Indian jugaad business idea: ಈ ಯುವ ತರುಣನ ಬುದ್ಧಿವಂತಿಕೆಗೆ ಬೆರಗಾಗಲೇಬೇಕು ಬೀದಿಯಲ್ಲಿ ಇದ್ದ ಸಾಮಾನ್ಯ ಕಲ್ಲೊಂದಕ್ಕೆ 460 ರೂ ಬಂಡವಾಳ ಹಾಕಿ 4540 ರೂ ಲಾಭ ಮಾಡಿದ್ದಾನೆ ಈ ಯುವ ತರುಣ ಹಾಗಿದ್ರೆ ಆತ ಮಾಡಿದ್ದೇನು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ…

ಕಲ್ಲಿಗೆ ಗಡಿಯಾರ ರೂಪ ನೀಡಿದ ಯುವಕ

ತಲೆ ಇದ್ರೆ ಎಲೆ ಮಾರಿ ಬದ್ಕಬಹುದು ಎಂಬ ಗಾದೆ ಮಾತೊಂದಿದೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದಕ್ಕೆ ಸುಂದರ ಗಡಿಯಾರದ ರೂಪ ನೀಡಿ 5000 ಸಾವಿರ ರೂಪಾಯಿಗೆ ಅದನ್ನು ಮಾರಾಟ ಮಾಡಿದ್ದಾನೆ. ಇದನ್ನು ನೋಡಿದ ಮೇಲೆ ಬುದ್ಧಿವಂತಿಕೆ ಒಂದಿದ್ದರೆ ಹೇಗೆ ಬೇಕಾದರೂ ಬದುಕಬಹುದು ಎಂಬುದಕ್ಕೆ ಇದೊಂದು ವೀಡಿಯೋ ಸಾಕ್ಷಿಯಾಗಿದ್ದು, ಇಂಟರ್‌ನೆಟ್‌ನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ. ಅಂದಹಾಗೆ ಈ ವೀಡಿಯೋವನ್ನು Daily Bharat News ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.

ದುಡ್ಡು ಮಾಡೋದು ಹೇಗೆ ಎಂದು ಹೇಳಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್:

ವೈರಲ್ ಅದ ವೀಡಿಯೋದಲ್ಲಿ, ವೀಡಿಯೋದ ಆರಂಭದಲ್ಲಿ ಈ ಹುಡುಗ ಕಲ್ಲೊಂದರಿಂದ ಹಣ ಹೇಗೆ ಸಂಪಾದನೆ ಮಾಡಬಹುದು ಎಂಬುದನ್ನು ನಾನು ತೋರಿಸಿಕೊಡುತ್ತೇನೆ ಎಂದು ಹೇಳುತ್ತಾನೆ. ನಂತರ ಕುಕ್ಕಿಂಗ್ ವಿಡಿಯೋದವರು ಮಾಡುವಂತೆ ಎಲ್ಲಕ್ಕಿಂತ ಮೊದಲು ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದನ್ನು ಹೆಕ್ಕಿಕೊಂಡು ಬ್ಯಾಗ್‌ನಲ್ಲಿ ತುಂಬಿಸಿ ತಂದೆ ನಂತರ ಅದನ್ನು ಕಲ್ಲು ಕತ್ತರಿಸುವ ವ್ಯಕ್ತಿಯ ಬಳಿ ತೆಗೆದುಕೊಂಡು ಹೋಗಿ ಅವರ ಕೈನಲ್ಲಿ ಅದಕ್ಕೊಂದು ಆಕಾರ ಕೊಡಿಸಿದೆ. ನನಗೆ ಹೇಗೆ ಬೇಕು ಹಾಗೆ ಆಕಾರದಲ್ಲಿ ಅದಕ್ಕೊಂದು ರೂಪ ಕೊಡಿಸಿದೆ. ಆ ಕಲ್ಲಿನ ಮಧ್ಯೆ ಗಡಿಯಾರ ಕೆಲಸ ಮಾಡುವ ಯಂತ್ರವನ್ನು ಕೂರಿಸುವುದಕ್ಕೆ ಒಂದು ವೃತ್ತಕಾರದ ತೂತನ್ನು ಕೊರೆಸಿದೆ. ನಂತರ ಕಲ್ಲನ್ನು ಮೃದುವಾಗಿಸುವ ಪೇಂಟ್ ಒಂದನ್ನು ತಂದು ಇಡೀ ಕಲ್ಲಿಗೆ ಪೇಂಟ್ ಮಾಡಿ ಬಿಸಿಲಿನಲ್ಲಿ ಒಣಗುವುದಕ್ಕೆ ಇರಿಸಿದೆ. ಇದರಿಂದ ಕಲ್ಲು ಫುಲ್ ಫಳ ಫಳ ಹೊಳೆಯುವುದಕ್ಕೆ ಶುರು ಆಯ್ತು. ನಂತರ ಗಡಿಯಾರವನ್ನು ಕೂರಿಸಿದೆ. ಈಗ ಕಲ್ಲಿನ ಮೇಲೆ ನಿಜವಾದ ಗಡಿಯಾದ ನಡೆಯುವುದಕ್ಕೆ ಶುರು ಆಯ್ತು.

