ಬಡತನದಿಂದ ಬೆಳೆದ ರೇಣುಕಾ ಆರಾಧ್ಯ, ಭಿಕ್ಷಾಟನೆಯಿಂದ ಜೀವನ ಆರಂಭಿಸಿ, ಛಲಬಿಡದೆ ದುಡಿದು ಇಂದು 40 ಕೋಟಿ ರೂ. ವಹಿವಾಟಿನ 'ಪ್ರವಾಸಿ ಕ್ಯಾಬ್ಸ್' ಕಂಪನಿಯ ಮಾಲೀಕರಾಗಿದ್ದಾರೆ.500 ಕ್ಕೂ ಹೆಚ್ಚು ಕ್ಯಾಬ್‌ಗಳನ್ನು ಹೊಂದಿ, 150 ಜನರಿಗೆ ಉದ್ಯೋಗ ನೀಡಿರುವ ಇವರ ಯಶೋಗಾಥೆ ಸ್ಫೂರ್ತಿದಾಯಕ.
ನಮ್ಮ ಜೀವನ ನಾವು ಅಂದುಕೊಂಡಂತೆ ಇರೋದೇ ಇಲ್ಲ. ನಾವು ಒಂದು ಅಂದುಕೊಂಡರೆ, ಅಲ್ಲಿ ಇನ್ನೇನೋ ಆಗುತ್ತೆ. ಕೆಲವೊಮ್ಮೆ ಒಂದು ಕಾಲದಲ್ಲಿ ಬಡವರಾಗಿದ್ದೋರು, ಶ್ರೀಮಂತರಾಗಬಹುದು. ಅಥವಾ ಶ್ರೀಮಂತರಾಗಿದ್ದೋರು ಬಡವರೂ ಆಗಬಹುದು. ಎಲ್ಲವೂ ನಮ್ಮ ಕೈಯಲ್ಲೇ ಇದೆ. ನಾವು ಧೈರ್ಯದಿಂದ ಹೆಜ್ಜೆ ಮುಂದಿಟ್ಟರೆ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವಾಗುತ್ತೆ. ಹಿಂದೊಮ್ಮೆ ಹಣ ಇಲ್ಲದೇ ಪರದಾಡುತ್ತಿದ್ದವರು ಇವತ್ತು ಕೊಟ್ಯಾಧಿಪತಿ ಆಗಿರುವ ಘಟನೆಗಳು ಎಷ್ಟೋ ಇವೆ. ಅಂತದ್ದೇ ಒಂದು ಘಟನೆಯ ಬಗ್ಗೆ ವರದಿ ಇಲ್ಲಿದೆ.
ಬಡತನದಿಂದ ಕೋಟ್ಯಾಧಿಪತಿಗಳಾದ ಭಾರತದ 5 ಕ್ರಿಕೆಟಿಗರು!
ಹಿಂದೊಮ್ಮೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದ, ಭಿಕ್ಷೆ ಬೇಡಿ ಜೀವನ (begged for life) ಮಾಡುತ್ತಿದ್ದ ಯುವಕ ರೇಣುಕಾ ಆರಾಧ್ಯ ಅವರ ಸ್ಪೂರ್ತಿದಾಯಕ ಜರ್ನಿ (inspirational journey) ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಬೆಂಗಳೂರು ಬಳಿಯ ಬಡ ಕುಟುಂಬದಲ್ಲಿ ಜನಿಸಿದ ರೇಣುಕಾ ಅವರ ಆರಂಭಿಕ ಜೀವನವನ್ನು ಕಷ್ಟಗಳಿಂದ ಕಳೆದಿದ್ದರು. 10 ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ, ಅವರು ಆಹಾರಕ್ಕಾಗಿ ಭಿಕ್ಷೆ ಬೇಡಬೇಕಾಯಿತು, ಅಕ್ಕಿ, ಬೇಳೆಕಾಳುಗಳು ಮತ್ತು ಹಿಟ್ಟನ್ನು ಹುಡುಕುತ್ತಾ ಮನೆ ಮನೆಗೆ ಹೋಗಬೇಕಾಯಿತು. ಇಷ್ಟೇಲ್ಲಾ ಕಷ್ಟಗಳನ್ನು ಅನುಭವಿಸಿದರೂ ಅವರು ಯಾವತ್ತೂ ತನ್ನ ಕನಸುಗಳನ್ನು ದೂರ ಮಾಡಲೇ ಇಲ್ಲ. 20 ನೇ ವಯಸ್ಸಿನಲ್ಲಿ, ಕುಟುಂಬದ ಜವಾಬ್ದಾರಿಗಳು ಹೆಚ್ಚು ಶ್ರಮಿಸಲು ಪ್ರೇರೇಪಿಸುತ್ತದೆ ಎನ್ನುವ ಭರವಸೆಯ ಜೊತೆಗೆ ಅವರು ವೈವಾಹಿಕ ಜೀವನಕ್ಕೆ (marriage life) ಕಾಲಿಟ್ಟರು. ಹಲವು ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್, ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡಿದ್ದ ಅವರು, ಸೂಟ್ಕೇಸ್ ಕವರ್ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು. ಪ್ರತಿಯೊಂದು ವೈಫಲ್ಯವು ಅವರಿಗೆ ಜೀವನದಲ್ಲಿ ದೊಡ್ಡ ದೊಡ್ಡ ಪಾಠಗಳನ್ನು ಕಲಿಸಿತು. ಅಷ್ಟೇ ಅಲ್ಲ, ಹೊಸ ಹೊಸ ಕೆಲಸಗಳನ್ನು ಹುಡುಕಾಟವನ್ನು ಸಹ ಕಲಿಸಿತು.
