Asianet Suvarna News Asianet Suvarna News

ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

ಬಹು ನಿರೀಕ್ಷಿತ ಜಿಯೋ ಫೈಬರ್ ಯೋಜನೆ ಅನಾವರಣ| ವಿನೂತನ ಯೋಜನೆ ಅನಾವರಣಗೊಳಿಸಿದ ಮುಖೇಶ್ ಅಂಬಾನಿ| ಮುಂಬೈನಲ್ಲಿ ನಡೆದ ರಿಲಿಯನ್ಸ್ ಇಂಡಸ್ಟ್ರಿ ಹೂಡಿಕೆದಾರರ ವಾರ್ಷಿಕ ಸಭೆ| ಜಿಯೋ ಫೈಬರ್ ಸೇವೆಗೆ ಚಾಲನೆ ನೀಡಿದ ಮುಖೇಶ್| ರಿಲಯನ್ಸ್ ಇಂಡಸ್ಟ್ರೀಸ್ ತೈಲ ವ್ಯವಹಾರದಲ್ಲಿ ಸೌದಿಯ ತೈಲ ಕಂಪನಿ ಅರಮ್ಕೋಗೆ ಶೇ.20 ರಷ್ಟು ಪಾಲು| ರಿಲಯನ್ಸ್ ಇಂಡಸ್ಟ್ರಿಯಿಂದ ಐತಿಹಾಸಿಕ ವಿದೇಶಿ ಹೂಡಿಕೆಯ ಘೋಷಣೆ|  ವಿವಿಧ ವ್ಯವಹಾರ ಕ್ಷೇತ್ರಗಳಲ್ಲಿ ರಿಲಯನ್ಸ್ ಇಂಡಸ್ಟ್ರಿಯ ಸಾಧನೆ|

Mukesh Ambani Speech At  Reliance Industries Annual General Meeting
Author
Bengaluru, First Published Aug 12, 2019, 3:47 PM IST

ಮುಂಬೈ(ಆ.12): ಪ್ರತಿ ವಾರ್ಷಿಕ ಸಭೆಯಲ್ಲೂ ಹೊಸ ಯೋಜನೆ ಘೋಷಿಸುವುದು ರಿಲಯನ್ಸ್ ಇಂಡಸ್ಟ್ರಿ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ವಾಡಿಕೆ.

ಅದರಂತೆ ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ.

ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಮುಖೇಶ್, ಇದೀಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.

700 ರೂ.ದಿಂದ ಆರಂಭವಾಗಿ 10 ಸಾವಿರ ರೂ.ವರೆಗಿನ ಜಿಯೋ ಫೈಬರ್ ಆಫರ್, ದೇಶದ ಇಂಟರ್ನೆಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲಿದೆ ಎಂದು ಮುಖೇಶ್ ಭರವಸೆ ವ್ಯಕ್ತಡಿಸಿದ್ದಾರೆ.
ಜಿಯೊ ಫಸ್ಟ್ ಡೇ ಫಸ್ಟ್ ಶೋ ಪ್ಲಾನ್ ಅನಾವರಣಗೊಳಿಸಿದ ಮುಖೇಶ್, ಪ್ರೀಮಿಯಂ ಜಿಯೊ ಫೈಬರ್ ಗ್ರಾಹಕರು ಪಡೆಯಲಿರುವ ವಿವಿಧ ಪ್ರಯೋಜನಗಳ ಪಟ್ಟಿ ಮಾಡಿದರು. ಈ ಯೋಜನೆ 2020ಕ್ಕೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಮೈಕ್ರೊಸಾಫ್ಟ್ ಜೊತೆ ರಿಲಯನ್ಸ್ ಸಹಭಾಗಿತ್ವ ಹೊಂದಲಿದ್ದು, ಜಿಯೊ ದೇಶಾದ್ಯಂತ ಡಾಟಾ ಕೇಂದ್ರಗಳನ್ನು ಸ್ಥಾಪಿಸಿದರೆ ಅದಕ್ಕೆ ಮೈಕ್ರೊಸಾಫ್ಟ್ ವೇದಿಕೆ ಒದಗಿಸಲಿದೆ ಎಂದು ಮುಖೇಶ್ ಘೋಷಿಸಿದರು.

ಒಂದು ವರ್ಷದ ಅವಧಿಯಲ್ಲಿ ರಿಲಯನ್ಸ್ ಜಿಯೊ ಭಾರತದಲ್ಲಿ ಅತಿ ದೊಡ್ಡ ಸಂಪರ್ಕ ಜಾಲವನ್ನು ಸ್ಥಾಪಿಸಲಿದ್ದು, 14 ತಂತ್ರಜ್ಞಾನ ಸಂಬಂಧಿ ಸ್ಟಾರ್ಟ್’ಅಪ್’ಗಳ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ.  ಒಂದು ಶತಕೋಟಿ ಮನೆಗಳಿಗೆ ಜಿಯೋ ಸಂಪರ್ಕ ಕಲ್ಪಿಸುವ ವಾಗ್ದಾನ ಮಾಡಿರುವ ಮುಖೇಶ್, ಜಿಯೊ ಫೈಬರ್ 2.4 ದಶಲಕ್ಷ ಸಣ್ಣ, ಮಧ್ಯಮ ಉದ್ಯಮಗಳನ್ನು ಸಶಕ್ತೀಕರಣಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ತಿಂಗಳಿಗೆ 500 ರೂ.ಗಳಲ್ಲಿ ಜಿಯೊ ಅನಿದಿರ್ಷಾವಧಿಯ ಅಂತಾರಾಷ್ಟ್ರೀಯ ಕರೆಯ ಆಫರ್ ನೀಡಲಿದ್ದು, ತಿಂಗಳಿಗೆ 500 ರೂ.ನ ಉಚಿತ ಹೆಚ್ ಡಿ/4ಕೆ ಎಲ್’ಇಡಿ ಟಿವಿ ಆರಂಭಿಕ ಆಫರ್ ಕೂಡ ಜಿಯೋ ಫೈಬರ್ ಗ್ರಾಹಕರಿಗೆ ಲಭ್ಯವಾಗಲಿದೆ.


ಐತಿಹಾಸಿಕ ವಿದೇಶಿ ಹೂಡಿಕೆಯ ಘೋಷಣೆ:

ಇದೇ ವೇಳೆ ಸುಮಾರು 75 ಶತಕೋಟಿ ಡಾಲರ್ ಮೊತ್ತದ (5,32,466 ಕೋಟಿ ರೂ.) ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣಾಗಾರ ಮತ್ತು ರಾಸಾಯನಿಕ ವ್ಯವಹಾರಗಳಲ್ಲಿ, ಶೇ. 20ರಷ್ಟು ಪಾಲನ್ನು ಸೌದಿಯ ತೈಲ ಕಂಪನಿಯಾದ ಅರಮ್ಕೊಗೆ ಮುಖೇಶ್ ಮಾರುವ ಮೂಲಕ ದೇಶದ ಮೊಟ್ಟ ಮೊದಲ ದುಬಾರಿ ವಿದೇಶಿ ಹೂಡಿಕೆಗೆ ಅನುವು ಮಾಡಿ ಕೊಟ್ಟಿದ್ದಾರೆ.

ಒಪ್ಪಂದದ ಭಾಗವಾಗಿ ಸೌದಿ ಕಂಪೆನಿ ಅರಮ್ಕೊ 5 ಲಕ್ಷ ಬ್ಯಾರಲ್ ತೈಲವನ್ನು ಪ್ರತಿದಿನ ಅಥವಾ ವರ್ಷಕ್ಕೆ 25 ದಶಲಕ್ಷ ಟನ್ ಕಚ್ಚಾ ತೈಲವನ್ನು ರಿಲಯನ್ಸ್’ನ ಗುಜರಾತ್ ನ ಜಮ್ ನಗರದಲ್ಲಿರುವ ಅವಳಿ ತೈಲ ಸಂಸ್ಕರಣಾಗಾರಕ್ಕೆ ಪೂರೈಸಲಿದೆ. 

ಅಲ್ಲದೇ ಅಡ್ನೊಕ್-ಅರಮ್ಕೊ ಕಂಪನಿ ಜಂಟಿಯಾಗಿ ಮಹಾರಾಷ್ಟ್ರ ಸರ್ಕಾರಿ ಒಡೆತನದ ತೈಲ ಕಂಪನಿಗಳಲ್ಲಿ ಶೇ.50ರಷ್ಟು ಹೂಡಿಕೆ ಮಾಡಲಿದ್ದು, ಇದರಿಂದ ಭಾರತದ ಇಂಧನ ಬೇಡಿಕೆಗೆ ಅನುಕೂಲವಾಗಲಿದೆ ಎಂದು ಮುಖೇಶ್ ಮಾಹಿತಿ ನೀಡಿದರು.

ಇದಲ್ಲದೇ ಆಹಾರ ಕ್ಷೇತ್ರವೂ ಸೇರಿದಂತೆ ವಿವಿಧ ವ್ಯವಹಾರ ಕ್ಷೇತ್ರಗಳಲ್ಲಿ ರಿಲಯನ್ಸ್ ಇಂಡಸ್ಟ್ರಿಯ ಸಾಧನೆಯನ್ನು ಮುಖೇಶ್ ಹೂಡಿಕೆದಾರರ ವಾರ್ಷಿಕ ಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು.

Follow Us:
Download App:
  • android
  • ios