ಇದನ್ನೂ ಓದಿ: ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ

ನಂತರ ಅದನ್ನು ತೆಗೆದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋದೆ. ಅನೇಕರು ಅದರ ಹಿಂಭಾಗ ನೋಡಿ ಅದನ್ನು ಖರೀದಿಸುವುದಕ್ಕೆ ನಿರಾಕರಿಸಿ ಹೊರಟು ಹೋದರು. ನಂತರ ಒಬ್ಬರು ಶ್ರೀಮಂತ ವ್ಯಕ್ತಿ ಕಾಣಿಸಿದರು. ಅವರು ಬೆಲೆ ಎಷ್ಟು ಕೇಳಿದರು. ನಾನು 5000 ರೂಪಾಯಿ ಎಂದು ಹೇಳಿದೆ. ಅವರು ಖರೀದಿಸುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ಅವರಿಗೆ ಆ ಗಾಡಿಯಾರ ಬಹಳ ಇಷ್ಟ ಆಯ್ತು ಅವರು ಮರುಮಾತನಾಡದೇ 5 ಸಾವಿರ ರೂಪಾಯಿ ನೀಡಿ ಆ ಗಡಿಯಾರವನ್ನು ಖರೀದಿ ಮಾಡಿದರು ಎಂದು ಆ ಹುಡುಗ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವೀಡಿಯೋ ಪೋಸ್ಟ್ ಮಾಡಿದ Daily Bharat News ಹೀಗೆ ಬರೆದಿದೆ. ದೆಹಲಿಯ ಒಬ್ಬ ಚಾಣಾಕ್ಷ ಯುವಕ ಬೀದಿಯಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು, ಅದನ್ನು ಬಹಳ ಕೌಶಲ್ಯದಿಂದ ಕತ್ತರಿಸಿ ಅದಕ್ಕೆ ಪೇಂಟ್ ಮಾಡಿ ಹೊಳಪು ನೀಡಿ, ಅದರೊಳಗೆ ಅಗ್ಗದ 460 ರೂಪಾಯಿಗಳ ಗಡಿಯಾರದ ಒಳಗೆ ಇಡಬೇಕಾದಂತಹ ಕಾರ್ಯವಿಧಾನವನ್ನು ಅಳವಡಿಸಿ, ಅದನ್ನು ವಿಶಿಷ್ಟವಾದ ನೈಸರ್ಗಿಕ ಶಿಲಾ ಗಡಿಯಾರವನ್ನಾಗಿ ಪರಿವರ್ತಿಸಿದ್ದಾನೆ. ನಂತರ ಅವನ್ನು ಅದನ್ನು ಆನ್‌ಲೈನ್‌ನಲ್ಲಿ ಜನರಿಗೆ ಕಾಣುವಂತೆಯೇ 5000 ಗೆ ತಕ್ಷಣ ಮಾರಾಟ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿ ಕಾಮೆಂಟ್ ಮಾಡ್ತಿದ್ದಾರೆ. ಸೋದರ ಈತ ಜುಗಾಡ್‌ನ ಮಾಡೋದ್ರಲ್ಲಿ ಅದರಪ್ಪನಂತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಭಾರತವು ಆರಂಭಿಕರಿಗಾಗಿ ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ರಸ್ತೆಯ ಮೇಲೆ ಬಿದ್ದಿದ್ದ ಕಲ್ಲೊಂದರಿಂದ ಬರೋಬ್ಬರಿ 4540 ರೂಪಾಯಿ ಲಾಭ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಭಾರತೀಯ ಬೀದಿಯ ಬುದ್ಧಿವಂತ ಸೃಜನಶೀಲ ಕನಿಷ್ಠ ಸಂಪನ್ಮೂಲದೊಂದಿಗೆ ಗರಿಷ್ಠ ಲಾಭ ಮಾಡುವ ಶುದ್ಧ ದೇಸಿ ಪ್ರತಿಭೆಗೆ ಒಂದು ಉದಾಹರಣೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಮಾಡೆಲ್ ಮಗಳನ್ನು ಬಿಲ್‌ಬೋರ್ಡ್ ಮೇಲೆ ನೋಡಿ ಭಾವುಕರಾದ ಪೋಷಕರು

ಅದೇನೆ ಇರಲಿ ಬುದ್ಧಿವಂತಿಕೆಯೊಂದಿದ್ದರೆ ಎಲ್ಲಿ ಹೇಗೆ ಬೇಕಾದರೂ ಬದುಕಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸರಸ್ವತಿ ಒಲಿದರೆ ಲಕ್ಷ್ಮಿ ಒಲಿಯೋದೇನೂ ಕಷ್ಟವಲ್ಲ ಎಂಬುದು ಈತನನ್ನು ನೋಡಿ ತಿಳಿಯಬಹುದು. ಈ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.

View post on Instagram