀನಾದ ಪ್ರಸಿದ್ಧ ತ್ರಿಂಪುವಾ ವಿವಿಯಲ್ಲಿ ನಡೆಯಲಿರುವ China’s Economic Development: A Review Of Last 70 years.”  ಎಂಬ ವಿಚಾರ ಸಂಕೀರ್ಣದಲ್ಲಿ ಸುಬ್ರಮಣಿಯನ್ ಸ್ವಾಮಿ ಭಾಗವಹಿಸಲಿದ್ದಾರೆ.