ಕಠ್ಮಂಡು :  ನೇಪಾಳ ಕೇಂದ್ರೀಯ ಬ್ಯಾಂಕ್ ಭಾರತದ 100 ರು.ಗಿಂತ ಹೆಚ್ಚಿನ ಮುಖಬೆಲೆಯ ಎಲ್ಲಾ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಭಾರತದ 200, 500,2000 ರು. ನೋಟುಗಳನ್ನು ಬ್ಯಾನ್ ಮಾಡಿದೆ. ಇದರಿಂದ ಭಾರತೀಯ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಲಿದೆ. 

ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

ಹಿಮಾಲಯ ತಪ್ಪಲಿನ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುವುದರಿಂದ ಹೆಚ್ಚು ನೋಟುಗಳು ಇಲ್ಲಿ ಬಳಕೆಯಾಗುತ್ತವೆ. ಆದರೆ ನೋಟ್ ಬ್ಯಾನ್ ನಿಂದ ಸಾಕಷ್ಟು ಪರಿಣಾಮ ಉಂಟು ಮಾಡಲಿದೆ.  

ನೇಪಾಳ ರಾಷ್ಟ್ರೀಯ ಬ್ಯಾಂಕ್  ಭಾನುವಾರ 100 ರು.ಗಿಂತ ಹೆಚ್ಚಿನ ಮುಖಬೆಲೆಯ ಯಾವುದೇ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿ ಇರುವುದಿಲ್ಲ ಎಂದು ಆದೇಶ ನೀಡಿದ್ದಾಗಿ ಕಠ್ಮಂಡು ಟೈಮ್ಸ್ ವರದಿ ಮಾಡಿದೆ. ಭಾರತವನ್ನು ಹೊರತುಪಡಿಸಿ ನೇಪಾಳದಲ್ಲಿ ಇಲ್ಲಿನ ಜನರು, ಪ್ರವಾಸಿಗರಿಗೆ ಈ ನಿಯಮ ಅನ್ವಯಿಸಲಿದೆ.   

ರೈತರಿಗೆ ನೋಟ್ ಬ್ಯಾನ್ ಸಂಕಷ್ಟ: ಮೋದಿ ಸರ್ಕಾರದ ಸಚಿವಾಲಯ!

 ವ್ಯಾಪಾರ ವ್ಯವಹಾರ ನಡೆಸಲು 100 ರು. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ನೋಟುಗಳನ್ನು ಮಾತ್ರವೇ ಬಳಸಲು ಅವಕಾಶ ನೀಡಿದೆ. ಡಿಸೆಂಬರ್ 13 ರಂದು ನೇಪಾಳ ಕ್ಯಾಬಿನೆಟ್ ಅಮಾನ್ಯೀಕರಣದ ನಂತರದಲ್ಲಿ ಭಾರತದಲ್ಲಿ ಚಲಾವಣೆಗೆ ತರಲಾದ ಹೊಸ ನೋಟುಗಳ ಬಳಕೆ ನಿಷೇಧಿಸಲು ಅಂಗೀಕಾರ ನೀಡಿತ್ತು. ಇದೀಗ ಅಧಿಕೃತವಾಗಿ 100 ರು. ಹೆಚ್ಚಿನ ಮೊತ್ತದ ನೋಟುಗಳನ್ನು ದೇಶದಲ್ಲಿ ಅಮಾನ್ಯ ಮಾಡಿ ಇಲ್ಲಿನ ಬ್ಯಾಂಕ್ ನಿರ್ದೇಶನ ನೀಡಿದೆ. 

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದರಿಂದ 100 ರು.ಗಿಂತ ಹೆಚ್ಚಿನ ಮೊತ್ತದ ನೋಟುಗಳ ಬಳಕೆ ನಿಷೇಧ ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ. 

2016ರಲ್ಲಿ ಭಾರತದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಅದಾದ ಬಳಿಕ ದೇಶದಲ್ಲಿ ಹೊಸ 2000 ಹಾಗೂ 500, 200 ರು. ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು.