ಭಾರತ ಮತ್ತು ಜಪಾನ್ ನಡುವೆ VOLTE ಆಧಾರಿತ ಒಳಬರುವ (ಇನ್‌ಬೌಂಡ್) ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯ ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿ. (ಜಿಯೋ) ಘೋಷಿಸಿದೆ. ಈ ಸೇವೆಯ ಆರಂಭದೊಂದಿಗೆ ಭಾರತದಲ್ಲಿ VOLTE ಆಧಾರಿತ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸುವ ಮೊದಲ 4G ಮೊಬೈಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಈ ಸೇವೆಯನ್ನು ಬಳಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಎಚ್‌ಡಿ ವಾಯ್ಸ್ ಹಾಗೂ ಎಲ್‌ಟಿಇ ಅತಿವೇಗದ ಡೇಟಾ ಸಂಪರ್ಕವನ್ನು ಆನಂದಿಸಲಿದ್ದಾರೆ. 

 ಜಿಯೋನ ಸಂಪೂರ್ಣ-ಐಪಿ, ಅನನ್ಯ 4G ಜಾಲದಲ್ಲಿ, ಅತಿವೇಗದ ಡೇಟಾ ಹಾಗೂ ವಾಯ್ಸ್ ಸೇವೆಗಳನ್ನು ಅಂತಾರಾಷ್ಟ್ರೀಯ ಪ್ರಯಾಣಿಕರೂ ಪಡೆಯುವಂತಾಗಲು ಜಿಯೋ VOLTE ಕಾಲಿಂಗ್ ಹಾಗೂ ಎಲ್‌ಟಿಇ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ನೆರವಾಗಲಿದ್ದು, ಇದನ್ನು ಬಳಸಲಿರುವ ಮೊದಲ ಅಂತಾರಾಷ್ಟ್ರೀಯ ಮೊಬೈಲ್ ಸೇವಾ ಸಂಸ್ಥೆ ಜಪಾನಿನ ಕೆಡಿಡಿಐ ಕಾರ್ಪೊರೇಶನ್ ಆಗಲಿದೆ, ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಈ ಫೋನ್‌ಗಳಿಗೆ ಸಾಫ್ಟ್ ವೇರ್ ಅಪ್ಡೇಟ್ ಸಿಗಲ್ಲ!

 "ಇಡೀ ಭಾರತ ದೇಶಕ್ಕೆ ಮತ್ತು ಹಾಗೂ ಇಲ್ಲಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಡೇಟಾ ಮತ್ತು ವಾಯ್ಸ್ ಅನುಭವವನ್ನು ನೀಡುವುದು ರಿಲಯನ್ಸ್ ಜಿಯೋ ಗುರಿ. ಭಾರತದ ಮೊದಲ ಅಂತಾರಾಷ್ಟ್ರೀಯ VOLTE ಹಾಗೂ ಎಚ್‌ಡಿ ರೋಮಿಂಗ್ ಬಳಕೆದಾರರಾಗಿ ಕೆಡಿಡಿಐ ಗ್ರಾಹಕರನ್ನು ನಾವು ಜಿಯೋಗೆ ಸ್ವಾಗತಿಸುತ್ತೇವೆ," ಎಂದು ರಿಲಯನ್ಸ್ ಜಿಯೋದ ಮಾರ್ಕ್ ಯಾರ್ಕೋಸ್ಕಿ ಹೇಳಿದ್ದಾರೆ.  

 ಸೆಪ್ಟೆಂಬರ್ 2018ರಲ್ಲಿ 20.6 ಎಂಬಿಪಿಎಸ್ ಡೌನ್‌ಲೋಡ್ ವೇಗದೊಡನೆ, ಟ್ರಾಯ್‌ನ ಮೈಸ್ಪೀಡ್ ಅಪ್ಲಿಕೇಶನ್‌ನಿಂದ ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಸತತವಾಗಿ ದೇಶದ ಅತ್ಯಂತ ವೇಗದ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಯೋ‌ದ ವಿಶ್ವದರ್ಜೆಯ ಸಂಪೂರ್ಣ ಐಪಿ ಜಾಲವನ್ನು ಅಂತಾರಾಷ್ಟ್ರೀಯ ಪ್ರಯಾಣಿಕರೂ ಬಳಸುವುದು ಈ ಹೊಸ ವ್ಯವಸ್ಥೆಯಿಂದಾಗಿ ಸಾಧ್ಯವಾಗಲಿದೆ. ದೇಶದಲ್ಲೇ ಅತ್ಯಂತ ದೊಡ್ಡದಾದ ಎಲ್‌ಟಿಇ ವ್ಯಾಪ್ತಿ ಹೊಂದಿರುವ ಹೆಗ್ಗಳಿಕೆಯನ್ನೂ ಜಿಯೋ ಸ್ಥಿರವಾಗಿ ಪಡೆಯುತ್ತ ಬಂದಿದೆ.  

ಪ್ರಾರಂಭವಾದ ಎರಡೇ ವರ್ಷಗಳಲ್ಲಿ 252 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರನ್ನು ಪಡೆದು, ವಿಶ್ವದ 9ನೇ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಬೆಳೆದಿರುವ ಜಿಯೋ ನಮ್ಮ ದೇಶವನ್ನು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿ ಬದಲಿಸಿದೆ. ದೇಶದ ಡೇಟಾ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವ ಸಮಗ್ರ ಮತ್ತು ವಿನೂತನ ಕೊಡುಗೆಗಳನ್ನು ಗ್ರಾಹಕರಿಗೆ ನೀಡುವ ತನ್ನ ಬದ್ಧತೆಯನ್ನು ಜಿಯೋ ಮುಂದುವರೆಸಿದೆ.