ಮುಂಬೈ (ಡಿ. 12): ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ, ಮಂಗಳವಾರ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಭಾನುವಾರ ಪ್ರಕಟಗೊಂಡ ಪಂಚರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು, ಈ ಬಾರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಸುಳಿವು ನೀಡಿದ್ದವು.

ಪಂಚರಾಜ್ಯ ಚುನಾವಣೆಯ ಸೋಲಿಗೆ ಮೋದಿ ವಿಧೇಯ ಪ್ರತಿಕ್ರಿಯೆ!

ಹೀಗಾಗಿ ಸೋಮವಾರ, ಸೆನ್ಸೆಕ್ಸ್ 714 ಅಂಕಗಳ ಭಾರೀ ಕುಸಿತ ಕಂಡಿತ್ತು. ಜೊತೆಗೆ ಸೋಮವಾರ ಸಂಜೆ ವೇಳೆಗೆ ಆರ್‌ಬಿಐ ಗವರ‌್ನರ್ ಊರ್ಜಿತ್ ಪಟೇಲ್ ದಿಢೀರನೆ ರಾಜೀನಾಮೆ ಪ್ರಕಟಿಸಿದ್ದರು. ಹೀಗಾಗಿ ಮಂಗಳವಾರ ಚುನಾವಣಾ ಸಮೀಕ್ಷೆಗಳು ನಿಜವಾಗಿದ್ದೇ ಆದಲ್ಲಿ ಷೇರುಪೇಟೆಯಲ್ಲಿ ಮತ್ತೊಂದು ಮಹಾಪತನದ ಭೀತಿ ಎದುರಾಗಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಮಂಗಳವಾರ ಬೆಳಗ್ಗೆ ಷೇರುಪೇಟೆ ಕುಸಿತ ಕಂಡಿದ್ದರೂ, ದಿನದಂತ್ಯಕ್ಕೆ ಸೆನ್ಸೆಕ್ಸ್ 190 ಅಂಕಗಳ ಏರಿಕೆ ಕಂಡು 35,150 ಅಂಕಗಳಲ್ಲಿ ಮುಕ್ತಾಯವಾಗಿದೆ.