ಪ್ರಧಾನಿ ಮೋದಿ ಸರ್ಕಾರಕ್ಕೆ ಮೂಡಿ ಹೊಡೆತ! ಜಿಡಿಪಿ ಬೆಳವಣಿಗೆ ಕುಂಠಿತವಾಗಲಿದೆ ಎಂದ ಮೂಡಿ! 2019-20ರ ಜಿಡಿಪಿ ಬೆಳವಣಿಗೆ ಕುಂಠಿತವಾಗಲಿದೆ ಎಂದ ಮೂಡಿ! ಹೂಡಿಕೆ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಂಭವ ಹೆಚ್ಚು ಎಂದ ಮೂಡಿ!ಮೂಡಿ ಪ್ರಕಾರ 2019-20ರಲ್ಲಿ ಶೇ.7.3ರಷ್ಟು ಜಿಡಿಪಿ ಬೆಳವಣಿಗೆ
ನವದೆಹಲಿ(ನ.8): 2019ರ ಚುನಾವಣೆಗೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೊಸ ಸಂಕಟವೊಂದು ಎದುರಾಗಿದೆ. ಮೂಡಿ ತನ್ನ ಆರ್ಥಿಕ ವರದಿ ಬಿಡುಗಡೆ ಮಾಡಿದ್ದು, 2019ರಲ್ಲಿ ಭಾರತದ ಜಿಡಿಪಿ ನಿರೀಕ್ಷಿತ ಗಡಿ ದಾಟುವುದಿಲ್ಲ ಎಂದು ತಿಳಿಸಿದೆ.
ಮೂಡಿಯ ಹೂಡಿಕೆದಾರರ ಸೇವಾ ವರದಿಯನ್ವಯ 2019ರಲ್ಲಿ ಭಾರತದ ಜಿಡಿಪಿ ಶೇ.7.3ರಷ್ಟು ಇರಲಿದೆ ಎಂದು ಹೇಳಿದೆ. ಈ ಮೊದಲು ದೇಶದ ಜಿಡಿಪಿ ಶೇ.7.4ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು.
ಪ್ರಮುಖವಾಗಿ ಹೂಡಿಕೆ ಕ್ಷೇತ್ರದಲ್ಲಿ ಬಡ್ಡಿದರ ಹೆಚ್ಚಳ ಮತ್ತು ನಾಣ್ಯ ಅಮಾನ್ಯೀಕರಣದ ಬಳಿಕದ ಮಂದಗತಿಯ ಆರ್ಥಿಕ ಬೆಳವಣಿಗೆ ಜಿಡಿಪಿ ವೃದ್ಧಿಯನ್ನು ತಡೆಗಟ್ಟಲಿದೆ ಎಂದು ಅಂದಾಜಿಸಲಾಗಿದೆ.
ಆದರೂ 2018ರಲ್ಲಿ ಶೇ.7.4ರಷ್ಟು ಜಿಡಿಪಿ ಬೆಳವಣಿಗೆಯನ್ನು ಕಾಪಾಡಿಕೊಳ್ಳಲಿರುವ ಭಾರತ, 2019-20ರ ಆರ್ಥಿಕ ವರ್ಷದಲ್ಲಿ ಶೇ.7.3ರಷ್ಟು ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ಮೂಡಿ ವರದಿಯಲ್ಲಿ ತಿಳಿಸಿದೆ.
