ನೀವು ರಿಲಾಯನ್ಸ್ ಜಿಯೋ ಗ್ರಾಹಕರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಕಾದಿದೆ. ಯಾಕೆಂದರೆ ಕಂಪೆನಿಯು Jio Celebration Pack ವ್ಯಾಲಿಡಿಟಿಯನ್ನು ಕೆಲ ಆಯ್ದ ಗ್ರಾಹಕರಿಗೆ ನವೆಂಬರ್ 30ರವರೆಗೆ ಮುಂದೂಡಿದೆ. ಈ ಮೂಲಕ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ಕಂಪೆನಿಯು ಸಪ್ಟೆಂಬರ್‌ನಲ್ಲಿ ತನ್ನ ಗ್ರಾಹಕರಿಗೆ Jio Celebration Pack ನ್ನು ಜಾರಿಗೆ ತಂದಿತ್ತು ಎಂಬುವುದು ಗಮನಾರ್ಹ. ಇದರಲ್ಲಿ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಹೆಚ್ಚುವರಿ ಡೇಟಾ ಸಿಗುತ್ತಿತ್ತು. 

ಲಾಭ ಪಡೆಯುವುದು ಹೇಗೆ?

ಯಾವೆಲ್ಲ ಗ್ರಾಹಕರ ಬಳಿ ಆ್ಯಕ್ಟಿವ್ ಜಿಯೋ ಪ್ಲಾನ್ ಇದೆಯೋ ಅವರೆಲ್ಲರಿಗೂ ಇದರ ಲಾಭ ಸಿಗಲಿದೆ ಎಂಬ ಮಾಹಿತಿ ಸಿಕ್ಕಿದೆ. ನಿಮಗೆ ಹೆಚ್ಚುವರಿ ಡೇಟಾ ಸಿಗುತ್ತದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು MyJio ಆ್ಯಪ್ ಓಪನ್ ಮಾಡಿ, ಮೆನು ಆಯ್ಕೆಯನ್ನು ನೋಡಬೇಕು. ಅಲ್ಲಿ ಜಿಯೋ ಸೆಲೆಬ್ರೇಷನ್ ಪ್ಯಾಕ್ ಇದೆಯಾ ಎಂದು ಪರಿಶೀಲಿಸಬಹುದು. ಒಂದು ವೇಳೆ ಈ ಪ್ಲಾನ್ ಆ್ಯಕ್ಟಿವ್ ಆಗಿದ್ದರೆ, ಇದು ಯಾವಾಗದವರೆಗೆ ನಿಮಗೆ ಸಿಗುತ್ತದೆ ಎಂಬುವುದೂ ನೀವಿಲ್ಲಿ ಗಮನಿಸಬಹುದಾಗಿದೆ. 

ಇನ್ನು ಇತ್ತೀಚೆಗಷ್ಟೇ ಜಿಯೋ ದೀಪಾವಳಿ ಸಂದರ್ಭದಲ್ಲಿ ತನ್ನ ಗ್ರಾಹಕರಿಗಾಗಿ Jio Diwali Dhamaka Offer ಆರಂಭಿಸಿತ್ತು. ಈ ಸಂದರ್ಭದಲ್ಲಿ ನೀವು 149 ಅಥವಾ ಅದಕ್ಕೂ ಹೆಚ್ಚು ಮೊತ್ತದ ರೀಚಾರ್ಜ್ ಮಾಡಿದ್ದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಿತ್ತು. ಈ ಕ್ಯಾಶ್ ಬ್ಯಾಕ್ Myjio ಆ್ಯಪ್‌ನಲ್ಲಿ MyCoupons ಸೆಕ್ಷನ್‌ನಲ್ಲಿ ಕೂಪನ್ ರೂಪದಲ್ಲಿ ಪಡೆಯಬಹುದಾಗಿತ್ತು. ಆದರೀಗ ಕಂಪೆನಿಯ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿ ಅನ್ವಯ ಬಳಕೆದಾರರು ಈಗಲೂ ಈ ಆಫರ್‌ನ ಲಾಭ ಪಡೆಯಬಹುದಾಗಿದೆ.

ಇಷ್ಟೇ ಅಲ್ಲದೇ ರಿಲಾಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ದೀರ್ಘ ಕಾಲದ ವ್ಯಾಲಿಡಿಟಿ ಪ್ಲಾನ್ ಕೂಡಾ ಲಾಂಚ್ ಮಾಡಿತ್ತು. ಇದರಡಿಯಲ್ಲಿ ಬಳಕೆದಾರರು 1699 ರೂಪಾಯಿಗಳ ರೀಚಾರ್ಜ್ ಮಾಡಿದರೆ ಬಳಕೆದಾರರು FUP ಪ್ಲಾನ್ ಇಲ್ಲದೇ ಒಂದು ವರ್ಷದವರೆಗೆ ಅನಿಯಮಿತ ಲೋಕಲ್ ಹಾಗೂ ನ್ಯಾಷನಲ್ ಕರೆಗಳನ್ನು ಮಾಡಬಹುದಾಗಿತ್ತು. ಇದರೊಂದಿಗೆ ಪ್ರತಿದಿನ 1.5 ಜಿಬಿಡೇಟಾ, 100 ಎಸ್ ಎಂಎಸ್ ಕೂಡಾ ಉಚಿತವಾಗಿ ಸಿಗುತ್ತದೆ. ಇಷ್ಟೇ ಅಲ್ಲದೇ ಈ ಪ್ಲಾನ್ ಅಡಿಯಲ್ಲಿ ಬಲಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯಾಕ್ಸ್‌ನಂತಹ ಪ್ರೀಮಿಯಂ ಸೌಲಭ್ಯದ ಲಾಭವೂ ಸಿಗುತ್ತಿದೆ.