14 ವರ್ಷಗಳ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ್ದ ಕಮಲೇಶ್ ಕಾಮ್ಟೇಕರ್, ಕೆಲಸ ಕಳೆದುಕೊಂಡ ನಂತರ ಹೊಸ ಉದ್ಯೋಗ ಹುಡುಕುವಲ್ಲಿ ಎದುರಿಸಿದ ಸವಾಲುಗಳನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗ ಸಿಗದ ಕಾರಣ ಅವರು ಆಟೋ ಚಾಲಕರಾಗಿ ವೃತ್ತಿ ಬದಲಾಯಿಸಿದ್ದಾರೆ.

ಮುಂಬೈ (ಜ.7): ಗ್ರಾಫಿಕ್‌ ಡಿಸೈನರ್‌ ಆಗಿ 14 ವರ್ಷಗಳ ವೃತ್ತಿಪರ ಅನುಭವ ಇರುವ ಕಮಲೇಶ್‌ ಕಾಮ್ಟೇಕರ್‌ ಎನ್ನುವ ವ್ಯಕ್ತಿ ಇತ್ತೀಚೆಗೆ ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿರುವ ಅವರ ಕಥೆ ಸಾಕಷ್ಟು ವೈರಲ್‌ ಆಗಿದೆ. ಕೆಲಸದಿಂದ ತಮ್ಮನ್ನು ತೆಗೆದುಹಾಕಿದ ಬಳಿಕ, ಹೊಸ ಕೆಲಸಕ್ಕಾಗಿ ತಾವು ಎದುರಿಸಿದ ಕಷ್ಟಗಳನ್ನು ವಿವರವಾಗಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ ಕ್ವಿಕ್‌ ಆಗಿ ವೈರಲ್‌ ಆಗಿದ್ದು, ದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆಗಳ ಬಗ್ಗೆ ವಾಸ್ತವ ಸ್ಥಿತಿಗತಿಗಳನ್ನು ತೆರೆದಿಟ್ಟಿದೆ. ಕೊನೆಗೆ ಕಮಲೇಶ್‌ ದೊಡ್ಡ ನಿರ್ಧಾರವನ್ನು ಮಾಡಿದ್ದು, ಸಂಪೂರ್ಣವಾಗಿ ಭಿನ್ನವಾಗಿರುವ ವೃತ್ತಿ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಹೌದು.. 14 ವರ್ಷಗಳ ಕಾಲ ದೊಡ್ಡ ಕಂಪನಿಯೊಂದರಲ್ಲಿ ಸಹಾಯಕ ಕ್ರಿಯೆಟಿವ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದ ಕಮಲೇಶ್‌ ಕಾಮ್ಟೇಕರ್‌ ಈಗ ಆಟೋ ಡ್ರೈವರ್‌.

ಕೆಲಸದಿಂದ ತೆಗೆದುಹಾಕಿದ ಬಳಿಕ ಹೊಸ ಕೆಲಸಕ್ಕಾಗಿ ಕಮಲೇಶ್‌ ಕಾಮ್ಟೇಕರ್‌ ಎದುರಿಸದ ಸವಾಲುಗಳು ಬೆಡ್ಡದಷ್ಟು. ತಮ್ಮ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಕಂಪನಿಗಳಿಗೆ ರಾಶಿ ರಾಶಿ ರೆಸ್ಯೂಮ್‌ಗಳನ್ನೂ ಕಳಿಸಿದ್ದರೂ, ಎಲ್ಲರಿಂದ ಬಂದಿದ್ದು ರಿಜೆಕ್ಷನ್‌ ಮಾತ್ರ. 'ನಾನು ರೆಫರಲ್‌ ಮಾಡುವಂತೆ ನನ್ನ ಎಲ್ಲಾ ಫ್ರೆಂಡ್ಸ್‌ಗಳ ಬಳಿ ಕೇಳಿಕೊಂಡಿದ್ದೆ. ಆದರೆ, ಅದರಲ್ಲೂ ನಾನು ಯಶಸ್ಸು ಕಾಣಲಿಲ್ಲ. ಲಿಂಕ್ಡಿನ್‌ನಲ್ಲಿ ಸಿಕ್ಕ ಅವಕಾಶಕ್ಕೆಲ್ಲಾ ನಾನು ಅಪ್ಲೈ ಮಾಡಿದ್ದೆ. ಆದರೆ, ನಿರಂತರವಾಗಿ ನನ್ನ ಅಪ್ಲಿಕೇಶನ್‌ಗಳು ರಿಜೆಕ್ಟ್‌ ಆಗುತ್ತಿದ್ದವು' ಎಂದು ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೇರೆ ಕೆಲಸ ಪಡೆಯುವ ನನ್ನ ಹಾದಿಯಲ್ಲಿ ದೊಡ್ಡ ಅಡೆತಡೆಯಾಗಿ ಕಂಡಿದ್ದು, ವೇತನದ ನಿರೀಕ್ಷೆ. ಹೆಚ್ಚಿನ ಕಂಪನಿಗಳು ನನಗೆ ಕೆಲಸ ಕೊಡಲು ನಿರಾಕರಿಸಿದ್ದಕ್ಕೆ ಕಾರಣ ಅವರ ಬಜೆಟ್‌ ಆಗಿತ್ತು. ಅವರ ಪ್ರತಿಕ್ರಿಯೆಗಳೇ ನನಗೆ ಭಿನ್ನ ದೃಷ್ಟಿಕೋನದಲ್ಲಿ ಯೋಚನೆ ಮಾಡುವಂತೆ ಮಾಡಿತು.'ಸ್ಯಾಲರಿ ವಿಚಾರದ ಫೀಡ್‌ಬ್ಯಾಕ್‌ ಬಂದ ಮೇಲೆ, ನಾನೂ ಯೋಚನೆ ಮಾಡಿದೆ. ನನ್ನದೇ ಆದ ಬ್ಯುಸಿನೆಸ್‌ಅನ್ನು ಯಾಕೆ ಆರಂಭ ಮಾಡಬಾರದು ಅಂತಾ. ಕಡಿ ಹಣಕ್ಕೆ ನನಗಾಗಿಯೇ ನಾನು ದುಡಿಯಬಹುದು ಅನ್ನೋ ಪ್ಲ್ಯಾನ್‌ ಬಂತು. ಬೇರೆಯವರ ಅಡಿಯಲ್ಲಿ ಇನ್ಯಾಕೆ ಕೆಲಸ ಮಾಡಬೇಕು ಅಂತಾ ಯೋಚನೆ ಮಾಡಿದೆ. ಇದರಿಂದ ನನಗಾಗಿ ಒಂದಷ್ಟು ಆದಾಯ ಬರುತ್ತದೆ' ಎಂದು ನಿರ್ಧಾರ ಮಾಡಿದೆ.

