Asianet Suvarna News Asianet Suvarna News

ಪಾಕಿಸ್ತಾನದ ISI ಕಿತಾಪತಿ: 2000 ರು. ನೋಟು ಬಗ್ಗೆ ಹುಷಾರಾಗಿರಿ!

2000 ರು. ನೋಟು ಬಗ್ಗೆ ಹುಷಾರ್‌!| ಅಪನಗದೀಕರಣ ನಂತರ ಬಂದ್‌ ಆಗಿದ್ದ ಖೋಟಾನೋಟು ಜಾಲ ಮತ್ತೆ ಸಕ್ರಿಯ| ಪಾಕಿಸ್ತಾನದ ಐಎಸ್‌ಐ ಕಿತಾಪತಿ: ಅಸಲಿ ನೋಟಿನ ಭದ್ರತಾ ಅಂಶಗಳು ನಕಲಿ ನೋಟಿಗೆ ಅಳವಡಿಕೆ

Pakistan ISI agents copy hi tech features in latest Rs 2000 fake notes
Author
Bangalore, First Published Aug 31, 2019, 9:10 AM IST

ನವದೆಹಲಿ[ಆ.31]: ನಕಲಿ ನೋಟುಗಳನ್ನು ಮಟ್ಟಹಾಕಲೆಂದೇ ಭಾರೀ ಭದ್ರತಾ ಅಂಶಗಳನ್ನು ಒಳಗೊಂಡಿದ್ದ 2000 ರು. ಮೌಲ್ಯದ ಹೊಸ ನೋಟುಗಳನ್ನು ಭಾರತ ಸರ್ಕಾರ 3 ವರ್ಷಗಳ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ಪಕ್ಕಾ ಭಾರತದ 2000 ರು.ಮೌಲ್ಯದ ನಕಲಿ ನೋಟುಗಳನ್ನೇ ಹೋಲುವ ನಕಲಿ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನವು ಇದೀಗ ಭಾರತದ ಮೇಲೆ ಆರ್ಥಿಕ ಭಯೋತ್ಪಾದನೆ ಸಾರಿದೆ. ಅದರಲ್ಲೂ ಪಾಕಿಸ್ತಾನ ಭಾರತದೊಳಗೆ ಹರಿಯ ಬಿಡುತ್ತಿರುವ 2000 ರು. ಮೌಲ್ಯದ ನಕಲಿ ನೋಟುಗಳು ಅದೆಷ್ಟುಪ್ರಮಾಣದಲ್ಲಿ ಅಸಲು ನೋಟುಗಳನ್ನು ಹೋಲುತ್ತಿದೆ ಎಂದರೆ, ಭದ್ರತಾ ಸಂಸ್ಥೆಗಳೇ ಈ ನೋಟುಗಳನ್ನು ಪತ್ತೆಹಚ್ಚುವಲ್ಲಿ ಹರಸಾಹಸ ಪಡುವಂತಾಗಿದೆ.

ಸಾಲ ತೀರಿಸಲು ನಕಲಿ ನೋಟು ಮುದ್ರಣ: ಉದ್ಯಮಿ ಬಂಧನ!

ಹೀಗಾಗಿ ಇನ್ನೇನು ನಕಲಿ ನೋಟುಗಳ ಹಾವಳಿ ಮುಗಿಯಿತು ಎಂದುಕೊಂಡಿದ್ದ ಭಾರತೀಯರು ಮತ್ತೊಮ್ಮೆ ಇಂಥ ನೋಟುಗಳ ಬಗ್ಗೆ ಜಾಗ್ರತೆ ವಹಿಸಬೇಕಾದ ಅಗತ್ಯ ಎದುರಾಗಿದೆ.

ಬಂತು ನಕಲಿ ನೋಟು:

ಅಪನಗದೀಕರಣ ಬಳಿಕ ಸಂಪೂರ್ಣ ಬಂದ್‌ ಆಗಿದ್ದ ಪಾಕಿಸ್ತಾನ ಪ್ರಾಯೋಜಿತ ಖೋಟಾನೋಟು ಜಾಲ ಮತ್ತೆ ಚಿಗಿತುಕೊಂಡಿದೆ. 2000 ರು. ನೋಟನ್ನು ನಕಲು ಮಾಡಲಾಗದು ಎಂಬುದನ್ನು ಸುಳ್ಳಾಗಿಸಿರುವ ಪಾಕಿಸ್ತಾನ, ಥೇಟ್‌ 2000 ರು. ನೋಟನ್ನೇ ಹೋಲುವಂತಹ, ಅದರಲ್ಲಿರುವಂತಹ ಭದ್ರತಾ ಅಂಶಗಳನ್ನು ಹೊಂದಿದ ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಲು ಯತ್ನಿಸುತ್ತಿದೆ.

ಆ.24ರಂದು ದೆಹಲಿ ಪೊಲೀಸರ ವಿಶೇಷ ಘಟಕ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಾಗ ಆತನ ಬಳಿ 5.50 ಲಕ್ಷ ರು. ಮೌಲ್ಯದ ಖೋಟಾನೋಟುಗಳು ಪತ್ತೆಯಾಗಿವೆ. 2000 ರು. ಮುಖಬೆಲೆಯ ಈ ನೋಟುಗಳಲ್ಲಿ ಥೇಟ್‌ ಅಸಲಿ ನೋಟಿನ ಅಂಶಗಳೇ ಇದ್ದಿದ್ದರಿಂದ ತಕ್ಷಣಕ್ಕೆ ಪೊಲೀಸರಿಗೆ ಅದು ಅಸಲಿಯೋ, ನಕಲಿಯೋ ಎಂಬುದು ಗೊತ್ತಾಗಿಲ್ಲ. ಕರೆನ್ಸಿ ತಜ್ಞರ ಅಭಿಪ್ರಾಯ ಪಡೆದಾಗ ಅದು ಉತ್ಕೃಷ್ಟದರ್ಜೆಯ ಖೋಟಾನೋಟು ಎಂಬುದು ಪತ್ತೆಯಾಗಿದೆ.

