ನವದೆಹಲಿ(ನ.08): ಕೇಂದ್ರ ಸರ್ಕಾರ ಇಂದು ಅಪನಗದೀಕರಣದ ಮೂರನೇ ವರ್ಷಾಚರಣೆ ಮಾಡುತ್ತಿದೆ. ದೇಶದ ಅರ್ಥ ವ್ಯವಸ್ಥೆಯ ಪಥ ಬದಲಿಸಿದ ಅಪನಗದೀಕರಣದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.

ತೈಲಬೆಲೆ ಎಫೆಕ್ಟ್: ಈ ವರ್ಷ ದೇಶದ ಜಿಡಿಪಿ ಕುಸಿತ?: ಮೂಡಿ ವರದಿ

ಈ ಮದ್ಯೆ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಅಮೆರಿಕದ ವಾಣಿಜ್ಯ ಹಾಗೂ ಹಣಕಾಸು ಸೇವಾ ಸಂಸ್ಥೆ ಮೂಡಿ ನಕಾರಾತ್ಮಕ ವರದಿ ಬಹಿಂಗಪಡಿಸಿದೆ. ದೇಶದ ಅರ್ಥಿಕ ಕುಸಿತವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದು, ದೇಶದ ಕ್ರೆಡಿಟ್ ದರ ಋಣಾತ್ಮಕವಾಗಿದೆ ಎಂದು ಮೂಡಿ ಇನ್ವೆಸ್ಟರ್ ಸರ್ವೀಸ್ ವರದಿ ತಿಳಿಸಿದೆ.

ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದ್ದು, ಆರ್ಥಿಕ ದೌರ್ಬಲ್ಯದಿಂದ ಹೊರ ಬರುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಮೂಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದುರ್ಬಲ ಆರ್ಥಿಕ ನೀತಿಗಳಿಂದಾಗಿ ದೇಶದ ಸಾಲದ ಹೊರೆ ಹೆಚ್ಚಾಗಿದ್ದು, ಇದು ಅಭಿವೃದ್ಧಿಗೆ ಮಾರಕ ಎಂದು ಮೂಡಿ ಅಭಿಪ್ರಾಯಪಟ್ಟಿದೆ.

ಮುಂದಿನ ವರ್ಷ ಜಿಡಿಪಿ ಗತಿ?: ಮೋದಿ ಮೂಡ್ ಚೆನ್ನಾಗಿದೆ ಎಂದ ಮೂಡೀಸ್!

ಕಳೆದ ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ ಭಾರತದ ಸಾಲದ ಹೊರೆ ಶೇ.5ರಷ್ಟು ಹೆಚ್ಚಳವಾಗಿದ್ದು, 2013ರಿಂದ ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆ ದಾಖಲಾಗಿದೆ ಎಂದು ಮೂಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾವಣೆಗೂ ಮೊದಲೇ ಮೋದಿಗೆ ‘ಮೂಡಿ’ ಹೊಡೆತ: ಇಲ್ಲ ಜಿಡಿಪಿ ನೆಗೆತ!

ಜಾಗತಿಕ ವಾಣಿಜ್ಯ ಸಂಘರ್ಷದ ಪರಿಣಾಮವಾಗಿ ಗ್ರಾಹಕರ ಬೇಡಿಕೆ ಮತ್ತು ಸರ್ಕಾರದ ವೆಚ್ಚ ಕಡಿಮೆಯಾಗಿದ್ದು, ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗಿದೆ ಎಂದು ಮೂಡಿ ಹೇಳಿದೆ.

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!