ರಾಜ್‌ಕೋಟ್(ಜೂ.17): ಮಾಡಿದ ಸಾಲ ತೀರಿಸಲು ಉದ್ಯಮಿಯೋರ್ವ ನಕಲಿ ನೋಟು ಮುದ್ರಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದಿದೆ.

ಜೆಟ್‌ಪುರ್ ಬಳಿ ಸ್ವಂತ ಕಾರ್ಖಾನೆ ನಡೆಸುತ್ತಿದ್ದ ಅಕ್ಬರಿ ಎಂಬ ಉದ್ಯಮಿ, ತನ್ನ ಸಾಲ ತೀರಿಸಲು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ವೇಳೆ 500 ಮತ್ತು 2,000 ಮುಖಬೆಲೆಯ 75,000 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉದ್ಯಮಿ ಅಕ್ಬರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.