ಭಾರತದಲ್ಲಿ ಮುದ್ರಣವಾಗುವ 2000 ರು. ಮುಖಬೆಲೆಯ ನೋಟುಗಳಿಗೆ ‘ಆಪ್ಟಿಕಲ್‌ ವೇರಿಯಬಲ್‌ ಇಂಕ್‌’ ಬಳಸಲಾಗುತ್ತದೆ. ದೆಹಲಿ ಪೊಲೀಸ್‌ ವಿಶೇಷ ಘಟಕ ವಶಪಡಿಸಿಕೊಂಡಿರುವ ಖೋಟಾನೋಟುಗಳಲ್ಲೂ ಇದೇ ಇಂಕ್‌ ಬಳಕೆಯಾಗಿದೆ. ಇದೊಂದು ಅತ್ಯುತ್ಕೃಷ್ಟಗುಣಮಟ್ಟದ ವಿಶೇಷ ಇಂಕ್‌ ಆಗಿದ್ದು, ಬಣ್ಣ ಬದಲಾವಣೆ ಪರಿಣಾಮವನ್ನು ತೋರುತ್ತದೆ. 2000 ರು. ಮುಖಬೆಲೆಯ ನೋಟುಗಳನ್ನು ತಿರುಗಿಸಿದಾಗ ಬಣ್ಣದ ದಾರ ಹಸಿರಿನಿಂದ ನೀಲಿಗೆ ಬದಲಾಗಲು ಇದೇ ಇಂಕ್‌ ಕಾರಣ.

ಬಂದೇ ಬಿಡ್ತು 20ರೂ. ಹೊಸ ನೋಟು!: ಹಳೆ ನೋಟು ಕತೆ ಏನು? ಇಲ್ಲಿದೆ ವಿವರ

ಮತ್ತೊಂದೆಡೆ, ಅಂಧರು ಸುಲಭವಾಗಿ ನೋಟು ಗುರುತಿಸಲಿ ಎಂದು 2000 ರು. ಮುಖಬೆಲೆಯ ನೋಟುಗಳ ಬಲಭಾಗದ ತುದಿಯಲ್ಲಿ ಅಳವಡಿಸಲಾಗಿರುವ ವಿಶಿಷ್ಟಸಂಖ್ಯೆಗಳನ್ನೂ ಪಾಕಿಸ್ತಾನ ಕಾಪಿ ಹೊಡೆದಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮೇಲುಸ್ತುವಾರಿಯಲ್ಲಿ ಕರಾಚಿಯ ಮಲೀರ್‌ ಹಾಲ್ಟ್‌ನಲ್ಲಿರುವ ಪಾಕಿಸ್ತಾನ ಸೆಕ್ಯುರಿಟಿ ಪ್ರೆಸ್‌ನಲ್ಲಿ ಖೋಟಾನೋಟುಗಳನ್ನು ಆಪ್ಟಿಕಲ್‌ ವೇರಿಯಬಲ್‌ ಇಂಕ್‌ ಬಳಸಿ ಮುದ್ರಿಸಲಾಗುತ್ತಿದೆ. ಈ ರೀತಿ ಮುದ್ರಿಸಲಾದ ನೋಟುಗಳ ಪ್ರಮುಖ ವಿತರಕ ಭಾರತದ ಕುಖ್ಯಾತ ಭಯೋತ್ಪಾದಕ ದಾವೂದ್‌ ಇಬ್ರಾಹಿಂನ ಡಿ- ಕಂಪನಿಯಾಗಿದೆ. ಅದೂ ಕರಾಚಿಯಲ್ಲೇ ನೆಲೆಯೂರಿದೆ ಎಂದು ಮೂಲಗಳು ತಿಳಿಸಿವೆ.

ಏನಾಗಿದೆ?

- ಆ.24ಕ್ಕೆ ದಿಲ್ಲಿ ಪೊಲೀಸರಿಂದ 5.5 ಲಕ್ಷ ಮೌಲ್ಯದ ನಕಲಿ ನೋಟು, ವ್ಯಕ್ತಿ ವಶ

- ಥೇಟ್‌ ಅಸಲಿ ನೋಟಿನಂತಿದ್ದ .2000 ಮುಖಬೆಲೆಯ ನಕಲಿ ನೋಟುಗಳು

- ಅಸಲಿ ನೋಟಲ್ಲಿದ್ದಂಥ ‘ಆಪ್ಟಿಕಲ್‌ ವೇರಿಯೇಬಲ್‌ ಇಂಕ್‌’ ನಕಲಿಯಲ್ಲೂ ಬಳಕೆ

- ಅಂಧರಿಗಾಗಿ ಅಳವಡಿಸಲಾಗಿದ್ದ ವಿಶಿಷ್ಟಉಬ್ಬು ಸಂಖ್ಯೆಯ ಮಾದರಿಯೂ ನಕಲಿ

- ಕರಾಚಿಯ ಸೆಕ್ಯುರಿಟಿ ಪ್ರೆಸ್‌ನಲ್ಲಿ ಮುದ್ರಣ. ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಉಸ್ತುವಾರಿ

100.ರು ಗಿಂತ ಹೆಚ್ಚಿನ ಮುಖಬೆಲೆಯ ನೋಟ್ ಬ್ಯಾನ್

Follow Us:
Download App:
  • android
  • ios