ಹಣ ಸೇವ್ ಮಾಡೋದು ಹೇಗೆ ಅನ್ನೋರಿಗೆ ಇಲ್ಲಿದೆ ಐಡಿಯಾ, ಬಿಟ್ಟ ಆಹಾರ ತಿಂದೇ ದುಡ್ಡು ಮಾಡ್ಕೊಂಡ ವ್ಯಕ್ತಿ!
ರೆಸ್ಟೋರೆಂಟ್ ಆಹಾರ ಎಂದಾಗ ಬಾಯಲ್ಲಿ ನೀರು ಬರುತ್ತೆ. ರುಚಿ ಖಾದ್ಯಕ್ಕೆ ನಾವು ಎಷ್ಟು ಬೇಕಾದ್ರೂ ಹಣ ನೀಡ್ತೇವೆ. ಹೊಟೇಲ್, ರೆಸ್ಟೋರೆಂಟ್ ಗೆ ಹೋಗಿ ಜೇಬು ಖಾಲಿಮಾಡಿಕೊಳ್ಳುವ ಜನರೇ ಹೆಚ್ಚಿರುವ ಸಂದರ್ಭದಲ್ಲಿ ಈ ವ್ಯಕ್ತಿ ಐಡಿಯಾ ಸೂಪರ್ ಆಗಿದೆ.
ಪ್ರತಿಯೊಬ್ಬರು ಜೀವನ ನಡೆಸುವ ಶೈಲಿ ಭಿನ್ನವಾಗಿರುತ್ತದೆ. ಹಗಲಿರುಳು ದುಡಿದ ನಂತ್ರ ಆ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುವ ಜನರು ಅನೇಕರಿದ್ದಾರೆ. ಮತ್ತೆ ಕೆಲವರು ತಮ್ಮಲ್ಲಿರುವ ಹಣವನ್ನು ಹೇಗೆ ಉಳಿಸಬೇಕು ಎಂದು ಪ್ಲಾನ್ ಮಾಡ್ತಾರೆ. ದುಡಿದ ಹಣ ಎಷ್ಟೇ ಇರಲಿ ಅದ್ರಲ್ಲಿ ಅರ್ಧ ಕೂಡ ಅವರು ಖರ್ಚು ಮಾಡೋದಿಲ್ಲ. ಹಾಗಂತ ಅವರು ಹೊಟ್ಟೆ – ಬಟ್ಟೆ ಕಟ್ಟೋದಿಲ್ಲ. ತಮ್ಮ ಬುದ್ಧಿವಂತಿಗೆ ಬಳಸಿ, ಕಡಿಮೆ ಖರ್ಚಿನಲ್ಲಿ ಒಳ್ಳೆ ಆಹಾರ ಸೇವನೆ ಮಾಡುವ, ಬಟ್ಟೆ ಧರಿಸುವ ಜನರಿದ್ದಾರೆ. ನಾವಿಂದು ಅಂಥಹದ್ದೇ ವ್ಯಕ್ತಿ ಬಗ್ಗೆ ನಿಮಗೆ ಹೇಳ್ತೇವೆ.
ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಕೋಟ್ಯಾಂತರ ರೆಸ್ಟೋರೆಂಟ್ (Restaurant) ಇದೆ. ಗ್ರಾಹಕರಿಗೆ ಆಹಾರ ಉಣಬಡಿಸುವ ಈ ರೆಸ್ಟೋರೆಂಟ್ ಗಳಿಗೆ ಇಂದು ಎಷ್ಟು ಗ್ರಾಹಕರು ಬರಬಹುದು ಎನ್ನುವ ಪರ್ಫೆಕ್ಟ್ ಐಡಿಯಾ ಇರೋದಿಲ್ಲ. ಎಷ್ಟೇ ಪ್ಲಾನ್ ಮಾಡಿ ಮಾಡಿದ್ರೂ ಸ್ವಲ್ಪ ಆಹಾರ ಮಿಕ್ಕೋದಿದೆ. ಈ ಆಹಾರ (Food) ವನ್ನು ಭಾರತ (India) ದಲ್ಲಿ ಕಸಕ್ಕೆ ಹಾಕುವ ರೆಸ್ಟೋರೆಂಟ್ ಹೆಚ್ಚಿದೆ. ಪರೂಪಕ್ಕೆ ಕೆಲ ರೆಸ್ಟೋರೆಂಟ್ ಈ ಆಹಾರವನ್ನು ಬಡವರಿಗೆ ನೀಡುತ್ತದೆ. ಈ ಉಳಿದ ಆಹಾರವನ್ನೇ ಬಳಸಿಕೊಂಡು ಈಗ ನಾವು ಹೇಳ್ತಿರುವ ವ್ಯಕ್ತಿ ಜೀವನ ನಡೆಸುತ್ತಿದ್ದಾರೆ. ವರ್ಷಕ್ಕೆ ಲಕ್ಷಗಟ್ಟಲೆ ಹಣ ಉಳಿತಾಯ ಮಾಡುತ್ತಿದ್ದಾನೆ.
