ನಮ್ಮ ಪ್ರೀತಿಪಾತ್ರರು ನಮ್ಮ ಪೋಷಕರು ನಮ್ಮ ಸಾಧನೆಯನ್ನು ನೋಡಿ ಹೆಮ್ಮೆ ಪಡುವುದನ್ನು ನೋಡುವುದೇ ಒಂದು ಖುಷಿ. ಅದೇ ರೀತಿ ಇಲ್ಲೊಬ್ಬರು ಯುವ ಮಾಡೆಲ್‌,ು ತಮ್ಮನ್ನು ಮೊದಲ ಬಾರಿ ಬಿಲ್‌ಬೋರ್ಡ್‌ ಮೇಲೆ ನೋಡಿದ ಪೋಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ತೋರಿಸುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಮಾಡೆಲ್ ಆಗೋದು ಸುಲಭದ ಕೆಲಸವಂತು ಅಲ್ಲ, ಅದೊಂದು ದೊಡ್ಡ ಸಾಹಸ, ದೇಹ ಹೀಗೆಯೇ ಇರಬೇಕು ನೋಟ ಹೀಗೆಯೇ ಇರಬೇಕು, ತಲೆ ಕೂದಲು ಹೀಗಿರಬೇಕು, ಎತ್ತರ 6 ಅಡಿಗಳಿರಬೇಕು ಅಂತ ಮಾಡೆಲಿಂಗ್‌ ಮಾಡುವವರಿಗೆ ಇರಬೇಕಾದ ಮಾನದಂಡಗಳು ಅಷ್ಟಿಷ್ಟಲ್ಲ. ಇದೆಲ್ಲವೂ ನಿಮ್ಮಲ್ಲಿದ್ದರೂ ಕೆಲವೊಮ್ಮೆ ನಿಮಗೆ ಅವಕಾಶ ಸಿಗುವುದಿಲ್ಲ, ಹೀಗಾಗಿ ಎಲ್ಲಾ ಪ್ರಯತ್ನಗಳ ಜೊತೆ ಅದೃಷ್ಟವೂ ನಿಮ್ಮ ಜೊತೆಗಿರಬೇಕು ಹೀಗಿದ್ದರೆ ಮಾತ್ರ ಯಶಸ್ವಿ ಮಾಡೆಲ್ ಅನಿಸಬಹುದು. ಇಷ್ಟೆಲ್ಲಾ ಶ್ರಮದ ನಂತರ ಮಾಡೆಲ್ ಆದಾಗ ಆಗುವ ಖುಷಿ ಅಷ್ಟಿಷ್ಟಲ್ಲ, ಅದರಲ್ಲೂ ನಮ್ಮ ಪ್ರೀತಿಪಾತ್ರರು ನಮ್ಮ ಪೋಷಕರು ನಮ್ಮ ಸಾಧನೆಯನ್ನು ನೋಡಿ ಹೆಮ್ಮೆ ಪಡುವುದನ್ನು ನೋಡುವುದೇ ಒಂದು ಖುಷಿ. ಅದೇ ರೀತಿ ಇಲ್ಲೊಬ್ಬರು ಯುವ ಮಾಡೆಲ್‌ಗೆ ಅನುಭವ ಆಗಿದ್ದು, ಅವರು ತಮ್ಮನ್ನು ಮೊದಲ ಬಾರಿ ಬಿಲ್‌ಬೋರ್ಡ್‌ ಮೇಲೆ ಮಾಡೆಲ್ ಆಗಿ ನೋಡಿದ ಪೋಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ತೋರಿಸುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ವೀಡಿಯೋ ನೋಡಿದ ಅನೇಕರು ಯುವ ಮಾಡೆಲ್‌ಗೆ ಶುಭ ಹಾರೈಸಿದ್ದಾರೆ.

