MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ

ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ

ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ, ಗ್ಯಾಸ್ ಬೆಲೆಯಲ್ಲೂ ಶೇಕಡಾ 5ರಷ್ಟು ಏರಿಕೆಯಾಗಿದೆ. ಇರಾನ್ ನಡೆಸಿದ ಮಿಸೈಲ್ ದಾಳಿಯಿಂದ ಇದೀಗ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ?

2 Min read
Author : Chethan Kumar
Published : Mar 19 2026, 11:29 AM IST
Share this Photo Gallery
  • FB
  • TW
  • Linkdin
  • Whatsapp
15
ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ
Image Credit : Asianet News

ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ

ಅಮೆರಿಕ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡಲು ಸಾಧ್ಯವಾಗದ ಇರಾನ್ ಅರಬ್ ರಾಷ್ಟ್ರಗಳ ಮೇಲೆ ಸತತ ದಾಳಿ ಮಾಡುತ್ತಿದೆ. ನಿನ್ನೆ ರಾತ್ರಿಯಿಂದ ಇರಾನ್ ಗಲ್ಫ್ ರಾಷ್ಟ್ರಗಳ ಇಂಧನ ಘಟಕ ಗುರಿಯಾಗಿಸಿ ದಾಳಿ ಮಾಡಿದೆ. ಈ ಪೈಕಿ ಖತಾರ್‌ನಲ್ಲಿರುವ ರಾಸ ಲಫಾನ್ ವಿಶ್ವದ ಅತೀ ಜೊಡ್ಡ ಎಲ್‌ಎನ್‌ಜಿ ಗ್ಯಾಸ್ ಘಟಕ ಸೇರಿದಂತೆ ಐದು ಇಂಧನ ಘಟಗಳ ಮೇಲೆ ಇರಾನ್ ದಾಳಿ ನಡೆಸಿದೆ. ಇತ್ತ ಸೌದಿ ಅರೆಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲಿನ ಇಂಧನ ಘಟಕಗಳ ದಾಳಿಯಿಂದ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 112 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.

25
ಶೇಕಡಾ 4ರಷ್ಟು ಏರಿಕೆ ಕಂಡ ಕಚ್ಚಾ ತೈಲ ಬೆಲೆ
Image Credit : X

ಶೇಕಡಾ 4ರಷ್ಟು ಏರಿಕೆ ಕಂಡ ಕಚ್ಚಾ ತೈಲ ಬೆಲೆ

ಇರಾನ್ ನಿನ್ನೆ ರಾತ್ರಿಯಿಂದ ನಡೆಸಿದ ಸತತ ದಾಳಿ ಪರಿಣಾಮ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 4ರಷ್ಟು ಏರಿಕೆಯಾಗಿದೆ. ಯುದ್ಧ ಆರಂಭಗೊಂಡ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್‌ಗೆ ಏರಿಕೆಯಾಗಿತ್ತು. ಬಳಿಕ ನಿಧಾನವಾಗಿ ಸಹಜಸ್ಥಿತಿಗೆ ಮರಳಿತ್ತು. ಆದರೆ ದಾಳಿಯಿಂದ ಇದೀಗ ಇಂಧನ ಘಟಕಗಳು ಸ್ಥಗಿತಕೊಂಡಿರುವ ಕಾರಣ ಮತ್ತೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

Related Articles

Related image1
ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ
Related image2
ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು: ಹರ್ಮುಜ್ ದಾಟಿ ಹೊರಟ 90 ಹಡಗುಗಳು
35
ಗ್ಯಾಸ್ ಬೆಲೆ ಶೇಕಡಾ 5ರಷ್ಟು ಏರಿಕೆ
Image Credit : X

ಗ್ಯಾಸ್ ಬೆಲೆ ಶೇಕಡಾ 5ರಷ್ಟು ಏರಿಕೆ

ಖತಾರ್‌ನ ರಾಸ್ ಲಫಾನ್ ಗ್ಯಾಸ್ ಘಟಕದ ಮೇಲಿನ ದಾಳಿಯಿಂದ ತೈಲ ಹಾಗೂ ಗ್ಯಾಸ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದ ರಾಸ್ ಲಫಾನ್ ಘಟಕ ದಾಳಿಗೆ ತುತ್ತಾಗಿದೆ. ಇದರ ಬೆನ್ನಲ್ಲೇ ಗ್ಯಾಸ್ ಬೆಲೆಯಲ್ಲಿ ಶೇಕಡಾ 5ರಷ್ಟು ಏರಿಕೆಯಾಗಿದೆ.

45
ಇರಾನ್ ಗ್ಯಾಸ್ ಘಟಕದ ಮೇಲೆ ದಾಳಿ
Image Credit : X

ಇರಾನ್ ಗ್ಯಾಸ್ ಘಟಕದ ಮೇಲೆ ದಾಳಿ

ಇರಾನ್ ಅತೀ ದೊಡ್ಡ ಗ್ಯಾಸ್ ಘಟಕ ದಕ್ಷಿಣ ಪಾರ್ಸ್ ಮೇಲೆ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರದ ಇಂಧನ ಘಟಕಗಳ ಮೇಲೆ ದಾಳ ಮಾಡಲಾಗಿದೆ ಎಂದು ಇರಾನ್ ಹೇಳಿದೆ. ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಇದೇ ವೇಳೆ ಇರಾನ್ ದಕ್ಷಿಣ ಪಾರ್ಸ್ ಮೇಲೆ ದಾಳಿ ಸಂಪೂರ್ಣ ಸೀಝ್ ಮಾಡುವುದಾಗಿ ಎಚ್ಚರಿಸಿದ್ದಾರೆ.

55
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಾ
Image Credit : Asianet News

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಾ

ಭಾರತದಲ್ಲಿ ಈಗಾಗಲೇ ಗ್ಯಾಸ್ ಕೊರತೆ ಕಾಡುತ್ತಿದೆ. ಇದೀಗ ಹಲವು ಇಂಧನ ಘಟಕಗಳ ಮೇಲೆ ದಾಳಿಯಾಗಿರುವ ಕಾರಣ ಸ್ಥಗಿತಗೊಂಡಿದೆ. ಪೂರೈಕೆಯಲ್ಲಿನ ವ್ಯತ್ಯಯಗಳಿಂದ ಇದೀಗ ಭಾರತದ ಮೇಲೂ ಬೆಲೆ ಏರಿಕೆ ಆತಂಕ ಎದುರಾಗಿದೆ. ಸದ್ಯ ಏರಿಕೆಯಾಗುವ ಸಾಧ್ಯತೆ ಇಲ್ಲ. ಆದರೆ ಸ್ಥಗಿತ ಮುಂದುವರಿದರೆ, ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚಾದರೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಯಾಗಲಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಾ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಚ್ಚಾ ತೈಲ
ಇರಾನ್
ಸಂಯುಕ್ತ ಅರಬ್ ಎಮಿರೇಟ್ಸ್
ಪೆಟ್ರೋಲ್ ಬೆಲೆ
ಡೀಸೆಲ್ ಬೆಲೆ
Latest Videos
Recommended Stories
Recommended image1
ಏಕಾಏಕಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ಇಂದು ಬರೋಬ್ಬರಿ ₹2,780 ಕುಸಿತ; ಯುಗಾದಿಯಂದು ಚಿನ್ನ ಕೊಳ್ಳೋರಿಗೆ ಬಂಪರ್!
Recommended image2
ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ
Recommended image3
ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌
Related Stories
Recommended image1
ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ
Recommended image2
ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು: ಹರ್ಮುಜ್ ದಾಟಿ ಹೊರಟ 90 ಹಡಗುಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved