ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆಯ ಮಹತ್ವ| ಪ್ರಧಾನಿ ಮೋದಿಗೆ ಜಾಗತಿಕ ಗೋಲ್‌ಕೀಪರ್‌ ಪ್ರಶಸ್ತಿಯ ಗರಿ| ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆಯಿಂದ ಗ್ಲೋಬಲ್ ಗೋಲ್‌ಕೀಪರ್‌ ಪ್ರಶಸ್ತಿ| ಪ್ರಶಸ್ತಿಯನ್ನು ಭಾರತೀಯರಿಗೆ ಅರ್ಪಿಸಿದ ಪ್ರಧಾನಿ ಮೋದಿ|

ನ್ಯೂಯಾರ್ಕ್(ಸೆ.25): ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸ್ವಚ್ಛತೆಯ ಮಹತ್ವ ಸಾರಿದ್ದ ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್‌ಕೀಪರ್‌’ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಗೇಟ್ಸ್‌ ಪ್ರತಿಷ್ಠಾನ ನೀಡಿರುವ ಜಾಗತಿಕ ಗೋಲ್‌ಕೀಪರ್‌ ಪ್ರಶಸ್ತಿಯನ್ನು ಭಾರತದ 130 ಕೋಟಿ ಜನರಿಗೆ ಮತ್ತು ಸ್ಚಚ್ಛತೆಗಾಗಿ ನಡೆದ ರಾಷ್ಟ್ರದ ಸಾಮೂಹಿಕ ಕಾರ್ಯಗಳಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು. 

Scroll to load tweet…

ಸ್ವಚ್ಛ ಭಾರತದ ಯಶಸ್ಸಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಪಾತ್ರ ಅಧಿಕ ಎಂದ ಪ್ರಧಾನಿ ಮೋದಿ, ಸ್ವಚ್ಛ ಭಾರತ ಅಭಿಯಾನವನ್ನು ಜನರ ಚಳವಳಿಯಾಗಿ ಪರಿವರ್ತಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. 

ಮಹಾತ್ಮಾ ಗಾಂಧಿಜೀ 150ನೇ ಜನ್ಮ ದಿನಾಚರಣೆ ವರ್ಷದಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ವೈಯಕ್ತಿಕವಾಗಿಯೂ ಮಹತ್ವದ್ದು ಎಂದು ಮೋದಿ ಈ ವೇಳೆ ನುಡಿದರು.