ಬೆಂಗಳೂರು(ಡಿ.02): ಕಾರ್ಪೋರೇಟ್ ಲಾಭಿ ಮತ್ತು ಈ ಹಿಂದಿನ ಸರ್ಕಾರಗಳ ಮೇಲೆ ಅದು ಬೀರುತ್ತಿದ್ದ ಪ್ರಭಾವದ ಕುರಿತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕಾರ್ಪೋರೇಟ್ ಲಾಬಿಗೆ ಅಂಕೆ ಇಲ್ಲದಂತಾಗಿತ್ತು. ಅದರಲ್ಲೂ ಯುಪಿಎ ಅವಧಿಯಲ್ಲಿ ಕಾರ್ಪೋರೇಟ್ ಲಾಬಿ ಊಹಿಸಲಾಗದ ರೀತಿಯಲ್ಲಿ ಹೆಡೆ ಎತ್ತಿತ್ತು ಎಂದು ರಾಜೀವ್ ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ: ಕಂಪನಿಗಳಿಗೆ ಹೊಸ ನಿಯಮ!

ಈ ಕುರಿತು ಟ್ವಿಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಯುಪಿಎ ಅವಧಿಯಲ್ಲಿ ನಡೆದ ಕಾರ್ಪೋರೇಟ್ ಲಾಬಿ ವ್ಯಾಪಾರ ಕ್ಷೇತ್ರದ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ಕಾರ್ಪೋರೇಟ್ ಕುಳಗಳು ಯುಪಿಎ ಸರ್ಕಾರವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಅವರು ಹೇಳಿದ ಹಾಗೆ ಕೇಳುವ ಪರಿಸ್ಥಿತಿ ಬಂದೊದಗಿತ್ತು ಎಂದು ರಾಜೀವ್ ಹರಿಹಾಯ್ದಿದ್ದಾರೆ.

ನಕಲಿ ಕಂಪನಿಗಳಿಗೆ ಮೋದಿ ನಡುಕ: ನೋಂದಣಿ ರದ್ದು ಸಮರ ಮೋಹಕ!

ಆದರೆ ಮೋದಿ ಸರ್ಕಾರದಲ್ಲಿ ಈ ಕಾರ್ಪೋರೇಟ್ ಲಾಬಿಗೆ ತಡೆ ಬಿದ್ದಿದ್ದು, ಸರ್ಕಾರ ಹೇಳಿದ ಹಾಗೆ ಕೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ರಾಜೀವ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಪೋರೇಟ್ ಲಾಬಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢ ನಿರ್ಧಾರ ಹೊಂದಿದ್ದು, ನವಭಾರತದ ತಾಕತ್ತಿಗೆ ಕಾರ್ಪೋರೇಟ್ ಜಗತ್ತು ಮಣಿಯಲೇಬೇಕು ಎಂದು ಹೇಳಿದ್ದಾರೆ.

ದಿಟ್ಟ ತೀರ್ಮಾನಕ್ಕೆ ವಂದನೆ, ಮೋದಿ-ಶಾ ಜೋಡಿಗೆ ರಾಜೀವ್ ಚಂದ್ರಶೇಖರ್ ಅಭಿನಂದನೆ

ಈ ಹಿಂದೆ  ಮಾಡಿದಂತೆ ಬೃಹತ್ ಕಾರ್ಪೋರೇಟ್ ಕುಳಗಳು ಸರ್ಕಾರದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದಿರುವ ರಾಜೀವ್ ಚಂದ್ರಶೇಖರ್, ನ್ಯೂ ಇಂಡಿಯಾದೊಂದಿಗೆ ಬದುಕುವ ಕಲೆ ರೂಢಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.