ಚುನಾವಣೆ ಎಫೆಕ್ಟ್: ಬಾಡಿಗೆ ವಿಮಾನ, ಕಾಪ್ಟರ್‌ಗೆ ಭಾರಿ ಬೇಡಿಕೆ
ವರದಿ ಪ್ರಕಾರ ಈತನ ಹೆಸರು ಹನಿ ಮಹಮೂದ್. ನ್ಯೂಯಾರ್ಕ್‌ನ ಅಪ್ಪರ್ ವೆಸ್ಟ್ ಸೈಡ್ ನಿವಾಸಿ. ದುಬಾರಿ ಜೀವನ ಶೈಲಿಗೆ ಈ ನಗರ ಪ್ರಸಿದ್ಧಿ ಪಡೆದಿದೆ. ಹನಿ ಮಹಮೂದ್ ಬಡವನೇನಲ್ಲ. ಸಾರ್ವಜನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾನೆ. ಕೈನಲ್ಲಿ ಸಾಕಷ್ಟು ಹಣವಿದೆ. ಆದ್ರೂ ಆತನಿಗೆ ಐಷಾರಾಮಿ ಹೊಟೇಲ್ ನಲ್ಲಿ ದುಬಾರಿ ಹಣ ನೀಡಿ ಆಹಾರ ಸೇವನೆ ಮಾಡುವ ಆಸೆ ಇಲ್ಲ. ಹಾಗಂತ ಆತ ದುಬಾರಿ ಹೊಟೇಲ್ ಆಹಾರವನ್ನೇ ತಿನ್ನುತ್ತಿದ್ದಾನೆ. ಲಕ್ಷಾಂತರ ರೂಪಾಯಿ ಉಳಿಸ್ತಿದ್ದಾನೆ.
ಅದು ಹೇಗೆ ಎನ್ನುವ ಪ್ರಶ್ನೆ ನಮ್ಮ – ನಿಮ್ಮೆಲ್ಲರನ್ನು ಕಾಡುವುದು ಸಾಮಾನ್ಯ. ಹನಿ ಮಹಮೂದ್, ರೆಸ್ಟೋರೆಂಟ್ ನಲ್ಲಿ ಗ್ರಾಹಕರು ಬಿಟ್ಟ ಆಹಾರ ಸೇವೆನೆ ಮಾಡ್ತಾನೆ. ಹಾಗಂತ ಗ್ರಾಹಕರು ಪ್ಲೇಟ್ ನಲ್ಲಿ ಬಿಟ್ಟ ಎಂಜಲನ್ನು ಹನಿ ಮಹಮದ್ ಸೇವನೆ ಮಾಡೋದಿಲ್ಲ. ಹೆಚ್ಚಾದ ಆಹಾರವನ್ನು ತಿನ್ನುತ್ತಾನೆ. ಅದಕ್ಕೆ ಆತ ಯಾವುದೇ ರೆಸ್ಟೋರೆಂಟ್ ಮುಂದೆ ತಟ್ಟೆ ಹಿಡಿದು ನಿಲ್ಲೋದಿಲ್ಲ. ಮನೆಯಲ್ಲೇ ಕುಳಿತು ಸುಲಭವಾಗಿ ಆಹಾರ ಆರ್ಡರ್ ಮಾಡಿ ತಿನ್ನುತ್ತಾನೆ.
ಯಸ್, ವಿದೇಶದಲ್ಲಿ ಇಂಥ ಅಪ್ಲಿಕೇಷನ್ ಕೂಡ ಇದೆ. 32 ವರ್ಷದ ಹನಿ ಮಹಮೊದ್ TooGoodToGo ಹೆಸರಿನ ವಿಶೇಷ ಅಪ್ಲಿಕೇಷನ್ ಬಳಸ್ತಾನೆ. ಈ ಅಪ್ಲಿಕೇಷನ್, ಆಹಾರ ಹಾಳಾಗೋದನ್ನು ತಡೆಯುತ್ತಿದೆ. ಅಮೆರಿಕದಲ್ಲಿ ಪ್ರತಿ ವರ್ಷ 8 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದೆ. ಜನರು ಈ ಅಪ್ಲಿಕೇಷನ್ ಮೂಲಕ ಉನ್ನತ ದರ್ಜೆ ಹೊಟೇಲ್ ಆಹಾರವನ್ನು ಕಡಿಮೆ ಬೆಲೆಗೆ ಸೇವನೆ ಮಾಡುತ್ತಾರೆ. ಇದ್ರಲ್ಲಿ ಹನಿ ಮಹಮ್ಮದ್ ಕೂಡ ಸೇರಿದ್ದಾನೆ.
ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯತ್ತಿರುವ Single Malt ವಿಸ್ಕಿ ಎನ್ನುವ ದಾಖಲೆ ಬರೆದ ಭಾರತದ Indri
ಈ ಅಪ್ಲಿಕೇಷನ್ ಮೂಲಕ ಪ್ರತಿ ದಿನ ಆಹಾರ ಸೇವನೆ ಮಾಡುವ ಹನಿ ಮಹಮ್ಮದ್ ಖುಷಿಯಾಗಿದ್ದಾನೆ. ಕಳೆದ 2 ವರ್ಷಗಳಲ್ಲಿ ಕನಿಷ್ಠ 1.5 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಾನೆ. ಜನರು ಹೆಚ್ಚು ಖರ್ಚು ಮಾಡೋದು ಆಹಾರಕ್ಕೆ. ಬಾಯಿ ರುಚಿ, ಆರೋಗ್ಯದ ದೃಷ್ಟಿಯಿಂದ ಜನರು ಆಹಾರಕ್ಕೆ ಎಷ್ಟು ಬೆಲೆ ನೀಡಲೂ ಸಿದ್ಧವಿರುತ್ತಾರೆ. ಇದು ಅವರ ಬಜೆಟ್ ಮೇಲೆ ಹೊಡೆತ ಬೀಳುತ್ತದೆ. ಹಾಗೆಯೇ ರೆಸ್ಟೋರೆಂಟ್ ಉಳಿದ ಆಹಾರವನ್ನು ಹಾಳು ಮಾಡುತ್ತದೆ. ಈ ಎರಡೂ ಸಮಸ್ಯೆಗೆ ಇಂಥ ಅಪ್ಲಿಕೇಷನ್ ಪರಿಹಾರವಾಗಿದೆ.