ಗಾಂಧೀನಗರ[ಆ.30]: ರಿಲಯನ್ಸ್ ಇಂಡಸ್ಟ್ರೀಸ್ ನ ಚೇರ್ಮನ್ ಗೇಹ ಸಚಿವ ಅಮಿತ್ ಶಾರನ್ನು ಓರ್ವ ಅಪ್ಪಟ ಕರ್ಮಯೋಗಿ ಹಾಗೂ ಉಕ್ಕಿನ ಮನುಷ್ಯ ಎಂದು ಕರೆದಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್‌ರನ್ನು ಭಾರತದ ಉಕ್ಕಿನ ಮನುಷ್ಯನೆಂದು ಕರೆಯಲಾಗುತ್ತದೆ ಎಂಬುವುದು ಉಲ್ಲೇಖನೀಯ.

ಗಾಂಧೀನಗರದ ಪಂಡಿತ ದೀನ್ ದಯಾಲ್ ಪೆಟ್ರೋಲಿಯಂ ಯೂನಿವರ್ಸಿಟಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅಂಬಾನಿ 'ಅಮಿಯತ್ ಜೀ, ನೀವು ಓರ್ವ ನಿಜವಾದ ಕರ್ಮಯೋಗಿ. ನಿವಜವಾದ ಅರ್ಥದಲ್ಲಿ ನೀವೇ ದೇಶದ ಉಕ್ಕಿನ ಮನುಷ್ಯ. ನಿಮ್ಮಂತಹ ನಾಯಕನನ್ನು ಪಡೆದ ಗುಜರಾತ್ ಹಾಗೂ ಭಾರತ ಧನ್ಯ' ಎಂದಿದ್ದಾರೆ.

ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

ಅಲ್ಲದೇ 'ಭಾರತ ಈಗ ಅತ್ಯಂತ ಸುರಕ್ಷಿತ ಕೈಗಳಲ್ಲಿದೆ. ಯಾವತ್ತೂ ನಿಮ್ಮ ಮಹತ್ವಾಕಾಂಕ್ಷೆಗಳನ್ನು ಕಡಿಮೆಗೊಳಿಸಬೇಡಿ, ದೊಡ್ಡ ಕನಸು ಕಾಣುವುದನ್ನು ನಿಲ್ಲಿಸಬೇಡಿ. ಭವಿಷ್ಯದಲ್ಲಿ ಭಾರತ ನಿಮ್ಮ ಮಹತ್ವಾಕಾಂಕ್ಷೆ ಹಾಗೂ ಕನಸು ಸಾಕಾರಗೊಳಿಸಲು ಅವಕಾಶ ನೀಡುತ್ತದೆ' ಎಂದಿದ್ದಾರೆ.

ಗಾಂಧೀನಗರದ ಸಂಸದರಾಗಿರುವ ಅಮಿತ್ ಶಾ ಕೂಡಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 'ಭಾರತದ ಆರ್ಥಿಕ ಅಡಿಪಾಯ ಅತ್ಯಂತ ಬಲಶಾಲಿಯಾಗಿದೆ ಹಾಗೂ ನಮ್ಮ ಅರ್ಥವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಮುಂದುವರೆಯುತ್ತಿದೆ. ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಆಡಳಿತ ಸ್ವೀಕರಿಸಿದಾಗ ದೇಶದ ಅರ್ಥ ವ್ಯವಸ್ಥೆ ಬಹಳ ಕೆಟ್ಟದಾಗಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಯಾಗಿವೆ' ಎಂದಿದ್ದಾರೆ. '

ವಿಶ್ವದ ಪ್ರಭಾವಿ ಸಿಇಒಗಳಲ್ಲಿ ಅಂಬಾನಿ, ಶಶಿಶಂಕರ್‌ ಸೇರಿ 10 ಭಾರತೀಯರು!