ತೈಲಬೆಲೆ ಎಫೆಕ್ಟ್: ಈ ವರ್ಷ ದೇಶದ ಜಿಡಿಪಿ ಕುಸಿತ?: ಮೂಡಿ ವರದಿ

ಏರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಿಂದಾಗಿ ಈ ಬಾರಿ ದೇಶದ ಅಭಿವೃದ್ಧಿ ದರ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ 2018ರಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಶೇ.7.5 ಇರಲಿದೆ ಎಂದು ಹೇಳಿದ್ದ ಜಾಗತಿಕ ರೇಟಿಂಗ್‌ ಏಜೆನ್ಸಿ ಮೂಡಿ, ಇದೀಗ ಅದನ್ನು ಶೇ.7.3ಕ್ಕೆ ಇಳಿಕೆ ಮಾಡಿದೆ.

Moodys cuts Indias GDP forecast to 7 3 percent from 7 5 percent

ನವದೆಹಲಿ: ಏರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಿಂದಾಗಿ ಈ ಬಾರಿ ದೇಶದ ಅಭಿವೃದ್ಧಿ ದರ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ 2018ರಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಶೇ.7.5 ಇರಲಿದೆ ಎಂದು ಹೇಳಿದ್ದ ಜಾಗತಿಕ ರೇಟಿಂಗ್‌ ಏಜೆನ್ಸಿ ಮೂಡಿ, ಇದೀಗ ಅದನ್ನು ಶೇ.7.3ಕ್ಕೆ ಇಳಿಕೆ ಮಾಡಿದೆ.

ಈ ಇಳಿಕೆಗೆ ತೈಲ ಬೆಲೆಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ಮೂಡಿಯು ಅಧಿಕೃತವಾಗಿ ವಿತ್ತೀಯ ಕೊರತೆಯ ಕಾರಣ ನೀಡಿದೆ. ಇನ್ನು, 2019ರಲ್ಲಿ ದೇಶದ ಜಿಡಿಪಿ ಅಭಿವೃದ್ಧಿ ಶೇ.7.5ರಷ್ಟಾಗಲಿದೆ ಎಂಬ ಈ ಹಿಂದಿನ ಮುನ್ಸೂಚನೆಯನ್ನು ಹಾಗೇ ಉಳಿಸಿಕೊಂಡಿದೆ.

ಕಳೆದ ನವೆಂಬರ್‌ನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದ ಅಮೆರಿಕ ಮೂಲದ ಮೂಡಿ ಏಜೆನ್ಸಿ, ಭಾರತದ ರೇಟಿಂಗ್‌ ಅನ್ನು ಬಿಎಎ3 ದಿಂದ ಬಿಎಎ2ಗೆ ಹೆಚ್ಚಿಸಿತ್ತು. ಹಾಗೆಯೇ, ದೇಶದ ಆರ್ಥಿಕತೆ ಸ್ಥಿರವಾಗಿದೆ ಎಂಬುದರ ಬದಲು ಧನಾತ್ಮಕವಾಗಿದೆ ಎಂದೂ ಮುನ್ಸೂಚನೆ ನೀಡಿತ್ತು. ಅದರಿಂದಾಗಿ ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳಿಗೆ ಬಹುದೊಡ್ಡ ಪ್ರೋತ್ಸಾಹ ದೊರಕಿತ್ತು. ಆದರೆ, ಈಗ ಅದೇ ಏಜೆನ್ಸಿ ತನ್ನ ರೇಟಿಂಗ್‌ ಇಳಿಸಿರುವುದು ಬಹುದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇನ್ನೊಂದು ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿಯಾಗಿರುವ ಫಿಚ್‌ ಕೂಡ ದೇಶದ ಜಿಡಿಪಿ ಅಭಿವೃದ್ಧಿ ದರದ ಮುನ್ಸೂಚನೆಯನ್ನು ಏರಿಕೆ ಮಾಡಿಲ್ಲ. 2019ರಲ್ಲಿ ಶೇ.7.3ರಷ್ಟುಹಾಗೂ 2020ರಲ್ಲಿ ಶೇ.7.5ರಷ್ಟುಭಾರತದ ಜಿಡಿಪಿ ಅಭಿವೃದ್ಧಿಯಾಗಲಿದೆ ಎಂದು ಅದು ಭವಿಷ್ಯ ನುಡಿದಿದೆ.
 

Latest Videos
Follow Us:
Download App:
  • android
  • ios