ಮುಂಬೈ ಹಾಗೂ ಕೊಚ್ಚಿ ಮೂಲದ ಮಾಡೆಲ್ ನವ್ಯ ಕೃಷ್ಣ ಎಂಬುವವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಇದು ಮಕ್ಕಳ ಸಾಧನೆ ನೋಡಿ ಖುಷಿ ಪಡುವ ಹಲವು ಪೋಷಕರ ಭಾವುಕ ಕ್ಷಣವನ್ನು ಪ್ರತಿಬಿಂಬಿಸಿದೆ ಎಂದರೆ ತಪ್ಪಾಗಲಾರದು. ಮಕ್ಕಳ ಸಾಧನೆಯ ಹಿಂದೆ ಪೋಷಕರ ದೊಡ್ಡ ಪರಿಶ್ರಮ ಹಾಗೂ ಕನಸು ಹಾಗೂ ತ್ಯಾಗಗಳಿರುತ್ತವೆ. ಹೀಗಾಗಿ ಮಕ್ಕಳ ಸಾಧನೆಯನ್ನು ನೋಡಿ ಮೊದಲು ಹಾಗೂ ಅತೀ ಹೆಚ್ಚು ಖುಷಿ ಪಡುವುದು ಪೋಷಕರು. ಅದೇ ರೀತಿ ಇಲ್ಲಿ ಮಾಡೆಲ್ ನವ್ಯಾ ಕೃಷ್ಣನ್ ಅವರ ಪೋಷಕರು ಮಾಲೊಂದರಲ್ಲಿ ಬಟ್ಟೆ ಉತ್ಪನ್ನವೊಂದಕ್ಕೆ ಮಾಡೆಲ್ ಆಗಿರುವ ಮಗಳ ಫೋಟೋವನ್ನು ಬಿಲ್ ಬೋರ್ಡ್‌ ಮೇಲೆ ನೋಡಿ ಭಾವುಕರಾಗಿದ್ದು, ಅವರು ಬಿಲ್‌ಬೋರ್ಡ್‌ ಮೇಲಿರುವ ಮಗಳ ಫೋಟೋವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಭಾವುಕರಾಗಿ ಸೆರೆ ಹಿಡಿಯುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಅದ್ದೂರಿ ವಿವಾಹ ಸಮಾರಂಭದಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಸುಂದರಿ

ಸ್ವತಃ ನವ್ಯಕೃಷ್ಣನ್ ಅವರೇ ಈ ವೀಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಕೆಲವೊಮ್ಮೆ ಜೀವನದ ಸಣ್ಣ ಕ್ಷಣಗಳು ಅಮೂಲ್ಯ ಎನಿಸುತ್ತವೆ. ನಾನು ಎಷ್ಟೇ ಜಾಹೀರಾತು ಫಲಕಗಳಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಈ ಯೋಜನೆ ಎಷ್ಟೇ ದೊಡ್ಡದಾಗಿದ್ದರೂ, ಇದು ಮಾತ್ರ ಯಾವಾಗಲೂ ವಿಶೇಷವಾಗಿರುತ್ತದೆ. ಅವರ ಮುಖಗಳು ಹೆಮ್ಮೆ ಮತ್ತು ಸಂತೋಷದಿಂದ ಬೆಳಗುವುದನ್ನು ನೋಡುವುದೇ ನನಗೆ ಮುಖ್ಯ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ನವ್ಯಾ ಕೃಷ್ಣ ಅವರ ತಾಯಿ ತಮ್ಮ ಪತಿಯನ್ನು ಕರೆದು ಇಲ್ಲಿ ನೋಡಿ ಎಂದು ಮಗಳಿರುವ ಜಾಹೀರಾತಿನ ಬಿಲ್‌ಬೋರ್ಡನ್ನು ಖುಷಿಯಿಂದ ತೋರಿಸುವುದನ್ನು ಕಾಣಬಹುದಾಗಿದೆ. ವೀಡಿಯೋದಲ್ಲಿ ಕಾಣುವಂತೆ ನವ್ಯ ಕೃಷ್ಣನ್ ಅವರು ವೆಸ್ಟ್‌ಸೈಡ್ ಬಟ್ಟೆ ಬ್ರಾಂಡ್‌ಗೆ ಮಾಡೆಲ್ ಆಗಿರೋದನ್ನು ಕಾಣಬಹುದಾಗಿದೆ. ಈ ವೀಡಿಯೋ ನೋಡಿ ಅಪ್ಪ ಅಮ್ಮ ಇಬ್ಬರು ಖುಷಿಯಿಂದ ಮಗಳ ಬಿಲ್ ಬೋರ್ಡ್ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಾ ಭಾವುಕರಾಗಿ ನೋಡುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಧಾರ್ಮಿಕ ಕಾರಣಕ್ಕೆ ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌

ವೀಡಿಯೋ ನೋಡಿದ ಅನೇಕರು ನವ್ಯಕೃಷ್ಣ ಅವರಿಗೆ ಶುಭಹಾರೈಸಿದ್ದಾರೆ. ಅವರ ಕಣ್ಣುಗಳಲ್ಲಿ ನಿಮ್ಮ ಯಶಸ್ಸು ಕಾಣುತ್ತಿದೆ. ಇಂತಹ ಕ್ಷಣವನ್ನು ನೋಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಖುಷಿ ನೋಡಿ ಪೋಷಕರಿಗೆ ಇದೊಂದು ಹೆಮ್ಮೆಯ ಕ್ಷಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram