2021ರ ಕೊನೆಯ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.ಇಂದು ಕೂಡ ರಾಜ್ಯದಲ್ಲಿ ಇಂಧನ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. 

ಬೆಂಗಳೂರು (ಡಿ.31):  2021ರ ಕೊನೆಯ ದಿನವಾದ ಇಂದು(ಡಿ.31) ಕೂಡ ರಾಜ್ಯದಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ(Prce) ಸ್ಥಿರವಾಗಿದೆ. ಈ ತಿಂಗಳ ಪ್ರಾರಂಭದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದ್ರೆ ಆ ನಿರೀಕ್ಷೆ ಹುಸಿಯಾಗಿದೆ. ಸುಮಾರು ಎರಡು ತಿಂಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ಡಿಸೆಂಬರ್ 29ರಂದು ಜಾರ್ಖಂಡ್ ( Jharkhand) ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 25ರೂ. ಇಳಿಕೆ ಮಾಡಿತ್ತು. ಇನ್ನು ಡಿಸೆಂಬರ್ 1ರಂದು ದೆಹಲಿ ಸರ್ಕಾರ ಕೂಡ ಪೆಟ್ರೋಲ್ ಮೇಲಿನ ವ್ಯಾಟ್ (VAT)ಕಡಿತಗೊಳಿಸೋ ಮೂಲಕ ಬೆಲೆಯಲ್ಲಿ ಇಳಿಕೆ ಮಾಡಿತ್ತು. ಈ ಎರಡು ರಾಜ್ಯಗಳನ್ನು ಹೊರತುಪಡಿಸಿದ್ರೆ ಈ ತಿಂಗಳಲ್ಲಿ ಬೇರೆ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. 2022ರ ಮೊದಲ ದಿನವಾದ್ರೂ ಇಂಧನ ದರದಲ್ಲಿ ಇಳಿಕೆ ಮಾಡೋ ಮೂಲಕ ಸರ್ಕಾರ ವಾಹನ ಸವಾರರಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ರಾಜ್ಯದಲ್ಲಿ ಇಂದಿನ (ಡಿ.31) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೀಗಿದೆ.

Add Asianetnews Kannada as a Preferred SourcegooglePreferred

ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ಬೆಂಗಳೂರಿನಲ್ಲಿ( Bengaluru)ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಇದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಡೀಸೆಲ್ ದರ ಲೀಟರ್ ಗೆ 85.01ರೂ ಇದೆ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ ಇಂದು 100.30ರೂ.ಇದೆ. ಡೀಸೆಲ್ ಬೆಲೆ ಇಂದು 84.78ರೂ.ಇದೆ. ಮಂಗಳೂರಿನಲ್ಲಿ (Mangalore)ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. ಮೈಸೂರಿನಲ್ಲಿ (Mysore)ಪೆಟ್ರೋಲ್ ದರ ಲೀಟರ್ ಗೆ 100.38ರೂ. ಇದೆ. ನಿನ್ನೆ ಪೆಟ್ರೋಲ್ ದರ 100.32ರೂ. ಇತ್ತು. ಇನ್ನು ಡೀಸೆಲ್ ದರ ಇಂದು ಲೀಟರ್ ಗೆ 84.83ರೂ. ಇದೆ. ನಿನ್ನೆ 84.77ರೂ. ಇತ್ತು. ಕಲಬುರಗಿಯಲ್ಲಿ(Kalburgi)ನಿನ್ನೆ ಪೆಟ್ರೋಲ್ ಬೆಲೆ ಲೀಟರ್ ಗೆ 101.05ರೂ. ಇತ್ತು. ಇಂದು 100.71ರೂ. ಇದೆ. ಡೀಸೆಲ್ ಲೀಟರ್ ಗೆ ನಿನ್ನೆ 85.15ರೂ. ಇತ್ತು. ಇಂದು 85.46ರೂ. ಇದೆ.

KYC Update Deadline Extended:ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್; ಕೆವೈಸಿ ದಾಖಲೆ ಸಲ್ಲಿಕೆ ಗಡುವು ಮಾ.31ಕ್ಕೆ ವಿಸ್ತರಣೆ

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ? 
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.