ನವದೆಹಲಿ[ಆ. 05]  ‘ಜಮ್ಮು ಮತ್ತು ಕಾಶ್ಮೀರವನ್ನು ದೇಶದಿಂದ ಒಡೆದು ಹಾಕಿದ್ದ ಕಾಂಗ್ರೆಸ್ ಪಕ್ಷದ ಕುಟಿಲ ನೀತಿಗೆ ಅಂತ್ಯ ಸಿಕ್ಕಿದೆ. ಕಾಂಗ್ರೆಸ್ ಸಾಮ್ರಾಜ್ಯದ ಕಪ್ಪು ಚುಕ್ಕೆಗಳು ಕೊನೆಯಾಗಿವೆ’ 

ಹೌದು, ಸಂಸದ ರಾಜೀವ್ ಚಂದ್ರಶೇಖರ್ ಹೀಗೆಂದು ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಕ್ಕೆ ತಾವು ಸಾಕ್ಷಿಯಾಗಿದ್ದನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಆಪರೇಶನ್ ಜಮ್ಮು-ಕಾಶ್ಮೀರ, ಆರಂಭದಿಂದ ಅಂತ್ಯದವರೆಗೆ

70 ವರ್ಷಗಳ ನಂತರದಲ್ಲಿ ಇಂಥದ್ದೊಂದು ದಿನ ಬಂದಿದೆ. ಈ ಐತಿಹಾಸಿಕ ದಿನಕ್ಕೆ ಪಾರ್ಲಿಮೆಂಟ್‌ನೊಂದಿಗೆ ನಾನು ಸಾಕ್ಷಿಯಾಗಿದ್ದಕ್ಕೆ ಹೆಮ್ಮೆ ಇದೆ. ಜಮ್ಮು ಕಾಶ್ಮೀರ ಜನ ಇನ್ನು ಮುಂದೆ ನಿಜವಾದ ಆಡಳಿತ ನೋಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಅಮಿತ್ ಶಾ ಕೈಯಲ್ಲಿದ್ದ ಪೇಪರ್ ಕೊಟ್ಟ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ಟ್ವೀಟ್ ಮಾಡಿದ್ದು ಐತಿಹಾಸಿಕ ತೀರ್ಪಿನ ವಿವರ ನೀಡಿದ್ದಾರೆ.  ಕಾಶ್ಮೀರ ಯಾವಾಗಲೂ ಕೂಡಾ ಭಾರತದ ಅವಿಭಾಜ್ಯ ಅಂಗ ಇದರ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಎರಡು ಗುರುತು , ಎರಡು ಸಂವಿಧಾನ ಇಲ್ಲ ಈ ನಿರ್ಧಾರ ಭಾರತದ ಎಲ್ಲಾ ದೇಶಪ್ರೇಮಿಗಳಿಗೆ ಸಲ್ಲಬೇಕು ಅಖಂಡ ಭಾರತಕ್ಕಾಗಿ ಶ್ರಮಿಸಿದವರಿಗೆ ಈ ನಿರ್ಧಾರ ಕೊಡುಗೆಯಾಗಿದೆ ದೇಶದ ಎಲ್ಲಾ ಜನತೆಗೆ ಶುಭಾಶಯಗಳು ಎಂದು ಶಾ ಹೇಳಿದ್ದಾರೆ. ಅಮಿತ್ ಶಾ ಅವರನ್ನು ಅಭಿನಂದಿಸಿರುವ ಪ್ರಧಾನಿ ಮೋದಿ,  ಕಾಶ್ಮೀರ ಜನತೆಗೆ ಆಗುತ್ತಿದ್ದ ಅನ್ಯಾಯ ಎಲ್ಲವೂ ಕೊನೆಯಾಗಿದೆ ಎಂದಿದ್ದಾರೆ.