ನವದೆಹಲಿ(ಡಿ.05): ಮಾಯಾನಗರಿ, ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈನಲ್ಲಿ ಜನರ ಜೀವನ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಬಾಂಬೆ ಐಐಟಿ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಭಾರತದ ನಗರಗಳಲ್ಲಿರುವ ಪರಿಸ್ಥಿತಿಯ ವಾಸ್ತವತೆ ತಿಳಿಯುವ ಸಲುವಾಗಿ ನಡೆಸಲಾದ ಈ ಸಮೀಕ್ಷೆಯ ಸೂಚ್ಯಂಕ ಬಿಡುಗಡೆ ಮಾಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ ಲಿಂಗಾನುಪಾತ ಅಂಶ ಸೇರಿಸಿದ್ದು, ಚೆನ್ನೈ ಮಹಿಳೆಯರ ಪಾಲಿಗೆ ಅತ್ಯುತ್ತಮ ಹಾಗೂ ಸುರಕ್ಷತೆಯುಳ್ಳ ನಗರ ಎನಿಸಿಕೊಂಡಿದೆ.

ಈ ಸಮೀಕ್ಷೆಯಲ್ಲಿ ಒಳಪಡಿಸಲಾದ ದೇಶದ ಒಟ್ಟು 14 ನಗರಗಳ ಪೈಕಿ ಮುಂಬೈ ಮೊದಲ ಸ್ಥಾನ ಬಾಚಿಕೊಂಡರೆ,  ರಾಷ್ಟ್ರ ರಾಜಧಾನಬಿ ದೆಹಲಿ, ಕೊಲ್ಕತ್ತಾ ಹಾಗೂ ಚೆನ್ನೈ ಇದಾಧ ಬಳಿಕದ ಸ್ಥಾನಗಳನ್ನು ಪಡೆದುಕೊಂಡಿವೆ. ಲಿಂಗ ಸಮಾನತೆ ಮಾನದಂಡ, ಜೀವನ ಗುಣಮಟ್ಟ ಈ ಫಲಿತಾಂಶಕ್ಕೆ ಸೇರಿಸಿದ್ದರೆ ಆರು ನಗರಗಳ ರ್ಯಾಂಕಿಂಗ್ ಬದಲಾಗುತ್ತಿತ್ತು. 

ದೆಹಲಿ ಜೈಪುರ ಹಾಗೂ ಇಂದೋರ್ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸುತ್ತಿದ್ದವು, ಈ ಮೂಲಕ ಮುಂಬೈ, ಭೋಪಾಲ್ ಮತ್ತು ಲಕ್ನೋವನ್ನು ಹಿಂದಿಕ್ಕುತ್ತಿದ್ದವು. ಲಿಂಗ ಸೂಚ್ಯಂಕದಲ್ಲಿ ಚೆನ್ನೈ, ಕೊಲ್ಕತ್ತಾ ಹಾಗೂ ಮುಂಬೈ ಮಾತ್ರ ಸರಾಸರಿಗಿಂತ ಅಧಿಕ ಅಂಕ ಗಳಿಸಿವೆ. ಇಂದೋರ್, ಜೈಪುರ ಹಾಗೂ ಪಾಟ್ನಾ ಸರಾಸರಿಗಿಂತ ಹಿಂದಿವೆ.