ಮುಂಬೈ(ಡಿ.11): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್ ರಾಜೀನಾಮೆ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದೆ.

ಇಂದು ವಹಿವಾಟು ಆರಂಭಿಸುತ್ತಿದ್ದಂತೇ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ. ಆ ಮೂಲಕ 34,458.86 ಅಂಕಗಳಲ್ಲಿ ಸೆನ್ಸೆಕ್ಸ್ ವಹಿವಾಟು ನಡೆಸುತ್ತಿದೆ. 

ಅಂತೆಯೇ ನಿಫ್ಟಿ ಕೂಡ 99.35 ಅಂಕಗಳ ಕುಸಿತ ಕಂಡಿದ್ದು, 10,391.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಪ್ರಮುಖವಾಗಿ ಇಂದಿನ ಚುನಾವಣಾ ಫಲಿತಾಂಶ ಷೇರು ಮಾರುಕಟ್ಟೆ ಮೇಲೆ ನೆರ ಪರಿಣಾಮ ಬೀರಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಆಡಳಿತಾ ರೂಢ ಬಿಜೆಪಿ ಪಕ್ಷ ಹಿನ್ನಡೆ ಅನುಭಿಸಿದೆ.

ಅದರಂತೆ ಆರ್ ಬಿಐ ಗವರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಕಾರಣಕ್ಕೂ ಸೆನ್ಸೆಕ್ಸ್ ಇಳಿಕೆಯಾಗಿದೆ ಎನ್ನಲಾಗಿದೆ. ಇದೇ ವೇಳೆ ರೂಪಾಯಿ ಮೌಲ್ಯದಲ್ಲೂ ಭಾರೀ ಇಳಿಕೆ ಕಂಡುಬಂದಿದ್ದು, ಇಂದು 61 ಪೈಸೆಗಳಷ್ಟು ಕುಸಿತ ದಾಖಲಾಗಿದೆ.