ರಿಲಯನ್ಸ್ ಜಿಯೋದಿಂದ 5ಜಿ ಸೇವೆ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ  ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

Reliance Jio to show 5G services at India Mobile Congress

ನವದೆಹಲಿ: ದೇಶಾದ್ಯಂತ ರಿಲಯನ್ಸ್‌ನ 4ಜಿ ಜಿಯೋ ಸೇವೆ ಮನೆ ಮಾತಾಗಿರುವ ಬೆನ್ನಲ್ಲೇ, ರಿಲಯನ್ಸ್ ಜಿಯೋ ನೂತನ 5ಜಿ ನೆಟ್‌ವರ್ಕ್ ತಂತ್ರಜ್ಞಾನವನ್ನು ಗುರುವಾರ ಪ್ರದರ್ಶನ ಮಾಡಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

ಈ ತಂತ್ರಜ್ಞಾನದ ಮೂಲಕ ಆಕಾಶದಿಂದಲೇ, ಮುಖ ಚರ್ಯೆ (ಫೇಶಿಯಲ್ ರಿಕಗ್ನಿಶನ್) ಮೂಲಕ ಬೆದರಿಕೆ ಗುರುತಿಸಿ ಮತ್ತು ಅವುಗಳಿಂದ ರಕ್ಷಣೆ ಒದಗಿಸುವ ಡ್ರೋನ್ ಚಾಲನೆ ಮಾಡಬಹುದು. ದಿಲ್ಲಿಯಲ್ಲೇ ಕುಳಿತು ಫೇಶಿಯಲ್ ರಿಕಗ್ನಿಶನ್ ಮೂಲಕ ಮುಂಬೈ ನಲ್ಲಿ ಕಾರು ಚಲಾಯಿಸಬಹುದು.  ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೋ, ‘4ಜಿ ತಂತ್ರಜ್ಞಾನಕ್ಕಿಂತಲೂ 10 ಪಟ್ಟು ಹೆಚ್ಚು ಸಾಮರ್ಥ್ಯವಿರುವ 5ಜಿ ನೆಟ್‌ವರ್ಕ್‌ನಿಂದ ರಿಮೋಟ್ ವಾಹನಗಳನ್ನು ನಿಯಂತ್ರಿಸಬಹುದಾಗಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗುತ್ತದೆ. 5ಜಿ ಸೇವೆ ಅನಾವರಣದಿಂದ ಮೊಬೈಲ್ ನೆಟ್‌ವರ್ಕ್‌ನಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ,’ ಎಂದಿದೆ. ಅಲ್ಲದೆ, 5ಜಿ ಸೇವೆಯಿಂದ ರಿಮೋಟ್ ಆಧಾರಿತ ಕಾರ್ಯ ನಿರ್ವಹಿಸಬಹುದಾದ ಸಾಧನಗಳ ಬಳಕೆಗೆ ಸಹಕಾರಿಯಾಗಲಿದೆ. ಪ್ರಕೃತಿ ವೈಪರಿತ್ಯಗಳು ಸಂಭವಿಸಿದಾಗ,  ಅಲ್ಲಿನ ಭದ್ರತಾ ಕಾರ್ಯಾಚರಣೆಗೆ ಮಾನವನನ್ನು ಕಳುಹಿಸುವ ಬದಲಿಗೆ 5ಜಿ ಸೇವೆಯಿಂದಲೇ ನಿರ್ವಹಿಸಬಹುದಾಗಿದೆ. 

ಭಾರೀ ಗಾತ್ರದ ಯಂತ್ರಗಳು, ವೈದ್ಯಕೀಯ, ಸರ್ಜರಿ ಸೇರಿ ಇತರ ಕ್ಷೇತ್ರಗಳಲ್ಲಿಯೂ 5ಜಿ ಕ್ರಾಂತಿಕಾರಿ ಯಾಗಲಿದೆ. ಕೆಲವೇ ವರ್ಷ ಗಳಲ್ಲಿ ಗ್ರಾಹಕರಿಗೆ ನೂತನ 5 ಜಿ ಅನುಭವ ಲಭಿಸಲಿದೆ’ ಎಂದಿದೆ. ಸಮಾವೇಶದಲ್ಲಿ ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ, ಏರ್‌ಟೆಲ್‌ನ ಸುನಿಲ್ ಮಿತ್ತಲ್ ಇದ್ದರು.

Latest Videos
Follow Us:
Download App:
  • android
  • ios