ಆರ್ಥಿಕ ಕುಸಿತಕ್ಕೆ ವಿಶೇಷ ಮದ್ದು ನೀಡಿದ ಆರ್‌ಬಿಐ| ಕಳೆದ 9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ ಕೈಗೊಂಡ ಆರ್‌ಬಿಐ| ರೆಪೋ ದರವನ್ನು 5.15ಕ್ಕೆ ಕಡಿತಗೊಳಿಸಿ ಆರ್‌ಬಿಐ ಆದೇಶ| ರೆಪೋ ದರ ಕಡಿತದ ಪರಿಣಾಮವಾಗಿ ಗೃಹ ಮತ್ತು ವಾಹನ ಸಾಲದ ಬಡ್ಡಿ ಇಳಿಕೆ| ಶೇ.6.9ರ ಜಿಡಿಪಿ ಅಂದಾಜನ್ನು ಶೇ 6.1 ಕ್ಕೆ ಇಳಿಸಿದ ಆರ್‌ಬಿಐ|

ಮುಂಬೈ(ಅ.04): ಆರ್ಥಿಕ ಕುಸಿತಕ್ಕೆ ಮದ್ದು ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಸತತ ಐದನೇ ಬಾರಿ ರೆಪೋ ದರವನ್ನು ಕಡಿತಗೊಳಿಸಿ ಗಮನ ಸೆಳೆದಿದೆ.

Scroll to load tweet…

ನಿರೀಕ್ಷೆಯಂತೆ ರೆಪೋ ದರದಲ್ಲಿ 25 ಮೂಲಾಂಕಗಳನ್ನು ಕಡಿತ ಮಾಡಲಾಗಿದ್ದು, ತಕ್ಷಣದಿಂದ ಜಾರಿಯಾಗುವಂತೆ 5.4 ರಷ್ಟಿದ್ದ ರೆಪೋ ದರ 5.15 ರಷ್ಟಕ್ಕೆ ಕಡಿತ ಮಾಡಿ ಆರ್‌ಬಿಐ ಆದೇಶ ಹೊರಡಿಸಿದೆ. ಇದೇ ವೇಳೆ ರಿವರ್ಸ್ ರೆಪೋ ದವನ್ನುರ 4.9 ಕ್ಕೆ ಇಳಿಕೆ ಮಾಡಲಾಗಿದೆ.

ಇಂದು ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ, ಈ ಹಿಂದೆ ನಿರ್ಧರಿಸಿದ್ದ ಶೇ.6.9ರ ಜಿಡಿಪಿ ಅಂದಾಜನ್ನು ಶೇ 6.1 ಕ್ಕೆ ಇಳಿಸಿದೆ. ಅದರಂತೆ 2020- 21 ಕ್ಕೆ ಜಿಡಿಪಿ ಅಂದಾಜು ಶೇ.7.2ರಷ್ಟಿರಲಿದೆ ಎನ್ನಲಾಗಿದೆ.

Scroll to load tweet…

ಇನ್ನು ಇಂದಿನ ರೆಪೋ ದರ ಕಡಿತದ ಪರಿಣಾಮವಾಗಿ ಗೃಹ ಮತ್ತು ವಾಹನ ಸಾಲದ ಬಡ್ಡಿ ತಗ್ಗಲಿದ್ದು, 2010ರ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲೇ ಅತಿ ಕಡಿಮೆ ರೆಪೋ ದರ ಇದಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.