ನವದೆಹಲಿ[ಜು.30]: ಸಿಇಒ ವರ್ಲ್ಡ್ ನಿಯತಕಾಲಿಕೆ ಬಿಡುಗಡೆ ಮಾಡಿರುವ 2019 ನೇ ಸಾಲಿನ ಜಗತ್ತಿನ ಅತಿ ಪ್ರಭಾವಿ ಸಿಇಒಗಳ 121 ಜನರ ಪಟ್ಟಿಯಲ್ಲಿ ಮುಖೇಶ್‌ ಅಂಬಾನಿ, ಸಂಜೀವ್‌ ಸಿಂಗ್‌, ಶಶಿ ಶಂಕರ್‌ ಸೇರಿದಂತೆ ಭಾರತದ 10 ಸಿಇಒಗಳು ಸ್ಥಾನ ಪಡೆದಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿರುವ ಮುಖೇಶ ಅಂಬಾನಿ ಪಟ್ಟಿಯಲ್ಲಿ 49 ನೇ ಸ್ಥಾನ ಪಡೆದು ದೇಶದ ಸಿಇಒಗಳಲ್ಲಿ ಮೊದಲಿಗರಾದರೆ, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ನ ಅಧ್ಯಕ್ಷ, ಸಿಇಒ ಆಗಿರುವ ಸಂಜೀವ್‌ ಸಿಂಗ್‌ (69), ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸಿಇಒ ಶಶಿ ಶಂಕರ್‌ ಅವರು (77) ನೇ ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿ ವಾಲ್‌ಮಾರ್ಟ್‌ ಸಿಇಒ ಡೌಗ್ಲಾಸ್‌ ಮೆಕ್‌ಮಿಲ್ಲನ್‌ ವಿಶ್ವದಲ್ಲಿಯೇ ಅತಿ ಪ್ರಭಾವಿ ಸಿಇಒ ಆಗಿ ಹೊರಹೊಮ್ಮಿದ್ದಾರೆ. ರಾಯಲ್‌ ಡಚ್‌ ಶೆಲ್ಸ್‌ನ ಬೆನ್‌ ವೆನ್‌ ಬೆರ್ಡೆನ್‌, ಆರ್ಸೆಲರ್‌ ಮಿತ್ತಲ್‌ನ ಸಿಇಒ ಲಕ್ಷ್ಮೇನಿವಾಸ್‌ ಮಿತ್ತಲ್‌, ಸೌದಿ ಅರ್ಮ್ಯೋ ಅಮಿನ್‌ ಎಚ್‌.ನಾಸ್ಸಿರ್‌ ಅನುಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