ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಕಂಪನಿ ಜೊತೆ ರಿಲಯನ್ಸ್ ಇಂಡಸ್ಟ್ರಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಘೋಷಣೆಗಳು ಹೊರಬೀಳುತ್ತಿದ್ದಂತೆ ರಿಲಯನ್ಸ್ ಕಾರು ಬಿಡುಗಡೆಯಾಗುತ್ತಾ ಅನ್ನೋ ಪ್ರಶ್ನೆಗಳು ಮೂಡಿದೆ. ಏನಿದು ಒಪ್ಪಂದ?
ಮುಂಬೈ (ಆ.14) ರಿಲಯನ್ಸ್ ಸಂಸ್ಥೆ ಟೆಲಿಕಾಂ, ಇಂಧನ, ಎನರ್ಜಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಯಶಸ್ವಿಯಾಗಿ ಬೆಳೆದು ನಿಂತಿದೆ. ಇದೀಗ ರಿಲಯನ್ಸ್ ವಿಶ್ವದ ಪ್ರತಿಷ್ಠಿತ ಹಾಗೂ ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇಂದು (ಆ.14) ಈ ಒಪ್ಪಂದದ ಘೋಷಣೆ ಹೊರಬಿದ್ದಿದೆ. ಮುಕೇಶ್ ಅಂಬಾನಿ ಒಡೆತದನ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಹಾಗೂ ಬ್ರಿಟನ್‌ನ ದೈತ್ಯ ರೋಲ್ಸ್ ರಾಯ್ಸ್ ಜೊತೆ ಒಪ್ಪಂದ ನಡೆದಿದೆ.
ರಿಲಯನ್ಸ್ ಹಾಗೂ ರೋಲ್ಸ್ ರಾಯ್ಸ್ ಒಪ್ಪಂದ ಯಾಕೆ?
ರಿಲಯನ್ಸ್ ಹಾಗೂ ರೋಲ್ಸ್ ರಾಯ್ಸ್ ಜೊತೆಯಾಗಿ ಸ್ವದೇಶಿ ತಂತ್ರಜ್ಞಾನದ ಎಂಜಿನ್ ಅಭಿವೃದ್ಧಿಪಡಿಸಲಿದೆ. ಹೌದು, ಅಡ್ವಾನ್ಸ್ ಮೀಡಿಯಂ ಕಂಬ್ಯಾಟ್ ಏರ್‌ಕ್ರಾಫ್ಟ್‌ಗಳಿಗೆ ಸ್ವದೇಶಿ ತಂತ್ರಜ್ಞಾನದ ಎಂಜಿನ್ ಅಭಿವೃದ್ಧಿ ಹಾಗೂ ಉತ್ಪಾದನೆಗೆ ಈ ಒಪ್ಪಂದ ನಡೆದಿದೆ. ಈ ಒಪ್ಪಂದಂದ ಭಾರತದಲ್ಲೇ ಯುದ್ಧ ವಿಮಾನಗಳ ಎಂಜಿನ್ ಅಭಿವೃದ್ಧಿಪಡಿಸಿ ಉತ್ಪಾದನೆಯಾಗಲಿದೆ. ಇದರಿಂದ ಸ್ವದೇಶಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್ ಭಾರತದಲ್ಲೇ ಉತ್ಪಾದನೆಯಾಗಲಿದೆ.
ರೋಲ್ಸ್ ರಾಯ್ಸ್ ಬ್ರಿಟನ್‌ನ ದೈಕ್ಯ ಏರೋ ಎಂಜಿನ್ ಸಂಸ್ಥೆ. ಇದೇ ಸಂಸ್ಥೆ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರುಗಳನ್ನು ಉತ್ಪಾದಿಸುತ್ತಿದೆ. ಭಾರತದ ಶ್ರೀಮಂತರಲ್ಲಿ ರೋಲ್ಸ್ ರಾಯ್ಸ್ ಕಾರುಗಳಿವೆ. ಸದ್ಯ ರಿಲಯನ್ಸ್ ಹಾಗೂ ರೋಲ್ಸ್ ರಾಯ್ಸ್ ಒಪ್ಪಂದ ಯುದ್ದವಿಮಾನಗಳ ಸ್ವದೇಶಿ ಎಂಜಿನ್ ಅಭಿವೃದ್ಧಿ ಹಾಗೂ ಉತ್ಪಾದನೆ ಕುರಿತಾಗಿದೆ. ಇದಕ್ಕಾಗಿ ಏರೋಸ್ಪೇಸ್ ಗ್ಯಾಸ್ ಟರ್ಬೈನ್ ಕಾಂಪ್ಲೆಕ್ಸ್ ಕೂಡ ನಿರ್ಮಾಣ ಮಾಡಲು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ರಿಲಯನ್ಸ್ ಹಾಗೂ ರೋಲ್ಸ್ ರಾಯ್ಸ್ ಏರ್‌ಕ್ರಾಫ್ಟ್ ಘಟಕ ವಿದ್ಯುತ್ ಹಾಗೂ ಪ್ರೊಪಲ್ಶನ್ ತಂತ್ರಜ್ಞಾನಗಳ ಕೇಂದ್ರವಾಗಿ ಕಾರ್ಯನಿರ್ವಹಸಲಿದೆ. ಯುದ್ಧವಿಮಾನಗಳ ಎಂಜಿನ್ ವಿನ್ಯಾಸ, ಅಭಿವೃದ್ಧಿ, ತಂತ್ರಜ್ಞಾನ, ಉತ್ಪಾದನೆ, ಪೂರೈಕೆ ಸೇರಿದಂತೆ ಸಂಪೂರ್ಣ ಇದೇ ಕಂಪನಿಗಳು ಜಂಟಿಯಾಗಿ ಮಾಡಲಿದೆ.
ಆತ್ಮನಿರ್ಭರತೆ ಪರಿಕಲ್ಪನೆಯಡಿಯಲ್ಲಿ ಈ ಮಹತ್ವದ ಒಪ್ಪಂದ ನಡೆದಿದೆ. ಸ್ವದೇಶಿ ನಿರ್ಮಿತ ಯುದ್ಧವಿಮಾನ ಎಂಜಿನ್ ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಭಾರತದ ವಾಯುಪಡೆಯ ಯುದ್ದ ವಿಮಾನಗಳ ಎಂಜಿನ್‌ಗಳಿಗೆ ವಿದೇಶಗಳ ಮೊರೆ ಹೋಗಬೇಕಾಗಿತ್ತು. ಇದೀಗ ಸ್ವದೇಶದಲ್ಲಿ ನಿರ್ಮಾಣವಾಗಲಿದೆ. ಈ ಮೂಲಕ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಭಾರತದ ವಾಯುಪಡೆ ಕೈಸೇರಲಿದೆ.