14 ವರ್ಷ ಕ್ರಿಯೇಟಿವ್ ಮ್ಯಾನೇಜರ್ ಆಗಿ ದುಡಿದ ವ್ಯಕ್ತಿ ಈಗ ಆಟೋ ಡ್ರೈವರ್!
ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ ರೇಣುಕಾ ಆರಾಧ್ಯ (Renuka Aradhya) ಬಳಿಕ ಡ್ರೈವಿಂಗ್ ಕಲಿತು ಟ್ರಾವೆಲ್ ಏಜೆನ್ಸಿಗೆ ಸೇರಿದರು, ಅಲ್ಲಿ ಅವರು ಸಂಬಳವನ್ನು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದ ಬೇಕಾದಷ್ಟು ಟಿಪ್ಸ್ ಕೂಡ ಗಳಿಸಿದರು. ನಾಲ್ಕು ವರ್ಷಗಳ ನಂತರ, ಅವರು ಜೀವನದಲ್ಲಿ ಎತ್ತರಕ್ಕೆ ಜಿಗಿಯುವ ಪ್ರಯತ್ನ ಮಾಡಿದರು, ಅದರ ಫಲವಾಗಿ ಕೇವಲ ಒಂದು ಕಾರು ಮತ್ತು ಬ್ಯಾಂಕ್ ನಿಂದ ಪಡೆದ ಸಾಲದಿಂದ ತಮ್ಮದೇ ಆದ ಪ್ರವಾಸಿ ಕ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (Pravasi Cabs Private Limited) ಎಂಬ ಕಂಪನಿಯನ್ನು ಸ್ಥಾಪಿಸಿದರು. ಒಂದು ವರ್ಷದೊಳಗೆ, ಅವರು ತಮ್ಮ ಕಂಪನಿಯನ್ನು ವಿಸ್ತರಿಸಿದರು. ಅದಕ್ಕಾಗಿ ಕೇವಲ 6 ಲಕ್ಷ ರೂ.ಗಳಿಗೆ 35 ಕ್ಯಾಬ್ಗಳನ್ನು ಹೊಂದಿರುವ ಕಂಪನಿಯನ್ನು ಸ್ವಾಧೀನಪಡಿಸಿಕೊಂಡರು. ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು.
ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...
ಇಂದು, ಪ್ರವಾಸಿ ಕ್ಯಾಬ್ಸ್ 40 ಕೋಟಿ ರೂ.ಗಳ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರವಾಗಿದ್ದು, 150 ಜನರಿಗೆ ಉದ್ಯೋಗ ನೀಡಿದೆ ಮತ್ತು 500 ಕ್ಕೂ ಹೆಚ್ಚು ಕ್ಯಾಬ್ ಗಳನ್ನು ನಿರ್ವಹಿಸುತ್ತಿದೆ. ಆಹಾರಕ್ಕಾಗಿ ಭಿಕ್ಷೆ ಬೇಡುವುದರಿಂದ ಹಿಡಿದು ಅಮೆಜಾನ್, ವಾಲ್ಮಾರ್ಟ್ ಮತ್ತು ಜನರಲ್ ಮೋಟಾರ್ಸ್ನಂತಹ ದೈತ್ಯ ಕಂಪನಿಗಳೊಂದಿಗೆ ಪಾರ್ಟ್ನರ್ ಶಿಪ್ ಮಾಡಿಕೊಳ್ಳುವವರೆಗೆ ರೇಣುಕಾ ಆರಾಧ್ಯಾ ಅವರ ಪ್ರಯಾಣವು ಅವರ ಕಠಿಣ ಪರಿಶ್ರಮ (hardwork) ಹಾಗೂ ದೃಢ ನಿಶ್ಚಯಕ್ಕೆ ಸಾಕ್ಷಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಕಂಪನಿಯನ್ನು 100ಕೋಟಿ ರೂ.ಗೆ ವಿಸ್ತರಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಜೀವನವು ಎಷ್ಟೇ ಕಠಿಣವಾಗಿದ್ದರೂ, ಅಚಲ ದೃಢನಿಶ್ಚಯ ಮತ್ತು ಅವಿರತ ಪ್ರಯತ್ನ ಇದ್ದರೆ, ದೊಡ್ಡದಾದ ಯಶಸ್ಸು ನಿಮ್ಮದಾಗುತ್ತೆ ಎಂಬುದಕ್ಕೆ ರೇಣುಕಾ ಆರಾಧ್ಯ ಅವರ ಕಥೆ ಸಾಕ್ಷಿಯಾಗಿದೆ.
