ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೌಟುಂಬಿಕ ಮಾಸಿಕ ತಲಾ ವೆಚ್ಚ ವರದಿಯು 2023-24ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಡಿಶಾ ಮತ್ತು ನಗರ ಪ್ರದೇಶಗಳಲ್ಲಿ ಪಂಜಾಬ್‌ ಅತಿ ಹೆಚ್ಚು ವೆಚ್ಚದ ಏರಿಕೆ ಕಂಡಿದೆ ಎಂದು ತೋರಿಸುತ್ತದೆ.

ನವದೆಹಲಿ: ಜನರ ಜೀವನ ಗುಣಮಟ್ಟ ಮತ್ತು ಬಡತನದ ಪ್ರಮಾಣ ಅಳೆಯಲು ನಡೆಸುವ ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2023-24ನೇ ಸಾಲಿನ ಈ ವರದಿ ಅನ್ವಯ ಗ್ರಾಮೀಣ ಪ್ರದೇಶಗಳ ಪೈಕಿ ಒಡಿಶಾದಲ್ಲಿ ವೆಚ್ಚದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡುಬಂದಿದ್ದರೆ, ನಗರ ಪ್ರದೇಶಗಳ ಪೈಕಿ ಪಂಜಾಬ್‌ ಮೊದಲ ಸ್ಥಾನದಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ದೇಶದ ಮುಂಚೂಣಿ ರಾಜ್ಯಗಳ ಪೈಕಿ ಒಂದಾದ ಕರ್ನಾಟಕ ಅತಿ ಕನಿಷ್ಠ ಏರಿಕೆ ಕಂಡ ರಾಜ್ಯಗಳ ಪೈಕಿ 2ನೇ ಸ್ಥಾನದಲ್ಲಿದೆ. ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ ಎಂದರೆ ಜನರ ಜೀವನ ಗುಣಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮುಂಬೈನಲ್ಲಿ ಜೀವನ ಗುಣಮಟ್ಟ ಅತ್ಯುತ್ತಮ, ಮಹಿಳೆಯರ ಗೌರವಿಸುವ ನಗರ ಚೆನ್ನೈ!

ಒಡಿಶಾ ನಂ.1: 2022-23 ಅವಧಿಯಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ತಲಾ ಮಾಸಿಕ ವೆಚ್ಚವನ್ನು ಒಡಿಶಾ (ಶೇ.14ರಷ್ಟು ಏರಿಕೆ) ದಾಖಲಿಸಿದರೆ, ನಗರ ಪ್ರದೇಶಗಳಲ್ಲಿ ಪಂಜಾಬ್‌ (ಶೇ.13ರಷ್ಟು ಏರಿಕೆ) ಈ ಸ್ಥಾನ ಪಡೆದಿದೆ. ಒಟ್ಟಾರೆಯಾಗಿ 18 ರಾಜ್ಯಗಳಲ್ಲಿ ಈ ಸಂಖ್ಯೆ ಏರಿಕೆಯಾಗಿದೆ. ಅಂತೆಯೇ, ಮಹಾರಾಷ್ಟ್ರದಲ್ಲಿ ಅತಿ ಕನಿಷ್ಠ (ಶೇ.3ರಷ್ಟು) ಏರಿಕೆಯಾದರೆ, 2ನೇ ಸ್ಥಾನದಲ್ಲಿ ಶೇ.5ರಷ್ಟು ಗೃಹಬಳಕೆ ವೆಚ್ಚ ಏರಿಕೆ ಕಂಡ ಕರ್ನಾಟಕ ಇದೆ.

ಇದನ್ನೂ ಓದಿ: Top 10 ಉತ್ತಮ ಜೀವನ ಗುಣಮಟ್ಟ ಹೊಂದಿರುವ ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?