ಮೋದಿ ಜತೆ 58 ಜನ ಕೇಂದ್ರ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಪ್ರಮಾಣ ವಚನ ತೆಗೆದುಕೊಂಡ ಎಲ್ಲರನ್ನು ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇನ್ನೊಂದು ಕಡೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ ಸಹ ಅಷ್ಟೆ ಪ್ರಖರವಾಗಿದೆ.
ಬೆಂಗಳೂರು[ಮೇ. 30] ಮೋದಿ ಪ್ರಮಾಣಕ್ಕೂ ಮುನ್ನ ನಾನು ಸಚಿವ ಸ್ಥಾನದ ಆಕಾಂಕ್ಷಿ ಹಣಕಾಸು ಖಾತೆ ನೀಡಬೇಕು ಎಂದು ಪರೋಕ್ಷವಾಗಿ ಹೇಳಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮೋದಿ ಸಂಪುಟ ರಚನೆ ನಂತರ ಟ್ವೀಟ್ ಮಾಡಿದ್ದಾರೆ.
ನಾಣು ಹಣಕಾಸು ಮಂತ್ರಿಯಾಗಬೇಕು ಎಂದು ಯಾರೆಲ್ಲ ಟ್ವೀಟ್ ಮಾಡಿ ಅಭಿಪ್ರಾಯ ಹೊರಹಾಕಿದ್ದಿರೋ.. ಅವರಿಗೆಲ್ಲ ವಂದನೆ. ನಾವು ಏನೇ ಹೇಳಿದರೂ ಅಂತಿಮ ತೀರ್ಮಾನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೇರಿದ್ದು ಇದನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಹೊಸ ಸಂಪುಟವನ್ನು ಗೌರವಿಸಬೇಕಾಗಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