ಇಲ್ಲಿಯವರೆಗೂ ಗ್ರಾಫಿಕ್‌ ಡಿಸೈನ್‌ನಲ್ಲಿ ಕೆಲಸ ಮಾಡಿದ್ದ ನಾನು, ಆ ಬಳಿಕ ಕಂಪ್ಲೀಟ್‌ ಆಗಿ ಬೇರೆಯದೇ ರೀತಿಯಲ್ಲಿ ಯೋಜನೆ ಮಾಡಿದೆ. ನನ್ನ ಡಿಸೈನಿಂಗ್‌ ಕೌಶಲ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ನಿರ್ಧಾರ ಮಾಡಿ, ಆಟೋರಿಕ್ಷಾ ಓಡಿಸಲು ನಿರ್ಧರಿಸಿದೆ. ನನ್ನ ಹೊಸ ಬ್ಯುಸಿನೆಸ್‌ಗೆ ನೀವೂ ಆಶೀರ್ವಾದ ಮಾಡಿ' ಎಂದು ಅವರು ಹೇಳಿಕೊಂಡಿದ್ದಾರೆ.

ಕಾಮ್ಟೇಕರ್‌ ಅವರ ನಿರ್ಧಾರಕ್ಕೆ ಲಿಂಕ್ಡಿನ್‌ ಯೂಸರ್‌ಗಳು ಮರುಕಪಟ್ಟಿದ್ದಾರೆ. ಇನ್ನೂ ಕೆಲವರು ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡಿದ್ದಾರೆ. ನಿಮ್ಮಂಥ ಅನುಭವಿ ಟ್ಯಾಲೆಂಟ್‌ಗಳು, ಗುರುತಿಸಿಕೊಳ್ಳದೆ ತೆರೆಮರೆಗೆ ಸರಿಯುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಆದರೆ, ನಿಮ್ಮ ಹೊಸ ಜರ್ನಿಗೆ ಶುಭವಾಗಲಿ ಎಂದು ಬರೆದಿದ್ದಾರೆ. ಎಂಥಾ ಧೈರ್ಯಶಾಲಿ ನಿರ್ಧಾರ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಕಮಲೇಶ್‌ ಎಂದು ಅವರು ಬರೆದಿದ್ದಾರೆ.

'ಚಿಗುರಿತು ಎಲೆಗಳು..' ಬಾಹ್ಯಾಕಾಶದಲ್ಲಿ ಅಲಸಂದೆ ಗಿಡ ಬೆಳೆದ ಇಸ್ರೋ!

ದೇಶದ ಕಂಪನಿಗಳು ಅನುಭವಿಗೆ ಬೆಲೆ ಕೊಡಲು ಸಾಧ್ಯವಾಗದೇ ಇರುವಷ್ಟರ ಮಟ್ಟಿಗೆ ಇಳಿದಿರುವುದು ಭಯ ಮೂಡಿಸಿದೆ. ಇದು ಅನೇಕ ನುರಿತ ವೃತ್ತಿಪರರಿಗೆ ದುಃಖದ ವಾಸ್ತವವಾಗಿದೆ. ಇದು ಬದಲಾವಣೆಯನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ, ”ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Bengaluru: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಕೋಲ್ಕತ್ತದಿಂದ ಹೊರಟ ಯೆಲ್ಲೋ ಲೈನ್‌ನ ಮೊದಲ ಡ್ರೈವರ್‌ಲೆಸ್‌ ಟ್ರೇನ್‌