ಶೇ. 90 ರಷ್ಟು ಭಾರತೀಯರಿಗೆ ಮುಖೇಶ್ ಮಗಳ ಮದುವೆ ಗಿಫ್ಟ್!

ರಿಲಯನ್ಸ್ ಕಂಪನಿಯೊಂದ ಮತ್ತೊಂದು ಭರ್ಜರಿ ಸ್ಕೀಮ್| ಶೇ.90 ರಷ್ಟು ಭಾರತೀಯರನ್ನು ತಲುಪಲಿದೆ ರಿಲಯನ್ಸ್ ಯೋಜನೆ| ದೇಶಾದ್ಯಂತ ಸುಮಾರು 5,100 ರಿಲಯನ್ಸ್ ರಿಟೇಲ್ಸ್ ಮಳಿಗೆ| ಅಗತ್ಯ ವಸ್ತುಗಳು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಿದೆ ರಿಲಯನ್ಸ್| 10 ಸಾವಿರ ಜನಸಂಖ್ಯೆ ಇರುವ ಸಣ್ಣ ನಗರಗಳಲ್ಲಿ ಜಿಯೋ ಸ್ಟೋರ್‌

Reliance Jio Plans to Establish Retail Stores

ಕೋಲ್ಕತ್ತಾ(ಡಿ.18): ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ, ಮಗಳ ಮದುವೆ ಮಾಡಿ ಒಂಚೂರು ರೆಸ್ಟ್ ಮಾಡ್ತಾರೆ ಅಂತಲೇ ಉದ್ಯಮ ಕ್ಷೇತ್ರ ಭಾವಿಸಿತ್ತು. ಆದರೆ ಸುಮ್ಮನೆ ಕೂರುವ ಜಾಯಮಾನ ತನ್ನದಲ್ಲ ಎನ್ನುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಮತ್ತೆ ಸಾಬೀತು ಮಾಡಿದೆ.

ಇ-ಕಾಮರ್ಸ್, ಮೊಬೈಲ್, ನೆಟ್‌ವರ್ಕ್ ಕ್ರಾಂತಿ, ಡಿಜಿಟಲ್ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿ ಹೆಜ್ಜೆ ಇಡುತ್ತಿರುವ ರಿಲಯನ್ಸ್, ಇದೀಗ ಮತ್ತೊಂದು ಯೋಜನೆಯೊಂದಿಗೆ ಭಾರತೀಯರ ಮನೆ ಮನೆಗೆ ಬರಲಿದೆ.

ದೇಶದ ಸುಮಾರು 5000 ನಗರಗಳಲ್ಲಿ 5100  ಜಿಯೋ ಸ್ಟೋರ್ಸ್ ತೆರಯಲು ರಿಲಯನ್ಸ್ ಮುಂದಾಗಿದೆ. ಅರೆ! ಇದರಲ್ಲೇನು ಹೊಸದು?. ಈಗಾಗಲೇ ದೇಶಾದ್ಯಂತ ಜಿಯೋ ಸ್ಟೋರ್‌ಗಳು ಇವೆಯಲ್ಲ ಅಂತೀರಾ?.

ಇವು ರಿಲಯನ್ಸ್ ಜಿಯೋ ಮೊಬೈಲ್ ಸ್ಟೋರ್‌ಗಳಲ್ಲ. ಬದಲಿಗೆ ಅಗತ್ಯ ವಸ್ತುಗಳ ಮಾರಾಟದ ಜಿಯೋ ರಿಟೇಲ್ಸ್ ಸ್ಟೋರ್‌ಗಳು. ಹೌದು ಇದುವರೆಗೂ ಆನ್‌ಲೈನ್ ಶಾಪಿಂಗ್ ಮಾಡಿರದ ಜನರತ್ತ ಗಮನ ಹರಿಸಿರುವ ರಿಲಯನ್ಸ್, ದೇಶಾದ್ಯಂತ ಜಿಯೋ ರಿಟೇಲ್ಸ್ ಮಳಿಗೆಗಳನ್ನು ತೆರಯುವ ಮೂಲಕ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗೆ ತಲುಪಿಸುವ ಯೋಜನೆ ರೂಪಿಸಿದೆ.

ಗ್ರಾಹಕರು ಈ ರಿಲಯನ್ಸ್ ರಿಟೇಲ್ಸ್ ಸ್ಟೋರ್‌ಗಳಿಂದ ಅಗತ್ಯ ವಸ್ತುಗಳನ್ನು ಕರೆ ಮಾಡುವ ಮೂಲಕ ಮನೆಗೆ ತರಿಸಿಕೊಳ್ಳಬಹುದು. ಅಲ್ಲದೇ ನೇರವಾಗಿ ಸ್ಟೋರ್‌ಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಬಹುದಾಗಿದೆ.

10 ಸಾವಿರ ಜನಸಂಖ್ಯೆ ಇರುವ ಸಣ್ಣ ನಗರಗಳಲ್ಲಿ ಈ ಜಿಯೋ ಸ್ಟೋರ್‌ಗಳನ್ನು ತೆರೆಯುವ ಮೂಲಕ ಇ-ಕಾಮರ್ಸ್ ಗೆ ಬಲ ತುಂಬಲು ರಿಲಯನ್ಸ್ ಮುಂದಾಗಿದೆ. ಈ ಮೂಲಕ ದೇಶದ ಶೇ.90-95ರಷ್ಟು ಜನರನ್ನು ತಲುಪುವ ಆಶಾವಾದ ಕಂಪನಿಯದ್ದಾಗಿದೆ.

Jio ಗ್ರಾಹಕರಿಗೆ ಪ್ರತಿದಿನ 2ಜಿಬಿ ಹೆಚ್ಚುವರಿ ಡೇಟಾ: ಹೀಗೆ ಲಾಭ ಪಡೆಯಿರಿ!

ಜಿಯೋಗೆ ಮುಡಿಗೆ ಇನ್ನೊಂದು ಗರಿ; ಬಳಕೆದಾರರಿಗೆ ಹೊಸ ಸೇವೆ

ರಿಲಯನ್ಸ್ ಜಿಯೋದಿಂದ 5ಜಿ ಸೇವೆ

Latest Videos
Follow Us:
Download App:
  • android
  • ios