ಬಡತನದಿಂದ ಕೋಟ್ಯಾಧಿಪತಿಗಳಾದ ಭಾರತದ 5 ಕ್ರಿಕೆಟಿಗರು!
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದ್ರೆ ಆಟಗಾರರಿಗೆ ಹಣದ ಹೊಳೆ ಹರಿಯುತ್ತೆ. ಐಪಿಎಲ್ ಮೂಲಕವೂ ಭಾರತೀಯ ಕ್ರಿಕೆಟಿಗರು ಚೆನ್ನಾಗಿ ದುಡ್ಡು ಮಾಡ್ತಾರೆ. ಬಡತನದಿಂದ ಕೋಟ್ಯಾಧಿಪತಿಗಳಾದ ಕ್ರಿಕೆಟಿಗರ ಬಗ್ಗೆ ತಿಳಿಯಿರಿ.
1. ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ ಇವತ್ತು ವಿಶ್ವದಲ್ಲೇ ಫೇಮಸ್ ಬೌಲರ್. 62 ಕೋಟಿ ಆಸ್ತಿ ಇರೋ ಇವ್ರ ಬಡತನದ ಬಗ್ಗೆ ನಿಮಗೆ ಗೊತ್ತಾ? ಟೀ ಶರ್ಟ್, ಶೂಸ್ ಗೆಲ್ಲಾ ಕಾಸಿಲ್ಲದ ಪರಿಸ್ಥಿತಿಯಿಂದ ಇವತ್ತು ಕೋಟ್ಯಾಧಿಪತಿಯಾಗಿದ್ದಾರೆ.
2. ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ ಭಾರತ ತಂಡದ ಪ್ರಮುಖ ವೇಗಿ. 57 ಕೋಟಿ ಆಸ್ತಿ ಇರೋ ಇವರ ತಂದೆ ರಿಕ್ಷಾ ಓಡಿಸುತ್ತಿದ್ರು. ಮಗನ ಕ್ರಿಕೆಟ್ ಕನಸಿಗಾಗಿ ಎಲ್ಲವನ್ನೂ ಒತ್ತೆ ಇಟ್ಟಿದ್ರು. ಇಂದು ಮಗ ದೇಶಕ್ಕೆ ಕೀರ್ತಿ ತಂದಿದ್ದಾನೆ.
3. ಟಿ. ನಟರಾಜನ್
ಟಿ. ನಟರಾಜನ್ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿತ್ತು. ಆದ್ರೆ ಹೆಚ್ಚು ಕಾಲ ಉಳಿಸಿಕೊಳ್ಳಲಾಗಲಿಲ್ಲ. ಐಪಿಎಲ್, ದೇಶಿ ಕ್ರಿಕೆಟ್ ಮೂಲಕ ಚೆನ್ನಾಗಿ ದುಡ್ಡು ಮಾಡ್ತಾರೆ. 14 ಕೋಟಿ ಆಸ್ತಿ ಇರೋ ಇವರ ಕುಟುಂಬದಲ್ಲಿ 5 ಮಕ್ಕಳು. ತಂದೆಗೆ ಸಾಕಲು ಕಷ್ಟವಾಗಿತ್ತು.
4. ರವೀಂದ್ರ ಜಡೇಜ
ರವೀಂದ್ರ ಜಡೇಜ ಭಾರತೀಯ ಕ್ರಿಕೆಟ್ ನ ದೊಡ್ಡ ಹೆಸರು. ಕೋಟಿ ಕೋಟಿ ಬೆಲೆಬಾಳುವ ಬಂಗಲೆ, ದುಬಾರಿ ಮನೆ ಇವರದ್ದು. ಈಗ 120 ಕೋಟಿ ಆಸ್ತಿ ಇರೋ ಇವರ ತಂದೆ ಗಾರ್ಡ್, ತಾಯಿ ನರ್ಸ್ ಆಗಿದ್ದರು. ಇಂದು ಕ್ರಿಕೆಟ್ ಜಗತ್ತನ್ನೇ ಆಳ್ತಿದ್ದಾರೆ.
5. ಹಾರ್ದಿಕ್-ಕುನಾಲ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಭಾರತ ತಂಡದ ಪ್ರಮುಖ ಆಲ್ ರೌಂಡರ್. ಸಹೋದರ ಕುನಾಲ್ ಕೂಡ ಟೀಮ್ ಇಂಡಿಯಾ ಪರ ಆಡಿದ್ದಾರೆ. ಹಾರ್ದಿಕ್ 92 ಕೋಟಿ, ಕುನಾಲ್ 60 ಕೋಟಿ ಆಸ್ತಿ ಒಡೆಯರು. ಒಂದು ಕಾಲದಲ್ಲಿ ಊಟಕ್ಕೂ ಕಷ್ಟಪಡುತ್ತಿದ್ದ ಇವರಿಂದು ದೊಡ್ಡ ಸೆಲೆಬ್ರಿಟಿಗಳು.