ಮುಂಬೈ(ಡಿ.20): ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ, ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ. ಬುಧವಾರದ ವಹಿವಟಿನಲ್ಲಿ ಸೆನ್ಸೆಕ್ಸ್ 137.25 ಅಂಕಗಳ ಏರಿಕೆ ದಾಖಲಿಸಿದೆ.

ಕಳೆದ ಏಳು ದಿನಗಳಿಂದ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ ಬಿಎಸ್​ಇ ಸೆನ್ಸೆಕ್ಸ್, ​137.25 ಅಂಶಗಳ ಏರಿಕೆಯ ಮೂಲಕ 36,484 ಅಂಕಗಳಲ್ಲೂ ಮತ್ತು ನಿಫ್ಟಿ 59.60 ಅಂಶಗಳ ಗಳಿಕೆಯೊಂದಿಗೆ 10,967 ಅಂಶಗಳಲ್ಲಿ ಏರಿಕೆ ದಾಖಲಿಸಿವೆ.

ಪ್ರಮುಖವಾಗಿ ಐಟಿ ಮತ್ತು ಫಾರ್ಮಾ ವಲಯದ ಕಂಪನಿ ಷೇರುಗಳು ಬಿಎಸ್​ಇ ಹಾಗೂ ಎನ್​ಎಸ್​ಇಯಲ್ಲಿ ಲಾಭಗಳಿಸಿದವು. ಐಟಿಸಿ ಷೇರುಗಳು ರೂಪಾಯಿ ಸ್ಥಿರತೆ ಮತ್ತು ಕುಸಿಯುತ್ತಿರುವ ತೈಲ ಬೆಲೆಯ  ಕಾರಣಕ್ಕೆ ಉತ್ತಮ ಖರೀದಿ ಕಂಡಿವೆ.

ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 50 ಪೈಸೆ ಜಿಗಿತ ಕಂಡು 70 ರೂ. ಗಡಿಯಿಂದ ಇಳಿದು 69.94 ರೂ.ದಲ್ಲಿ ಮುಂದುವರೆಯಿತು. ಇದೇ ವೇಳೆ ಕಚ್ಚಾ ತೈಲ ಬೆಲೆ 14 ತಿಂಗಳ ಹಿಂದಿನ ಕನಿಷ್ಠ ಬೆಲೆಗೆ ಕುಸಿದಿದ್ದರಿಂದ ವಾಯುಯಾನ ಷೇರುಗಳ ಬೇಡಿಕೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಚೇತರಿಕೆಯೇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಸೋತರೂ ಇಳಿದಿಲ್ಲ ಸೆನ್ಸೆಕ್ಸ್

ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!

ಮಹಿಳೆ ಬಂಧನ: ಶೇರು ಮಾರುಕಟ್ಟೆಯೇ ತಲ್ಲಣ!